Chitradurga news|nammajana.com|12-8-2024
ನಮ್ಮಜನ.ಕಾಂ, ಹೊಳಲ್ಕೆರೆ: ಪಟ್ಟಣದ ಹೆಸರಾಂತ ವೈದ್ಯರಾದ ಡಾ.ಹೆಚ್.ಜಿ.ಉಮಾಪತಿ ಇವರ ನಾಗರಿಕ ಸೇವೆ ಪರಿಗಣಿಸಿದ ತಾಲೂಕಿನ ನಾಗರಿಕರು ಹಾಗೂ ವಿವಿಧ ಸಂಘಸಂಸ್ಥೆಗಳು (Dr. Umapathy) ನಾಗರೀಕ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಅಗಸ್ಟ ೧೪ ಬುಧವಾರ ಪಟ್ಟಣದ ಸಂವಿಧಾನ ಸೌಧದಲ್ಲಿ ಹಮ್ಮಿಕೊಳ್ಳಲಾಗಿದೆ.
ವೈದ್ಯೋ ನಾರಾಯಣೋ ಹರೀಃ ಎನ್ನುವ ಹೆಸರಿಗೆ ತಕ್ಕಂತೆ ಕೇವಲ ೧೦ ರೂ ಶುಲ್ಕಕ್ಕೆ ಆರೋಗ್ಯ ಸೇವೆ ಮತ್ತು ಚಿಕಿತ್ಸೆಗೆ (Dr. Umapathy) ನೀಡುವ ಖ್ಯಾತಿಯ ಪಟ್ಟಣದ ಗಂಗಾ ಕ್ಲಿನಿಕ್ ಡಾ.ಹೆಚ್.ಜಿ.ಉಮಾಪತಿಯದು.

30 ವರ್ಷಗಳ ಆರೋಗ್ಯ ಸೇವೆಯಲ್ಲಿ ಬಡವರ ಡಾಕ್ಟರ್ ಖ್ಯಾತಿ (Dr. Umapathy)
ಕಳೆದ ೩೦ ವರ್ಷಗಳಿಂದ ಜನರ ಆರೋಗ್ಯ ಸೇವಕರಾಗಿ ಸೇವೆ ಸಲ್ಲಿಸಿ ಸಾವಿರಾರು ಬಡ ಕುಟುಂಬಗಳ ಮನೆ ವೈದ್ಯರಾಗಿ ಮನೆ ಮಾತಾಗಿದ್ದಾರೆ
ಇದನ್ನೂ ಓದಿ: Independence Day 2024: ನಾಳೆಯಿಂದ ಬೈಕ್ ರ್ಯಾಲಿ ಹಾಗೂ ದೇಶಭಕ್ತಿ ಗೀತೆಗಳು ಸೇರಿ ಸ್ವಾತಂತ್ರ್ಯ ಹಬ್ಬಕ್ಕೆ ಭರ್ಜರಿ ಸಿದ್ದತೆ
ಹೊಳಲ್ಕೆರೆ ಕ್ಷೇತ್ರದ ಮಾಜಿ ಶಾಸಕ ಶ್ರೀಕಾವಲ್ ಸಿದ್ದರಾಮಪ್ಪ, ಶ್ರೀಮತಿ ಗಂಗಮ್ಮ ೨ನೇ ಪುತ್ರ ಡಾ.ಹೆಚ್.ಜಿ.ಉಮಾಪತಿ. ದಾವಣಗೆರೆ ಜಿ.ಜೆ.ಎಂ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ (Dr. Umapathy) ಶಿಕ್ಷಣದ ಬಳಿಕ ಹಳ್ಳಿ ಜನ ಅರೋಗ್ಯ ಸೇವೆ ಯಿಂದ ಸಾರ್ಥಕ ಜೀವನದ ಕನಸು ಕಟ್ಟಿಕೊಂಡಿದ್ದರಿಂದ ವಿದೇಶಕ್ಕೆ ಹಾರುವ (Dr. Umapathy) ಎಷ್ಟೂ ಅವಕಾಶಗಳನ್ನು ನಿರಾಕರಿಸಿ, ಹುಟ್ಟಿದ ನೆಲದಲ್ಲಿ ಸೇವೆ ಸಲ್ಲಿಸುವ ಉದ್ದೇಶದಿಂದ ತಾಯಿ ಹೆಸರಲ್ಲಿ ಗಂಗಾ ಕ್ಲಿನಿಕ್ ಆರಂಭಿಸಿ ಉಚಿತ ಸೇವೆ ಕೈಗೊಂಡರು.
ನಮ್ಮದು ಉಚಿತ ಸೇವೆ, ಬಡವರಿಗಾಗಿ ಕ್ಲಿನಿಕ್ (Dr. Umapathy)
ಅಪಾರ ಮನ್ನಣೆ ಜತೆ ಜನಪ್ರೀಯತೆಗಳಿಸಿದ್ದರೂ, ಬಿಡಿಗಾಸು ಶುಲ್ಕವಿಲ್ಲದೆ ಜನ ಸೇವೆ ಜನರ ಪ್ರೀತಿಗೆ ಅಪಾರವೇ ಇಲ್ಲದಂತಾಗಿತ್ತು. ನಮ್ಮದು ಉಚಿತ ಸೇವೆ, ಬಡವರಿಗಾಗಿ ಕ್ಲಿನಿಕ್ ತೆಗೆದಿದ್ದೇನೆ. ಹಣ ಇದ್ದವರು ಹಣ ತೆಗೆದುಕೊಳ್ಳುವ ವೈದ್ಯರ ಕಡೆಗೆ ಹೋಗಿ ಎನ್ನುವ ಸಂದೇಶ ನೀಡುತ್ತಿದ್ದರು. ಇದು ಜನರನ್ನು ಸಂಕಷ್ಟಕ್ಕೆ ತಳ್ಳಿತ್ತು.
