Chitradurga news|nammajana.com|4-8-2024
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನಾದ್ಯಂತ ಹಿಂಗಾರು ಮತ್ತು ಮುಂಗಾರು ಸೀಜನ್‌ನ ಮಳೆಯಲ್ಲಿ ಕೊರತೆ ಉಂಟಾದ (Department of Agriculture) ಪರಿಣಾಮವಾಗಿ ಭೂಮಿಯ ತೇವಾಂಶ ಸಂಪೂರ್ಣವಾಗಿ ಒಣಗಿದ ಹಿನ್ನೆಲೆಯಲ್ಲಿ ಈ ಬಾರಿ ಬಿತ್ತನೆಯಲ್ಲಿ ಕುಂಠಿತವಾಗಿದ್ದು ರೈತರು ಶೇಂಗಾ ಬೆಳೆಗೆ ಪರ್ಯಾಯವಾಗಿ ಸಿರಿಧಾನ್ಯಗಳನ್ನು ಬೆಳೆದು ಆರ್ಥಿಕ (Department of Agriculture ಲಾಭಪಡೆಯುವಂತೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಜೆ.ಅಶೋಕ್ ಮನವಿ ಮಾಡಿದ್ಧಾರೆ.
ಅವರು, ಈ ಬಗ್ಗೆ ಮಾಹಿತಿ ನೀಡಿ, ಪ್ರತಿವರ್ಷದ ವಾಡಿಕೆ ಮಳೆ ೪೮೪.೩ ಎಂ.ಎಂ ಇದ್ದು, ಪ್ರಸ್ತುತ ಈ ಬಾರಿ ೨೬೧ ಎಂ.ಎಂ ಮಳೆಯಾಗಿದೆ. ೨೨೩ ಎಂ.ಎಂ ಮಳೆಯ ಕೊರತೆ ಉಂಟಾಗಿ (Department of Agriculture) ರೈತರು ಬಿತ್ತನೆ ಮಾಡುವ ಕಾರ್ಯದಿಂದ ದೂರ ಉಳಿದಿದ್ದಾರೆ.
ಈ ಹಿನ್ನೆಲೆಯಲ್ಲಿ ಸರ್ಕಾರ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಅತಿಕಡಿಮೆ ನೀರಿ ವ್ಯವಸ್ಥೆಯಲ್ಲೇ ಉತ್ತಮ ಮಳೆಯನ್ನು (Department of Agriculture) ಬೆಳೆಯುವಂತೆ ಸಲಹೆ ನೀಡಿದೆ.
ತಾಲ್ಲೂಕಿನಾದ್ಯಂತ 87765 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಅವಕಾಶವಿದ್ದು, ಆ ಪೈಕಿ ೪೯೮೩೬ ಹೆಕ್ಟೇರ್ (Department of Agriculture) ಪ್ರದೇಶದಲ್ಲಿ ಮಾತ್ರ ಬಿತ್ತೆನೆಯಾಗಿದೆ. ಉಳಿದಂತೆ ೩೭೯೨೯ ಹೆಕ್ಟೇರ್ ಪ್ರದೇಶದಲ್ಲಿ ಇನ್ನೂ ಬಿತ್ತನೆಯಾಗಿಲ್ಲ. ಈಗಾಗಲೇ ರೈತರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಶೇಂಗಾ ಬೆಳೆ ಬಿತ್ತನೆ ಮಾಡದ ಸ್ಥಿತಿ ಉಂಟಾಗಿದೆ. ಪರ್ಯಾಯ ಬೆಳೆ ಬೆಳೆಯಲು ಮುಂದಾಗಬೇಕು ಎಂದಿದ್ಧಾರೆ.
ಕಡಿಮೆ ಫಲವತ್ತೆ ವiಣ್ಣಲ್ಲಿ ಔಡಲ, ಎರೆ ಮತ್ತು ಕಪ್ಪು ಮಣ್ಣಿನ ಜಮೀನಿನಲ್ಲಿ ಸೂರ್ಯಕಾಂತಿ, ರಾಗಿ, ಬವಣೆ, ಹಾರಕ, ಕೊರಲೆ, ಹುರುಳಿ, ಸಾವೆ, ಅವರೆ, ಹುಚ್ಚೆಳ್ಳು, ಹೆಬ್ಬಾಳ ಮುಂತಾದ ಬೆಳೆಯನ್ನು ಬೆಳೆಯುವ ಮೂಲಕ ಆರ್ಥಿಕವಾಗಿಯೂ ಸದೃಢರಾಗಿ, ತಮ್ಮ ಜಾನುವಾರುಗಳಿಗೂ ಮೇವಿನ ಸೌಲಭ್ಯ ದೊರಕಿದಂತಾಗುತ್ತದೆ.
ಕೃಷಿ ಇಲಾಖೆಯ ಸಲಹೆಯಂತೆ ರೈತರು ಮುಂಗಾರು ಮತ್ತು ಹಿಂಗಾರು ಬೆಳೆಯನ್ನು ಬೆಳೆಯಲು ಮುಂದಾಗಬೇಕಿದೆ. ರೈತರ ಹಿತದೃಷ್ಠಿಯಿಂದ ಕೃಷಿ ಇಲಾಖೆ ತನ್ನ ಎಲ್ಲಾ ರೈತ ಸಂಫರ್ಕ ಕೇಂದ್ರಗಳಲ್ಲಿ ರೈತರಿಗೆ ಬೆಳೆ ಬೆಳೆಯುವ ಬಗ್ಗೆ ಸಲಹೆ ಸೂಚನೆಯನ್ನು ನೀಡಲಿದೆ ಎಂದಿದ್ಧಾರೆ.
