Chitradurga news|nammajana.com|19-7-2024
ನಮ್ಮಜನ.ಕಾಂ, ಚಿತ್ರದುರ್ಗ: ಜಿಲ್ಲೆಯಲ್ಲಿ ಡೆಂಗ್ಯೂ ದಿನದಿಂದ (Dengue) ದಿನಕ್ಕೆ ಏರುತ್ತಿದೆ. ಮಳೆ ಸುರಿಯುತ್ತಿದ್ದರು ಡೆಂಗ್ಯೂ ಪ್ರಕರಣಗಳು ಕಡಿಮೆ ಆಗುತ್ತಿಲ್ಲ. ಜ್ವರ ಅಲ್ಲಲ್ಲಿ ಕಾಣಿಸುತ್ತಿರುವುದು ಜನರನ್ನು ಚಿಂತೆಗೆ ತಳ್ಳಿದೆ.
ಸ್ವಚ್ಚತೆ ಕೊರತೆ ತರುತ್ತಿದೆಯಾ ಜೀವಕ್ಕೆ ಕುತ್ತು
ಮೊಳಕಾಲ್ಮುರು ಪಟ್ಟಣದ ಬಡಾವಣೆಯಲ್ಲಿನ ಬಹುತೇಕ ರಸ್ತೆಗಳಿಗೆ ಚರಂಡಿ ವ್ಯವಸ್ಥೆ ಇಲ್ಲದಿರುವುದು, ಇರುವ (Dengue) ಚರಂಡಿಗಳು ಗಲೀಜು ನೀರಿನಿಂದ ತುಂಬಿ ಸ್ಥಗಿತವಾಗಿರುವುದು, ರಸ್ತೆಯ ಮೇಲೆ ಕೊಳಚೆ ನೀರು ಎಲ್ಲೆಂದರಲ್ಲಿ ನಿಂತಿರುವುದು, ಎಲ್ಲಾ ರಸ್ತೆಗಳಲ್ಲಿಯೂ ಆಳೆತ್ತರದ ಜಾಲಿ ಮುಳ್ಳಿನ ಗಿಡಗಳು, ಗಬ್ಬು ನಾರುವ ತಿಪ್ಪೆಗಳು, ಮನೆ ತೆರವುಗೊಳಿಸಿದ ತ್ಯಾಜ್ಯದ , ಬಡಾವಣೆಗೆ ಅಂಟಿಕೊಂಡಿರುವ ದೊಡ್ಡ ಚರಂಡಿ ಹರಿಯದೆ ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ.
ಇದಕ್ಕೆ ಸಾಕ್ಷಿ ಎಂಬಂತೆ ಮೊಳಕಾಲ್ಮುರು ಪಟ್ಟಣದಲ್ಲಿ ಜ್ವರದಿಂದ ಬಳಲುತ್ತಿದ್ದ ಬಾಲಕ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ (Dengue) ನಡೆದಿದೆ. ಪಟ್ಟಣದ ಎನ್‌ಎಂಎಸ್ ಬಡಾವಣೆಯ 6 ವರ್ಷದ ಬಾಲಕ ಮೃತ ದುರ್ದೈವಿ. ಕಳೆದ ನಾಲೈದು ದಿನಗಳಿಂದ ಜ್ವರದಿಂದ ಬಳಲುತ್ತಿದ್ದನು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ವಾಸಿಯಾಗದೆ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದ ವೇಳೆ ಚಿಕಿತ್ಸೆ ಫಲಿಸದೆ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Chitradurga: ಮಳೆಗೆ ಮನೆ ಕುಸಿತ, ಐದು ಜನ ಪ್ರಾಣಾಪಯದಿಂದ ಪಾರು
ಮೃತ ಬಾಲಕಿಯ ರಕ್ತ ಪರೀಕ್ಷೆಯಲ್ಲಿ ಟೈಫಾಯಿಡ್ ಎಂದು ವರದಿಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು (Dengue) ಮಾಹಿತಿ ನೀಡಿದ್ದಾರೆ.