ವೈದ್ಯರಿಂದ ಉಚಿತ ಸೇವೆ ಪಡೆದುಕೊಳ್ಳುವುದು ಸರಿಯಲ್ಲ ಎನ್ನುವ ಕಾರಣಕ್ಕಾಗಿ ಒತ್ತಾಯ ಪೂರ್ವಕವಾಗಿ ೧೦ ಶುಲ್ಕವನ್ನು ಅಭಿಮಾನಿಗಳು ನಿಗದಿ ಮಾಡಿದ್ದು, ವೈದ್ಯರ ಜನಪರ ಸೇವೆಗೆ ಸಾಕ್ಷಿಯಾಗಿದೆ.
ಇದನ್ನೂ ಓದಿ: Somaguddu: ಗಂಜಿಗುಂಟೆ ನಿವೇಶನ ರಹಿತ ಫಲಾನುಭವಿಗಳಿಂದ ಅರ್ಜಿ ಆಹ್ವಾನ
ಡಾಕ್ಟರ್ ಉಮಾಪತಿಗೆ ಕುಟುಂಬ ಸಾಥ್
ಇವರ ನಿಸ್ವಾರ್ಥ ಸೇವೆಗೆ ಪ್ರೇರಣಾದಾಯಕ ಅಣ್ಣ ಪಟ್ಟಣ ಪಂಚಾಯ್ತಿ ಮಾಜಿ ಪ್ರಧಾನರಾದ ಹೆಚ್.ಜಿ.ಅನಂದ್, ಧರ್ಮಪತ್ನಿ ಸತ್ಯಭಾಮ, ಪುತ್ರ ದಂತ ವೈದ್ಯ ಡಾ.ಸಿದ್ದಾರ್ಥ,
ವೈದ್ಯ ಡಾ.ಹೆಚ್.ಜಿ.ಉಮಾಪತಿ ಜನಪರ ಸೇವೆ ಗುರುತಿಸಿ (Dr. Umapathy) ಮಂಗಳೂರು ದೇರಳಕಟ್ಟೆಯಲ್ಲಿರುವ ನಿಟ್ಟೆ ವಿಶ್ವವಿದ್ಯಾನಿಲಯ, ಜಸ್ಟೀಸ್ ಹೆಗ್ಗಡೆ ಮೆಡಿಕಲ್ ಅಕಾಡೆಮಿ, ಸೇರಿ ವಿವಿಧ ಸಂಘ ಸಂಸ್ಥೆಗಳು ಉತ್ತಮ ವೈದ್ಯಕೀಯ ಸೇವಾ ಪ್ರಶಸ್ತಿ ನೀಡಿದೆ.
ಪ್ರಶಸ್ತಿಗಳಿಂದ ದೂರ ಉಳಿದ ಡಾಕ್ಟರ್
ಹತ್ತಾರು ಸಂಘಸಂಸ್ಥೆಗಳು ನೂರಾರು ಪ್ರಶಸ್ಥಿಗಳನ್ನು ಪ್ರಕಟಸಿದ್ದರೂ ಎಷ್ಟೋ ಪ್ರಶಸ್ತಿ ತೆಗೆದುಕೊಳ್ಳಲು ನಿರಾಕರಿಸುವ ಮೂಲಕ ಜನಸೇವೆ ಜರ್ನಾಧನ ಸೇವೆ ಎನ್ನುವ ಸಿದ್ದಾಂತದ ಬದ್ದತೆಯ ಡಾ.ಹೆಚ್.ಜಿ.ಉಮಾಪತಿ ಇವರಿಗೆ ತಾಲೂಕಿನ ನೂರಾರು ಸಂಘಟನೆಗಳು ಸೇರಿ ನಾಗರಿಕ ಪ್ರಶಸ್ತಿ ಜತೆ (Dr. Umapathy) ಅಭಿನಂದನಾ ಕಾರ್ಯಕ್ರಮ ಕೈಗೊಂಡಿವೆ. ನಿಸ್ವಾರ್ಥ ನಿಜ ಸೇವಕನಿಗೆ ಸಲ್ಲಿಸುವ ಸಾರ್ಥಕ ಸನ್ಮಾನಕ್ಕೆ ಪ್ರತಿಯೊಬ್ಬರು ಸಾಕ್ಷಿಯಾಗಬೇಕಿದೆ.
ಡಾಕ್ಟರ್ ಉಮಾಪತಿ ಅನಿಸಿಕೆ :
ದೇವರು ನನಗೆ ಕೊಟ್ಟಿದ್ದು, ನಾನು ಬಡವರಿಗೆ ಕೊಟ್ಟಿದ್ದೇನೆ. ನಾನು ನೆಪ ಮಾತ್ರ, ಬಡವರ ಕೆಲಸವೇ ದೇವರ ಕೆಲಸ, ನಾನು ವೈದ್ಯನಾಗಿ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಪುಣ್ಯ. ನಮ್ಮ ರೋಗಿಗಳೇ ನಮ್ಮ ದೇವರು. ಅವರ ಕೆಲಸ ಮಾಡಬೇಕೇಷ್ಟೆ. **
ಡಾ.ಹೆಚ್.ಜಿ.ಉಮಾಪತಿ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252