Chitradurga news|nammajana.com|4-8-2024
ನಮ್ಮಜನ.ಕಾಂ, ಹೊಳಲ್ಕೆರೆ: ತಾಲ್ಲೂಕಿನ ಹೊರಕೆದೇವಪುರ ಗ್ರಾಮದಲ್ಲಿ ಶ್ರೀ ಕರಿಯಮ್ಮ ದೇವಿ ವಿನಾಯಕ ಸೇವಾ ಸಮಿತಿ ವತಿಯಿಂದ ಹಲವು ವರ್ಷಗಳಿಂದ ಗಣೇಶೋತ್ಸವ (Vinayaka Seva Samiti) ಆಚರಿಸಿಕೊಂಡು ಬಂದಿದ್ದಾರೆ. ಅದರಂತೆಯೇ ಈ ಬಾರಿಯೂ ಗಣೇಶೋತ್ಸವದ ಆಚರಣೆಗೆ ಒಂದು ತಿಂಗಳ ಮುಂಚಿತವಾಗಿಯೇ ಸಿದ್ಧತೆ ನಡೆಯುತ್ತಿದ್ದು, ಇದರ ಭಾಗವಾಗಿ ಸಮಿತಿ ವತಿಯಿಂದ ಶನಿವಾರ ಧ್ವಜಕಂಬ ಪೂಜೆ ಸಲ್ಲಿಸಿ, ಗಣೇಶೋತ್ಸವಕ್ಕೆ ಚಾಲನೆ ನೀಡಲಾಯಿತು.
ಧ್ವಜಾಪೂಜೆ ನೆರವೇರಿಸಿ ಸಮಿತಿ ಅಧ್ಯಕ್ಷ ಜಿ.ಎಂ. ಸುನಿಲ್ ಮಾತನಾಡಿ, ಹಲವು ವರ್ಷಗಳಿಂದಲೂ ನಿರಂತರವಾಗಿ ನಮ್ಮ ಸಮಿತಿ ವತಿಯಿಂದ ಗಣೇಶೋತ್ಸವವನ್ನು ಬಹಳ (Vinayaka Seva Samiti) ವಿಜೃಂಭಣೆಯಿಂದ ವೈಭವಯುತವಾಗಿ ಧಾರ್ಮಿಕ ಸಾಂಪ್ರದಾಯದಂತೆ ನಡೆಸಿಕೊಂಡು ಬರಲಾಗಿದೆ. ಅದರಂತೆ ಈ ವರ್ಷವೂ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸೆ.7 ರಂದು ಮೂರ್ತಿಯನ್ನು ಗ್ರಾಮಕ್ಕೆ ತಂದು ಶಾಸ್ತ್ರ ಸಾಂಪ್ರದಾಯದ ಮೂಲಕ ಪ್ರತಿಷ್ಠಾಪನೆ ನೆರವೇರಿಸಲಾಗುವುದು. 9 ದಿನಗಳ ಕಾಲವೂ ಕೂಡ ಪ್ರತಿನಿತ್ಯ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಪೂಜಾ ಕಾರ್ಯಗಳು (Vinayaka Seva Samiti) ನಡೆಯಲಿವೆ. ಸೆ.13 ರಂದು ಅನ್ನ ಸಂತರ್ಪಣೆ ಸೇವೆ ಇದ್ದು, ಸೆ.15 ರಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸ್ವಾಮಿಯ ಅದ್ದೂರಿ ಮೆರವಣಿಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: Doctor’s Day: ರೋಗಿಗಳಿಗೆ ಜೀವ ಕೊಡುವ ವೈದ್ಯರ ವೃತ್ತಿ ಪವಿತ್ರದ್ದು: ಟಿ.ರಘುಮೂರ್ತಿ
ಈ ವೇಳೆ ಶ್ರೀ ಕರಿಯಮ್ಮ ದೇವಿ ವಿನಾಯಕ ಸೇವಾ ಸಮಿತಿ ಉಪಾಧ್ಯಕ್ಷ ರಂಗಸ್ವಾಮಿ, ಕಾರ್ಯದರ್ಶಿ ಕೆ.ಪುನೀತ್ ಕುಮಾರ್, ಸದಸ್ಯರಾದ ಲೋಹಿತ್, ಚಿದಾನಂದ, ದಾಸಪ್ಪ, ವಿಷ್ಣು,ತಿಪ್ಪೇಶ್, ಪೂಜಾರ್ ರಂಗಸ್ವಾಮಿ, ನಿತಿನ್, ಮಂಜುನಾಥ್, ಕುಬೇರ, ಶ್ರೀನಿವಾಸ್, ರಂಗನಾಥ್, ಅಶೋಕ್ ಮತ್ತು ಕುಮಾರ್ ಸೇರಿದಂತೆ ಸಮಿತಿಯ ಹಲವು ಸದಸ್ಯರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252