Chitradurga news|nammajana.com|30-7-2024
ನಮ್ಮಜನ.ಕಾಂ, ಚಿತ್ರದುರ್ಗ: ಕಳೆದ ೫ ವರ್ಷಗಳಲ್ಲಿ ಕರ್ನಾಟಕಕ್ಕೆ ಕಾರ್ಪೋರೇಟ್ ವಲಯದ ಸಾಮಾಜಿಕ (Govinda Karajola) ಹೊಣೆಗಾರಿಕೆ ಅನುದಾನವನ್ನು (CSR) ಯಾವ ಪ್ರಮಾಣದಲ್ಲಿ ಹಂಚಿಕೆ ಮಾಡಲಾಗಿದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಪ್ರಶ್ನಿಸಿ ಮಾಹಿತಿ ಪಡೆದಿದ್ದಾರೆ.
ಜಿಲ್ಲಾವಾರು ಎಷ್ಟು ಅನುದಾನ ಬಂದಿದೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಪ್ರಾಬಲ್ಯವಿರುವ ಪ್ರದೇಶಗಳಿಗೆ ಹೆಚ್ಚಿನ ಸಿ.ಎಸ್.ಆರ್. ಅನುದಾನ ಬಳಸಲು ಕೇಂದ್ರ ಸರ್ಕಾರ ಏನಾದರು ವಿಶೇಷ ಆಸಕ್ತಿ ತಗೆದುಕೊಂಡಿದೆಯೇ ಎಂಬುದರ ಕುರಿತು ಸಂಸದ ಗೋವಿಂದ ಕಾರಜೋಳ ಅವರು ಸಂಸತ್ತಿನಲ್ಲಿ ಕಾರ್ಪೋರೇಟ್ (Govinda Karajola) ವ್ಯವಹಾರಗಳ ಸಚಿವಾಲಯವನ್ನು ಕುರಿತು ಪ್ರಶ್ನೆ ಕೇಳಿದ್ದಾರೆ.
ಸಂಸದರ ಪ್ರಶ್ನೆಗೆ ಉತ್ತರಿಸಿರುವ ಕಾರ್ಪೋರೇಟ್ ವ್ಯವಹಾರಗಳ ರಾಜ್ಯ ಸಚಿವ ಹರ್ಷ ಮಲೋತ್ರ ಕಂಪನಿಗಳ ಕಾಯ್ದೆ ೨೦೧೩ ಅಡಿಯಲ್ಲಿ ಪ್ರತಿಯೊಂದು ಕಂಪನಿಗಳು ವಾರ್ಷಿಕವಾಗಿ ಸಿ.ಎಸ್.ಆರ್.ಚಟುವಟಿಕೆಗಳ ವಿವರಗಳನ್ನು (Govinda Karajola) ಬಹಿರಂಗಪಡಿಸುವುದು ಅವಶ್ಯವಾಗಿರುತ್ತದೆ.
ಕಂಪನಿಗಳು ಸಲ್ಲಿಸುವ ಸಿ.ಎಸ್.ಆರ್. ಸಂಬಂಧಿಸಿದ ವಿವರಗಳನ್ನು ಸಾರ್ವಜನಿಕ ಡೊಮೈನ್‌ನಲ್ಲಿ ವೀಕ್ಷಣೆ (Govinda Karajola) ಮಾಡಬಹುದಾಗಿ ಎಂದಿದ್ದಾರೆ.
೨೦೧೮-೧೯ ನೇ ಸಾಲಿನಿಂದ ೨೦೨೨-೨೩ ನೇ ಸಾಲಿನವರೆಗೆ ಕರ್ನಾಟಕಕ್ಕೆ ಸುಮಾರು ೭,೮೦೦ ಕೋಟಿಯಷ್ಟು ಸಿ.ಎಸ್.ಆರ್ ಅನುದಾನವನ್ನು ನೀಡಲಾಗಿದೆ. ಅದರಲ್ಲಿಯೂ ಚಿತ್ರದುರ್ಗ ಜಿಲ್ಲೆಗೆ ಕಳೆದ ೫ ವರ್ಷಗಳಲ್ಲಿ ಸುಮಾರು ೪೮.೩೩ (Govinda Karajola) ಕೋಟಿಯಷ್ಟು ಸಿ.ಎಸ್.ಆರ್. ಅನುದಾನವನ್ನು ಬಳಸಲಾಗಿದೆ.
ಕಂಪನಿಗಳು ಹಾಗು ಅವುಗಳ ಮಂಡಳಿಗಳು ಅದರ ಸಿ.ಎಸ್.ಆರ್. ಸಮಿತಿಯ ಶಿಫಾರಸ್ಸುಗಳ ಆಧಾರದ ಮೇಲೆ ಚಟುವಟಿಕೆಗಳನ್ನು ನಿರ್ಧರಿಸಲು, ಕಾರ್ಯಗೊತಗೊಳಿಸಲು ಮತ್ತು ಮೇಲ್ವಿಚಾರಣೆ ಮಾಡಲು ಅಧಿಕಾರವನ್ನು (Govinda Karajola) ಹೊಂದಿರುತ್ತವೆ. ನಿರ್ಧಿಷ್ಟ ಪ್ರದೇಶ ಅಥವಾ ಚಟುವಟಿಕೆಯಲ್ಲಿ ಖರ್ಚು ಮಾಡಲು ಕಂಪನಿಗಳಿಗೆ ಸರ್ಕಾರ ಯಾವುದೇ ನಿರ್ದೇಶನಗಳನ್ನು ನೀಡುವುದಿಲ್ಲ ಎಂದಿದ್ದಾರೆ.
ಕಾಯಿದೆಯ ವೇಳಾಪಟ್ಟಿ ರಾಷ್ಟ್ರೀಯ ಕಂಪನಿಗಳು ಸಿ.ಎಸ್.ಆರ್. ಅಡಿ ಕೈಗೊಳ್ಳಬಹುದಾದ ಅರ್ಹ (Govinda Karajola) ಚಟುವಟಿಕೆಗಳನ್ನು ಮತ್ತು ಸುಸ್ಥಿರ ಅಭಿವೃದ್ದಿಯನ್ನು ಉತ್ತೇಜಿಸಲು ರಾಷ್ಟೀಯ ಆದ್ಯತೆಗಳೊಂದಿಗೆ ಜೋಡಿಸಲ್ಪಟ್ಟಿರುತ್ತದೆ.
ಇದನ್ನೂ ಓದಿ: ಚಳ್ಳಕೆರೆ ನಗರಸಭೆ ನೂತನ ಪೌರಯುಕ್ತರಾಗಿ ಎಚ್.ಜಿ.ಜಗರೆಡ್ಡಿ ನೇಮಕ | Challakere Municipality
ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳ ಅಭಿವೃದ್ದಿ, ಕೊಳಚೆ ಪ್ರದೇಶಗಳ ಅಭಿವೃಧ್ದಿ, ಗ್ರಾಮೀಣ (Govinda Karajola) ಅಭಿವೃದ್ದಿ ಯೋಜನೆಗಳು, ಅಸಮಾನತೆಗಳನ್ನು ಕಡಿಮೆ ಮಾಡುವ ಕ್ರಮಗಳ ಕುರಿತು ಹೆಚ್ಚಿನ ಗಮನ ನೀಡುವ ಕುರಿತು ಕಂಪನಿಗಳ ಗಮನ ಸೆಳೆಯಲಾಗುವುದು ಎಂದು ಉತ್ತರಿಸಿದ್ದಾರೆ.