ಇದನ್ನೂ ಓದಿ: RUDSET INSTITUTE: ಉಚಿತ ಊಟ ವಸತಿಯೊಂದಿಗೆ 10 ದಿನ ಕುರಿ ಸಾಕಾಣಿಕೆ ತರಬೇತಿಗೆ ಅರ್ಜಿ
ತಾಲ್ಲೂಕಿನ ತಳಕು ಹೋಬಳಿಯ ದೇವರೆಡ್ಡಿಹಳ್ಳಿ ಗ್ರಾಮದ ರೈತ ನಾಗೇಶ್ ಶೇಂಗಾ ಬೆಳೆ ಬೆಳೆಯುವ ಬದಲು ಕಳೆದ ಎರಡು (Department of Agriculture) ಬಾರಿಯೂ ತನ್ನ ಜಮೀನಿನಲ್ಲಿ ಔಡಲ ಬೆಳೆಯನ್ನು ಬೆಳೆಯಲು ಪ್ರಾರಂಭಿಸಿದ್ಧಾನೆ. ಮಳೆಯಾಶ್ರಿತ ಈ ಬೆಳೆ ಪ್ರಾರಂಭದ ಎರಡೂ ವರ್ಷಗಳಲ್ಲಿ ಮಳೆ ಇಲ್ಲದೆ ರೈತ ನಾಗೇಶ್ ನಷ್ಟ ಅನುಭವಿಸಿದ್ದು, ಈ ಬಾರಿ ಚಲಬಿಡದೆ ಗ್ರಾಮದ ತಮ್ಮ ೨೫ ಎಕರೆ ಜಮೀನಿನಲ್ಲಿ ಔಡಲ ಬೆಳೆಯನ್ನು ಕೃಷಿ ಇಲಾಖೆ ಸಲಹೆಯಂತೆ ಹಾಕಿದ್ಧಾನೆ.
ಬಾಕ್ಸ್
ಎರಡು ವರ್ಷಗಳಿಂದ ರೈತ ನಾಗೇಶ ತನ್ನ ಜಮೀನಿಗೆ ಹಾಕಿದ್ದ ಔಡಲ ಬೆಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಮತ್ತೊಮ್ಮೆ ಔಡಲ ಬೆಳೆಯುವ ಬಗ್ಗೆ ನಿರಾಸಕ್ತಿ ಹೊಂದಿದ್ದ. ಆದರೆ, ಅವನಿಗೆ ಸೂಕ್ತ ಮಾರ್ಗದರ್ಶನ ನೀಡಿ ಔಡಲ ಬೆಳೆ ಯಾವುದೇ ರೋಗ ವ್ಯಾಪಿಸದು, ಮಾರುಕಟ್ಟೆಯಲ್ಲೂ ಔಡಲಕ್ಕೆ ಉತ್ತಮ ಬೆಲೆ ಇದ್ದು, ಔಡಲ ಬೆಳೆಯಲು ಸಲಹೆ ನೀಡಲಾಗಿತ್ತು. ರೈತ ನಾಗೇಶ್ ಕೃಷಿ ಇಲಾಖೆ ಸಲಹೆಯಂತೆ ಈ ಬಾರಿ ತನ್ನ ೨೫ ಎಕರೆ ಪ್ರದೇಶದಲ್ಲಿ ಔಡಲ ಬೆಳೆ ಹಾಕಿದ್ದು ಸಮೃದ್ದವಾಗಿ ಔಡಲ ಬೆಳೆದಿದ್ದು ಅನೇಕ ರೈತರು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
ಸಹಾಯಕ ಕೃಷಿ ನಿರ್ದೇಶಕ ಜೆ.ಅಶೋಕ್.
ಬಾಕ್ಸ್
ನಾನು ಎರಡು ಬಾರಿ ನನ್ನ ಜಮೀನಿಗೆ ಔಡಲ ಬೆಳೆಹಾಕಿ ನಷ್ಟ ಅನುಭವಿಸಿದ್ದೆ. ಈ ಬಾರಿ ಬೇರೆ, ಬೇರೆ ಬೆಳೆ ಬೆಳೆಯುವ ಚಿಂತನೆಯಲ್ಲಿದ್ದೆ ಆದರೆ, ಕೃಷಿ ಅಧಿಕಾರಿಗಳು ಔಡಲ ಬೆಳೆಯುವಂತೆ ಸಲಹೆ ನೀಡಿದರು. ಅವರ ಸಲಹೆಯಂತೆ ೧.೨೫ ಲಕ್ಷ ವೆಚ್ಚದಲ್ಲಿ ೨೫ ಎಕರೆ ಪ್ರದೇಶದಲ್ಲಿ ಔಡಲ ಬೆಳೆ ಹಾಕಿದ್ದು ಸುಮಾರು ೪ರಿಂದ೫ ಲಕ್ಷ ಲಾಭಪಡೆಯುವ ವಿಶ್ವಾಸವಿದೆ.
ರೈತ ನಾಗೇಶ್ ದೇವರೆಡ್ಡಿಹಳ್ಳಿ.