Chitradurga news|nammajana.com|20-7-2024
ನಮ್ಮಜನ.ಕಾಂ, ಚಿತ್ರದುರ್ಗ: ಕರ್ನಾಟಕದಾದ್ಯಂತ ಮಳೆರಾಯ ಸುರಿಯುವ ಮೂಲಕ ಭೂಮಿಗೆ ತಂಪು ಎರೆಯುತ್ತಿದ್ದು ಎಲ್ಲಾ ಜಲಾಶಯಗಳು ಮೈ ತುಂಬಿ ಹರಿಯುತ್ತಿವೆ. ಮಳೆರಾಯನ (Vani Vilasapura Dam) ಅಬ್ಬರಕ್ಕೆ ಗುಡ್ಡ ಕುಸಿತ. ಮನೆ ಕುಸಿತ. ನೀರುಪಾಲು. ಸಾವು ನೋವುಗಳು ಸಹ ಸಂಭವಿಸಿ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಹ ಸಿಲುಕಿಕೊಂಡು ನರಳುತ್ತಿವೆ ಎಂದರೆ ತಪ್ಪಾಗಲಾರದು.
ಕಳೆದ ಹದಿನೈದು ದಿನಗಳಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು,. ಜೂನ್ ಆರಂಭದಲ್ಲಿ ಬಿತ್ತನೆ ಬೇಸಾಯ ಮಾಡಿದ ಜಮೀನುಗಳಲ್ಲಿ ಬಿತ್ತನೆ ಮಾಡಿದ ಬೆಳೆಗೆ (Vani Vilasapura Dam) ಅನುಕೂಲವಾದರೂ ಕೇಲವು ಬೆಳೆಗಳಿಗೆ ಅನಾನುಕೂಲ ಸಹ ಆಗಿದೆ.
ವಾಣಿ ವಿಲಾಸ ಸಾಗರಕ್ಕೆ ಹರಿದು ಬರಲಿಲ್ಲ ನೀರು
ವಿಶೇಷ ಎಂದರೆ ರಾಜ್ಯದ ಎಲ್ಲಾ ಜಲಾಶಯಗಳು ತುಂಬಿ ಹರಿಯುತ್ತಿದ್ದ ಚಿತ್ರದುರ್ಗ ಜಿಲ್ಲೆಯ ಜನರ ಜೀವನಾಡಿ ಆಗಿರುವ ವಾಣಿವಿಲಾಸ ಸಾಗರಕ್ಕೆ ಮಾತ್ರ ನೀರು ಹರಿದು ಬರದಿರುವುದು ಜಿಲ್ಲೆಯ ಜನರಿಗೆ ಆತಂಕ ತಂದಿದೆ. ಕಳೆದ 15 ದಿನಗಳಿಂದ (Vani Vilasapura Dam) ಮಳೆ ಸಹ ಬಿಟ್ಟು ಬಿಡದೇ ಸುರಿಯುತ್ತಿದ್ದರು ವಿ.ವಿ.ಸಾಗರ ನೀರಿನ ಮಟ್ಟ ಹೆಚ್ಚಿಲ್ಲದಿರುವುದು ರೈತ ಸಮುದಾಯದಲ್ಲಿ ಆತಂಕ ತಂದಿದೆ.
ಹೊಸದುರ್ಗ ಭಾಗದಲ್ಲಿ ಹೆಚ್ಚಿದ ಚಕ್ ಡ್ಯಾಂ
ಹೊಸದುರ್ಗ ಕ್ಷೇತ್ರದಲ್ಲಿ ಬೃಹತ್ ಚಕ್ ಡ್ಯಾಂ ನಿರ್ಮಾಣದಿಂದ ಅವುಗಳು ಸಹ ತುಂಬಿದ ನಂತರ ಹೊಸದುರ್ಗ ಭಾಗದಿಂದ ನೀರು ಹರಿಯುವ ನಿರೀಕ್ಷೆ ಇದೆ ಎಂಬ ಮಾತು ಸಹ ಜನರು (Vani Vilasapura Dam) ಹೇಳುತ್ತಿದ್ದರು ಸಹ ಈ ಮಳೆ ಹೀಗೆ ಮುಂದುವರೆದು ವಿವಿ ಸಾಗರದ ನೀರಿನ ಮಟ್ಟ ಹೆಚ್ಚುವ ಸಾಧ್ಯತೆ ಇದೆ.
ಜಿಲ್ಲೆಗೆ ವಿ.ವಿ.ಸಾಗರ ಜಲಾಶಯವೇ ಆಸರೆ (Vani Vilasapura Dam)
ಜಿಲ್ಲೆಯ ಜನರಿಗೆ ವಿ.ವಿ.ಸಾಗರ ಒಂದು ರೀತಿ ಜಲ ಸಂಜೀವಿನಿ ಇದ್ದಂತೆ ಆಗಿದೆ. ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮುರು ಸಹ ವಿ.ವಿ.ಸಾಗರ ಅವಲಂಬಿಸಿದೆ. ಚಿತ್ರದುರ್ಗಕ್ಕೆ ಕುಡಿಯುವ ನೀರು ವಿ.ವಿ.ಸಾಗರದಿಂದ ಬರುತ್ತಿದ್ದು ಹೆಚ್ಚಿನ ಬರಗಾಲದಲ್ಲಿ ಸಹ ವಿ.ವಿ.ಸಾಗರ ನೀರಿನಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಿದೆ.
ವಾಣಿ ವಿಲಾಸ ಸಾಗರ ಪ್ರಸ್ತುತ ನೀರಿನ ಮಟ್ಟ
- Date 19.07.2024
- VVS dam level:2123.50ft
- (2010+113.50w.r.to MSL)
- Gross Capacity:17.96TMC
- Live Capacity:16.09TMC
- Inflow: Nil
- Outflow: Nil
- Evaporation losses:134 Cusecs
- Drinking:13 Cusecs
ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸುರಿಯುವ ಮಳೆ ಮತ್ತಷ್ಟು ಬಿರುಸಿನಿಂದ ವಿವಿ ಸಾಗರ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರಲಿ, ಈ ಬಾರಿ ಸಹ ಡ್ಯಾಂ ಮೈ ತುಂಬಿ ಹರಿಯಲಿ ಎಂಬ (Vani Vilasapura Dam) ಬಯಕೆ ಜನರಲ್ಲಿದ್ದು ವರುಣರಾಯ ಏನು ಮಾಡುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.