ಈ ಘಟನೆಯಿಂದ ಜಾಗೃತರಾದ ತಾಲೂಕು ಆರೋಗ್ಯ ಅಧಿಕಾರಿ ಡಾ. ಮಧು ಕುಮಾರ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿವಿಧ ವಾರ್ಡ್ ಗಲ್ಲಿ ಸ್ವಚ್ಚತೆಗೆ ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿಗೆ ಸೂಚಿಸಿದ್ದಾರೆ. ಫಾಗಿಂಗ್ ಮಾಡಿಸುವಂತೆ ಹೇಳಿದ್ದಾರೆ.
ಮೃತ ಬಾಲಕನ ಚಿಕ್ಕಪ್ಪ ಹುಸೇನ್ ಹೇಳಿದ್ದಿಷ್ಟು
ಮಗುವಿನ ಸಾವಿಗೆ ಪಟ್ಟಣ ಪಂಚಾಯಿತಿಗೆ ನೇರ ಕಾರಣ (Dengue) ನಾವು ಹಲವಾರು ಬಾರಿ ಸ್ವಚ್ಛತೆಗೆ ಮನವಿ ಮಾಡಿದರು ಸ್ವಚ್ಛತೆ ಮಾಡದೇ ಇರುವ ಕಾರಣ ಸೊಳ್ಳೆಗಳು ಹೆಚ್ಚಾಗಿ ಈ ಅವಘಡ ಸಂಭವಿಸಿದೆ ಎಂದು ಅಳಲು ತೋಡಿಕೊಂಡರು.
ಸ್ಥಳೀಯ ಸಾರ್ವಜನಿಕ ರವಿ ಹೇಳಿದ್ದೇನು
ತಾಲೂಕಿನ ಕೋನಾಪುರದ 10 ವರ್ಷದ ಬಾಲಕನಿಗೆ ಡೆಂಗ್ಯೂ ಜ್ವರ ಬಂದು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ (Dengue) ಕಳುಹಿಸಲಾಗಿದೆ. ಬಿಜಿಕೆರೆ ವ್ಯಾಪ್ತಿಯಲ್ಲಿ ಇನ್ನೂ ಎರಡು ಪ್ರಕರಣಗಳು ಬೆಳಕಿಗೆ ಬಂದಿದ್ದು ದಿನೇ ದಿನೇ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಜನರು ಭಯಭೀತಗೊಂಡಿದ್ದಾರೆ.
ಮೊಳಕಾಲ್ಮುರು ತಾಲೂಕು ಆರೋಗ್ಯ ಅಧಿಕಾರಿ ಡಾ.ಮಧುಕುಮಾರ್ ಹೇಳಿದ್ದಿಷ್ಟು
ಮೊಳಕಾಲ್ಮುರು ಪಟ್ಟಣದಲ್ಲಿ ಮೃತಪಟ್ಟಿರುವ ಮಗು ಡೆಂಗ್ಯೂ ಜ್ವರದಿಂದ ಮೃತಪಟ್ಟಿಲ್ಲ, ಆ ಮಗು ಜ್ವರದಿಂದ ಮೃತಪಟ್ಟಿದ್ದು ಡೆಂಗ್ಯೂ ನೆಗಿಟಿವ್ ಬಂದಿದ್ದು ಜನರು ಆತಂಕ ಪಡುವ (Dengue) ಅವಶ್ಯಕತೆ ಇಲ್ಲ. ಮುನ್ನೆಚ್ಚರಿಕೆ ಕ್ರಮವಾಗ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ 10 ವರ್ಷದ ಮಗುವಿನ ಮಾತ್ರ ಡೆಂಗ್ಯೂ ಪಾಸಿಟಿವ್ ಕಾಣಿಸಿಕೊಂಡಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.