Chitradurga news|nammajana.com|18-8-2024
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನಾದ್ಯಂತ ಶುಕ್ರವಾರ ನಡುರಾತ್ರಿ ಆಶ್ಲೆಷ ಮಳೆಯ ಕಡೆಯಪಾದ ನಿರೀಕ್ಷೆಗೂ ಮೀರಿ ಹೆಚ್ಚಾಗಿದ್ದು, ಒಂದೇ ಹಂತದಲ್ಲಿ ಸುಮಾರು ೨೩೯.೧೪ (Challakere rain damage)ಎಂ.ಎಂ.ಮಳೆ ದಾಖಲಾಗಿದೆ. ಮಳೆಯಿಂದ ಜಮೀನಿನ ಬೆಳೆಗಳು ನೀರಿನಿಂದ ಆವೃತ್ತವಾಗಿ, ಸಿಡಿಲಿನಿಂದ ಸುಮಾರು ೧೦೬ ಕುರಿಗಳು ಸಾವನಪ್ಪಿವೆ.
ತಾಲ್ಲೂಕಿನ ಜಾಜೂರು ಗ್ರಾಮದ ಅಂಜಿನಪ್ಪ ತನ್ನ ಬಾಬ್ತು ೯೦, ಓಬಯ್ಯ ೧೬ ಕುರಿಗಳನ್ನು ಮನೆ ಸಮೀಪದ ಕುರಿರೊಪ್ಪದಲ್ಲಿ (Challakere rain damage) ಕೂಡಿಹಾಕಿದ್ದರು. ರಾತ್ರಿ ೧೦ರ ಸಮಯದಲ್ಲಿ ವಿಪರೀತ ಮಳೆ ಆರಂಭವಾಗಿ ಕುಡುಗು, ಮಿಂಚು ಸಹ ಆರಂಭವಾಗಿದೆ.
ಇದೇ ಸಂದರ್ಭದಲ್ಲಿ ಸಿಡಿಲು ಬಡಿದು ಒಟ್ಟು ೧೦೬ ಕುರಿಗಳು ಸಾವನಪ್ಪಿವೆ. ಘಟನೆ ನಡೆದ ಸ್ಥಳಕ್ಕೆ ತಹಶೀಲ್ಧಾರ್ (Challakere rain damage) ರೇಹಾನ್‌ಪಾಷ, ಪಶುವೈದ್ಯಾಧಿಕಾರಿ ರೇವಣ್ಣ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತಪಟ್ಟ ಕುರಿಗಳ ಶವಪರೀಕ್ಷೆಯನ್ನು ನಡೆಸಿದರು.
ತಾಲ್ಲೂಕಿನಾದ್ಯಂತ ಶುಕ್ರವಾರ ಮಳೆ ಪ್ರಮಾಣ
ದೇವರಮರಿಕುಂಟೆ-೬೩.೦೪, ತಳಕು-೫೯.೦೨, ಪರಶುರಾಮಪುರ-೪೯.೦೨, ನಾಯಕನಹಟ್ಟಿ-೪೧.೦೬, ಚಳ್ಳಕೆರೆ-೨೭.೦೦ ಒಟ್ಟು ೨೩೧.೧೪ ಎಂ.ಎA. ಮಳೆಯಾಗಿದ್ದು, ಕಳೆದ ೧೪ರ ರಾತ್ರಿ ೧೯೮.೧೮ ಎಂ.ಎA ಮಳೆಯಾಗಿತ್ತು. ಒಟ್ಟು ಮೂರು ದಿನಗಳಲ್ಲಿ ೪೩೮.೧೨ ಎಂ.ಎಂ ಮಳೆಯಾಗಿದೆ.
ತಾಲ್ಲೂಕಿನ ಪಿ.ಮಹದೇವಪುರ ಗ್ರಾಮದ ಸಣ್ಣ ಹನುಮಕ್ಕ ಎಂಬುವವರ ರಿ ಸರ್ವೆ ನಂ,೩೩/೧೧ರಲ್ಲಿ ೩.೧೨ ಎಕರೆ ಕರಬೂಜ ಬೆಳೆ ಮಳೆಯ ನೀರಿನಿಂದ ಕೊಚ್ಚಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಹೊಸಮುಚ್ಚುಗುಂಟೆ ಗ್ರಾಮದಲ್ಲಿ ಮೂರು ಎಕರೆ ಪ್ರದೇಶದಲ್ಲಿದ್ದ ಮೆಕ್ಕೆಜೋಳ, ಎರಡು ಎಕರೆ ಪ್ರದೇಶದ ಈರುಳ್ಳಿ ಬೆಳೆ ನೀರಿನಿಂದ ಆವೃತ್ತವಾಗಿ ಸಂಪೂರ್ಣ ನಷ್ಟ ಉಂಟಾಗಿದೆ.
ತಾಲೂನಕಿನ ಮನೆ ಕುಸಿತದ ವಿವರ
ಮನ್ನೇಕೋಟೆ ಗ್ರಾಮದ ಹರೀಶ್ ಎಂಬುವವರ ವಾಸದ ಮನೆಯ ಮೇಲ್ಚಾವಣೆ ಕುಸಿದು ಬಿದ್ದು ೩೦ ಸಾವಿರ ನಷ್ಟ ಸಂಭವಿಸಿದೆ. ರಾಮದುರ್ಗದ ನಿರಂಜನಮೂರ್ತಿ ಮತ್ತು ಕಸ್ತೂರಿ ರಂಗಪ್ಪನಾಯಕ ಎಂಬುವವರ ಮನೆಯ ಮೇಲ್ಚಾವಣೆ ಕುಸಿದು ಒಂದು ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ.
ವಿಡಪನಕುಂಟೆ ಗ್ರಾಮದ ಸರ್ವೆ ನಂ, ೫೭/೩ ತಾಯಮ್ಮ ಎಂಬುವವರ ಸೇರಿದ ಎಂಟು ಎಕರೆ ಪ್ರದೇಶದ ಅಡಿಕೆ ಗಿಡಿ ಸಂಪೂರ್ಣವಾಗಿ ನೀರಿನಿಂದ ಆವೃತ್ತವಾಗಿ ಲಕ್ಷಾಂತರ ರೂಪಾಯಿ ನಷ್ಟ ವಾಗಿದೆ.
ಇದನ್ನೂ ಓದಿ: ಗೌರಸಮುದ್ರ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಾಂಕ ಫಿಕ್ಸ್ |Gourasamudra Maramma
ದೇವರಮರಿಕುಂಟೆ ಗ್ರಾಮ ಸರ್ಕಾರಿ ಶಾಲೆಯ ಆವರಣದಲ್ಲಿ ಮಳೆಯ ನೀರು ನುಗ್ಗಿ ಮಕ್ಕಳು ಶಾಲೆಯ ಒಳಗೆ (Challakere rain damage) ಪ್ರವೇಶಿಸದಂತಹ ವಾತಾವಣ ಉಂಟಾಗಿದೆ. ಶಾಲೆಯ ಸುತ್ತಲು ನೀರು ನಿಂತು ನೀರು ದಾಟಲು ವಿದ್ಯಾರ್ಥಿಗಳು ಪರಿತಪಿಸಿದರು. ಗ್ರಾಮದ ಶಾಲಾ ಕಟ್ಟಡ ಶಿಥಿಲ ವ್ಯವಸ್ಥೆಯಲ್ಲಿದ್ದು ತುರ್ತು ರಿಪೇರಿಗೆ ಗ್ರಾಮಸ್ಥರು ಆಗ್ರಹಿಸಿದ್ಧಾರೆ.