Chitradurga news|nammajana.com|3-8-2024
ನಮ್ಮಜನ.ಕಾಂ, HIRIYUR: ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಗ್ರಾಮ ಪಂಚಾಯಿತಿ PDO ಸಿ.ಈಶ್ವರ್ (PDO SUSPENDED) ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಸೋಮಶೇಖರ್ ಆದೇಶಿಸಿದ್ದಾರೆ.
2018-19 ರಿಂದ 2022-23ನೇ ಸಾಲಿನವರೆಗೆ ಜವನಗೊಂಡನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಎಲ್ಲ ಹಣಕಾಸು ಕಾಮಗಾರಿ, ಕಂದಾಯ ಲೆಕ್ಕ ಶೀರ್ಷಿಕಯಲ್ಲಿ (PDO SUSPEND) ಹಲವು ಅಕ್ರಮಗಳು ನಡೆದಿವೆ ಎಂದು ಕೆ.ಎಚ್.ಶಶಿಕಾಂತ್ ಹಾಗೂ ಎಚ್.ಎಂ.ಭರತ್ ದೂರು ಸಲ್ಲಿಸಿದ್ದರು.
ಇವರ ದೂರು ಆಧರಿಸಿ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಖುದ್ದು ಭೇಟಿ ನೀಡಿ ಪಂಚಾಯಿತಿಯ 5 ವರ್ಷಗಳ ಹಣಕಾಸು ಯೋಜನೆ, ಕಾಮಗಾರಿ ವಿವರಗಳನ್ನು (PDO SUSPEND) ಹಾಜರುಪಡಿಸುವಂತೆ ಪಿಡಿಓ ಸಿ.ಈಶ್ವರ್ ಅವರಿಗೆ ಹಾಜರುಪಡಿಸಲು ಸೂಚಿಸಿದರೂ, ಸಲ್ಲಿಸಲು ವಿಫಲರಾಗಿದ್ದಾರೆ.
5 ವರ್ಷಗಳ ಅವಧಿಯಲ್ಲಿ ಬಿಡುಗಡೆಯಾದ ಹಣಕಾಸು, ಕಾಮಗಾರಿ, ಕಂದಾಯ ಲೆಕ್ಕ ಶೀರ್ಷಿಕೆ ಹಾಗೂ ಇತರೆ ಯೋಜನೆಗಳಡಿ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದಂತೆ ಯಾವುದೇ ಲೆಕ್ಕಪತ್ರಗಳನ್ನು ತನಿಖೆಗೆ ಒದಗಿಸಿಲ್ಲ. ಈ ಬಗ್ಗೆ ಲಿಖಿತ ಹಾಗೂ ಮೌಖಿಕವಾಗಿ (PDO SUSPEND) ಸೂಚಿಸಿದರೂ ಪ್ರಯೋಜನವಾಗಿಲ್ಲ. ಶೋಕಸ್ ನೋಟೀಸ್ ಕೂಡ ನೀಡಲಾಗಿದೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಈಶ್ವರ್ ಸೂಕ್ತ ಸಮಜಾಯಿಷಿ ನೀಡದ ಕಾರಣ ಮೇಲ್ಕಂಡ ದೂರುಗಳ ಕುರಿತು ಸಮಗ್ರ ತನಿಖೆ ಕೈಗೊಳ್ಳಬೇಕಾದ ಅಗತ್ಯ ಇರುವುದರಿಂದ ಜಿಪಂ ಸಿಇಓ ಎಸ್.ಜೆ.ಸೋಮಶೇಖರ್ ತಕ್ಷಣದಿಂದ ಜಾರಿಗೆ (PDO SUSPEND) ಬರುವಂತೆ ಸೇವೆಯಿಂದ ಅಮಾನತು ಮಾಡಿ ಆದೇಶಿಸಿದ್ದಾರೆ.
ಇದನ್ನೂ ಓದಿ: Great Farmer: ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ
ಸದರಿಯವರು ಅಮಾನತು ಅವಧಿಯಲ್ಲಿ ಪ್ರಾಧಿಕಾರದ (PDO SUSPEND) ಅನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡುವಂತಿಲ್ಲ. ಅನ್ಯ ಉದ್ಯೋಗದಲ್ಲಿ ತೊಡಗುವಂತಿಲ್ಲ ಹಾಗೂ ನಿಯಮಾನುಸಾರ ಜೀವನಾಧಾರ ಭತ್ಯೆಗೆ ಅರ್ಹರಾಗಿರುತ್ತಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.