
Chitradurga news|nammajana.com|30-7-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ತಹಶೀಲ್ದಾರ್ ಹಾಗೂ ಗ್ರಾಮ ಲೆಕ್ಕಧಿಕಾರಿ ಜಮೀನು ಅಳತೆ ವಿಚಾರಕ್ಕೆ ತೆರಳಿದ್ದ (Assault Government Servan) ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕರು (RI) ಪ್ರಾಣೇಶ್ ಅವರ ಮೇಲೆ ಹಲ್ಲೆ ಮತ್ತು ತಹಶೀಲ್ದಾರ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ತಾಲೂಕಿನ ಮಲ್ಲಪುರದಲ್ಲಿ ನಡೆದಿದೆ.
ಚಿತ್ರದುರ್ಗ ತಾಲೂಕಿನ ಮಲ್ಲಾಪುರಕ್ಕೆ ತಿಪ್ಪೇಸ್ವಾಮಿ ಎಂಬುವವರು ಕೊಟ್ಟ ದೂರಿನನ್ವಯ ಸ್ಥಳಕ್ಕೆ ಭೇಟಿ ಕೊಟ್ಟಿದ್ದ ತಹಶೀಲ್ದಾರ್ ನಾಗವೇಣಿ ಮತ್ತು RI ಪ್ರಾಣೇಶ್ ಭೇಟಿ (Assault Government Servan ನೀಡಿದ್ದರು.

ಇದನ್ನೂ ಓದಿ: ಭರಮಸಾಗರ ಪಿ.ಡಿ.ಓ ಶ್ರೀದೇವಿ ಅಮಾನತು | PDO SUSPENDED
ಜಮೀನು ವಿಚಾರವಾಗಿ ಸ್ಥಳಕ್ಕೆ ಭೇಟಿ ಕೊಟ್ಟ ವೇಳೆ ಹಲ್ಲೆ ಅಧಿಕಾರಿಗಳ ಮೇಲೆ ವಿದ್ಯಾಶಂಕರ್ ಹಾಗೂ ಶಿವಶಂಕರ್ ಹಲ್ಲೆ ಮಾಡಿದ್ದು ಹಾಗೂ ತಹಶೀಲ್ದಾರ್ ನಾಗವೇಣಿಗೆ ಅವಾಚ್ಯ (Assault Government Servan) ಶಬ್ದಗಳಿಂದ ನಿಂದನೆ ಮತ್ತು RI ಪ್ರಾಣೇಶ್ ಮೇಲೆ ಏಕಾಏಕಿ ಹಲ್ಲೆ ನಡೆಸಿದ ಆರೋಪಿಗಳ ವಿರುದ್ದ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ತಹಶೀಲ್ದಾರ್ ನಾಗವೇಣಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೋಲಿಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
