Chitradurga news | nammajana.com | 22-8-2024
ವಿಶೇಷ ವರದಿ: ಮಾನಸ ಬಸವರಾಜ್ ತುಂಬಿನಕೆರೆ
ನಮ್ಮಜನ.ಕಾಂ, ಹೊಸದುರ್ಗ: ರಾಜಕೀಯ ಕ್ಷೇತ್ರದಲ್ಲಿ (Hosadurga News) ಹೊಸದುರ್ಗವೆಂಬುದು ರಾಜ್ಯದಲ್ಲಿಯೇ ವಿಶೇಷ ಸ್ಥಾನವನ್ನು ಹೊಂದಿದೆ.ಒಮ್ಮೆ ರಾಜಕೀಯ ಪಕ್ಷಗಳು ಮತ್ತು ಪಕ್ಷೇತರರ ನಡುವೆ ನಿರಂತರ ಜಿದ್ದಾಜಿದ್ದಿ ನಡೆಯುತ್ತಲೇ ಬಂದಿದೆ.
ಕಳೆದ ಪುರಸಭಾ ಚುನಾವಣೆ ಸಮಯದಲ್ಲಿ ಬಿಜೆಪಿಯಲ್ಲಿ ಶಾಸಕ ಗೋಳಿಹಟ್ಟಿ ಶೇಖರ್ ಅವರು ಶಾಸಕರಾಗಿದ್ದರು. 23 ಸದಸ್ಯ ಬಲವನ್ನ ಒಳಗೊಂಡ ಹೊಸದುರ್ಗ ಪುರಸಭಾ ಬಿಜೆಪಿ (Hosadurga News) ಸದಸ್ಯರ ಸಂಖ್ಯೆ 14, ಕಾಂಗ್ರೆಸ್ ಸದಸ್ಯರ ಸಂಖ್ಯೆ 04, ಪಕ್ಷೇತರರ 05 ಸ್ಥಾನಗಳು.
ಪರಿಶಿಷ್ಟ (ST) ಪಂಗಡಕ್ಕೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಶಂಕ್ರಪ್ಪ ಹಾಗೂ ಬಿಜೆಪಿಯ ರಾಜೇಶ್ವರಿ ಆನಂದ್ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತಾದರೂ (Hosadurga News) ಈಗಾಗಲೇ ಬಿಜೆಪಿಯ ಎಲ್ಲಾ 14 ಸದಸ್ಯರು ಮತ್ತು ಪಕ್ಷೇತರ 05 ಸದಸ್ಯರು ಒಟ್ಟಿಗೆ ಪ್ರವಾಸದಲ್ಲಿರುವ ಮಾಹಿತಿ ಲಭ್ಯವಾಗಿದೆ.
ಉಪಾಧ್ಯಕ್ಷ ಸ್ಥಾನ ಬಿ ಸಿ ಎಂ ‘ಎ ‘ಮಹಿಳೆಗೆ ಮೀಸಲಿದ್ದು ಬಿಜೆಪಿಯ ಗೀತಾ ಆಸಂದಿ ಕಣದಲ್ಲಿ ಉಳಿಯಬಹುದು ಎಂಬ ಲೆಕ್ಕಾಚಾರವಿದೆ. ಆದರೂ ಅಧಿಕಾರದಲ್ಲಿರುವ ಕಾಂಗ್ರೆಸ್ ಶಾಸಕ ಬಿ ಜಿ ಗೋವಿಂದಪ್ಪನವರ ಚದುರಂಗದಾಟದಲ್ಲಿ ಅತೃಪ್ತ (Hosadurga News) ಕೆಲವು ಬಿಜೆಪಿ ಪಕ್ಷೇತರರು ಹಾಗೂ ಕಾಂಗ್ರೆಸ್ ಸದಸ್ಯರು ಒಟ್ಟಿಗೆ ಸೇರಿ ಕಾಂಗ್ರೆಸ್ ಅಧಿಕಾರ ಹಿಡಿದರೆ ಅಚ್ಚರಿಪಡಬೇಕಾಗಿಲ್ಲ.
ಈಗಾಗಲೇ ಬಿಜೆಪಿಯ ಜಿಲ್ಲಾಧ್ಯಕ್ಷ ಮುರುಳಿ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್ ರವರು ಎಲ್ಲಾ ಬಿಜೆಪಿ ಸದಸ್ಯರಿಗೆ ವಿಪ್ ಜಾರಿ ಮಾಡಿ ಪಕ್ಷದ ಅಭ್ಯರ್ಥಿಗೆ ಮತ ಹಾಕಲು ತಿಳಿಸಿರುತ್ತಾರೆ.
ಇದನ್ನೂ ಓದಿ: Chitradurga Rain | ಜಿಲ್ಲೆಯಲ್ಲಿ ಸುರಿದ ಜೋರು ಮಳೆಗೆ 49 ಮನೆ ಹಾನಿ | ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ?
ಇದಕ್ಕೆಲ್ಲಾ ಇಂದಿನ ಚುನಾವಣೆಯಲ್ಲಿ ಉತ್ತರ ಸಿಗಲಿದೆ. (Hosadurga News) ಏನಾದರೂ ಆಗಲಿ ಕಳೆದ ಒಂದುವರೆ ವರ್ಷದಿಂದ ಅಧ್ಯಕ್ಷ ಸ್ಥಾನ ಖಾಲಿ ಇದ್ದು ಬೇಗನೆ ಚುನಾವಣೆ ನಡೆದು ನಗರವನ್ನ ಅಭಿವೃದ್ಧಿ ಮಾಡುವ ಅಧ್ಯಕ್ಷರಾಗಲಿ ಎಂಬುದೇ ನಮ್ಮ ಆಸೆ ಎನ್ನುತ್ತಾರೆ ಹೊಸದುರ್ಗ ನಗರದ ನಾಗರಿಕರು.
ಬಾಕ್ಸ್
ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಭಾರತ ದೇಶ ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗಲು ಬಿಜೆಪಿಯ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನ ಮತ್ತು. ಬಿಜೆಪಿಯ ತತ್ವ ಸಿದ್ಧಾಂತಗಳನ್ನಒಪ್ಪಿ ಕೆಲಸ ಮಾಡುತ್ತಿದ್ದೇನೆ ಜನರು ಬಿಜೆಪಿಯನ್ನು ನಂಬಿ ನನಗೆ ಮತ ಹಾಕಿದ್ದಾರೆ. ವಾರ್ಡಿನ ಮತದಾರರ ಮನಸ್ಸಿಗೆ ನೋವಾಗದಂತೆ ಪಕ್ಷ ಹೇಳಿದ ನಮ್ಮ ಅಭ್ಯರ್ಥಿಗೆ ಮತ ಬಿಜೆಪಿ ಸದಸ್ಯನಾದ ನನ್ನ ಕರ್ತವ್ಯ.ನಮ್ಮ ಗುರಿ ಬಿಜೆಪಿಯ ತೆಕ್ಕೆಗೆ ಹೊಸದುರ್ಗ ಪುರಸಭೆಯನ್ನು ಅಧಿಕಾರಕ್ಕೆ ತರುವುದು.
ದಾಳಿಂಬೆ ಗಿರೀಶ್, ಪುರಸಭಾ ಸದಸ್ಯ,