Chitradurga news|nammajana.com| 13-7-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ಸಹಾಯಕ ಸೆಕ್ಷನ್ ಆಫೀಸರ್, ಲೆಕ್ಕ ಪರಿಶೋಧನಾ ಅಧಿಕಾರಿ, (Agniveera recruitment) ಲೆಕ್ಕಪತ್ರ ಅಧಿಕಾರಿ, ಆದಾಯ ತೆರಿಗೆ , ಕೇಂದ್ರ ಅಬಕಾರಿ ಮತ್ತು ಸಿಬಿಐನಲ್ಲಿ ಇನ್ಸ್ಪೆಕ್ಟರ್, ಇಡಿ ನಲ್ಲಿ ಎಇಓ ಮತ್ತು ಸಿಬಿಐನಲ್ಲಿ ಸಬ್ ಇನ್ಸ್ಪೆಕ್ಟರ್, ಅಂಚೆ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಹಿರಿಯ ಸಕ್ರೇಟರಿಯೇಟ್ ಸಹಾಯಕ, ಅಪ್ಪರ್ ಡಿವಿಜನ್ ಗುಮಾಸ್ತ, ಅಂಚೆ ಇಲಾಖೆ ಸಹಾಯಕ ಮತ್ತು ವಿಂಗಡಣೆ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ಜುಲೈ 24 ಕೊನೆ ದಿನ (Agniveera recruitment)
ಅರ್ಜಿ ಸಲ್ಲಿಸಲು ಇದೇ ಜುಲೈ 24 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪದವಿ ಹೊಂದಿದ್ದು, ಕನಿಷ್ಠ 18 ರಿಂದ 32 ವರ್ಷಗಳು ವಯೋಮಿತಿ (Agniveera recruitment) ಹೊಂದಿರಬೇಕು. ಈ ಎಲ್ಲ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಿಬ್ಬಂದಿ ನೇಮಕಾತಿ ಆಯೋಗದ ವೆಬ್ಸೈಟ್ www.ssckkr.kar.nic.in/ https://ss.nic.in ಗೆ ಭೇಟಿ ನೀಡಬಹುದು. ಸಿಬ್ಬಂದಿ ಆಯೋಗದ ದೂರವಾಣಿ ಸಂಖ್ಯೆ: 080-25502520, 948362020. ಸಂಪರ್ಕಿಸಬಹುದು.
ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ವಾಯು ಸೇವೆಗೆ (02/2025) ಆಯ್ಕೆ ಪರೀಕ್ಷೆಗಾಗಿ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ (Agniveera recruitment) ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇದೇ ಜುಲೈ 28 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ಲೈನ್ ನೊಂದಣಿಗಾಗಿ http://agbipathvayu.cda.in ಹಾಗೂ http://careerindianairforce.
ಇದನ್ನೂ ಓದಿ: KSRTC bus accident case: ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದ ಮಹಿಳೆಗೆ ಚಿತ್ರದುರ್ಗ ಕೋರ್ಟ್ ನಲ್ಲಿ 7,51,990 ಲಕ್ಷ ಪರಿಹಾರ
ಈ ನೇಮಕಾತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ (Agniveera recruitment) ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ದೂರವಾಣಿ ಸಂಖ್ಯೆ : 9945587060, 7022459064 ಗೆ ಸಂಪರ್ಕಿಸಬಹುದು ಎಂದು ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.