Chitradurga news | nammajana.com | 25-8-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಪಕ್ಷೇತರ ಸದಸ್ಯರ (Municipal Council Election) ನಡುವೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಗದ್ದುಗೆ ಗುದ್ದಾಟ ಏರ್ಪಟ್ಟಿದೆ.
ಈ ಬಾರಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ನಗರಸಭೆಯ ಗದ್ದುಗೆ ಏರಲು ಭಾರೀ ರಣತಂತ್ರ ಹೆಣೆದಿದ್ದು ಯಾರಿಗೆ ಅಧ್ಯಕ್ಷ ಸ್ಥಾನ ಒಲಿಯಲಿದೆ ಎಂಬುದನ್ನು ಕಾದು (Municipal Council Election) ನೋಡಬೇಕಿದೆ.
ಬಿಜೆಪಿ ಪಕ್ಷಕ್ಕೆ ಒಲಿದಿದ್ದ ನಗರಸಭೆ (Municipal Council Election)
ಕಳೆದ ನಗರಸಭೆ ಚುನಾವಣೆಯಲ್ಲಿ ಚಿತ್ರದುರ್ಗ ನಗರಸಭೆ ಬಿಜೆಪಿ ಬಾವುಟ ಹಾರಿಸಿತ್ತು. ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ 19ನೇ ವಾರ್ಡ್‌ನಿಂದ (Municipal Council Election) ಆಯ್ಕೆಯಾದ ತಿಪ್ಪಮ್ಮ ಅಧ್ಯಕ್ಷ ಸ್ಥಾನ ಅಲಂಕರಿಸಿ ಎರಡುವರೇ ವರ್ಷ ಪೂರೈಸಿದ್ದರು.
ಪರಿಶಿಷ್ಟ ಪಂಗಡಕ್ಕೆ ಮೀಸಲಾದ್ದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ಈ ಮೀಸಲಾತಿ ಹೊಂದಿದ ಸದಸ್ಯರಿರಲಿಲ್ಲ. (Municipal Council Election) ಹಿಂದುಳಿದ ವರ್ಗ ‘ಎ’ಗೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಹಲವರು ಉಪಾಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದರು.
ಸಂಖ್ಯಾ ಬಲ ಪಕ್ಷಗಳ ವಿವರ (Municipal Council Election)
ಚಿತ್ರದುರ್ಗ ನಗರಸಭೆಯಲ್ಲಿ 35 ವಾರ್ಡ್ ಹೊಂದಿದ್ದು ಬಿಜೆಪಿ 17, ಪಕ್ಷೇತರ 7, ಜೆಡಿಎಸ್ 6 ಹಾಗೂ ಕಾಂಗ್ರೆಸ್ 5 ಸದಸ್ಯ ಬಲ ಹೊಂದಿತ್ತು. ಕಾಂಗ್ರೆಸ್ ನಗರಸಭೆ ಸದಸ್ಯ ಮಲ್ಲಿಕಾರ್ಜುನ್ ಅಕಾಲಿಕ ಮರಣದಿಂದ ಒಂದು ಸ್ಥಾನ ಖಾಲಿಯಿದ್ದು ಕಾಂಗ್ರೆಸ್ ಸದಸ್ಯ ಬಲ 4 ಕ್ಕೆ ಇಳಿದಿತ್ತು. ಆದರೆ ರಾಜಕೀಯ ಬದಲಾವಣೆಯಲ್ಲಿ ಇಬ್ಬರು ಪಕ್ಷೇತರ ನಗರಸಭೆ ಸದಸ್ಯರು ಕಾಂಗ್ರೆಸ್ ಸೇರ್ಪಡೆಯಾದ ಹಿನ್ನಲೆ ಕಾಂಗ್ರೆಸ್ ಸದಸ್ಯ ಬಲ 6 ಕ್ಕೆ ಏರಿದೆ.
ಸರಳ ಬಹುಮತಕ್ಕೆ19 ಮತಗಳು (Municipal Council Election)
ನಗರಸಭೆಯ ಸರಳ ಬಹುಮತಕ್ಕೆ 19 ಮತಗಳ ಅಗತ್ಯವಿದೆ. ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮತ ಕಾಂಗ್ರೆಸ್ ಪಕ್ಷಕ್ಕೆ ಪ್ಲಸ್ ಆಗಿದೆ. ಸಂಸದ ಗೋವಿಂದ ಕಾರಜೋಳ ಮತ ಬಿಜೆಪಿ (Municipal Council Election) ಪಾಲಾಗಲಿದೆ.
ನಗರಸಭೆ ಚುನಾವಣೆಯಲ್ಲಿ ಮಹಾಮೈತ್ರಿ ಸಾಧ್ಯತೆ
ನಗರಸಭೆ ಚುನಾವಣೆ ಇತಿಹಾಸದಲ್ಲಿ ಎಂದು ಕಾಣದಂತಹ ಮೈತ್ರಿಯನ್ನು ನೋಡುವ ಅವಕಾಶವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದು ಸ್ಥಳೀಯ ಶಾಸಕ ಕೆ.ಸಿ. ವೀರೇಂದ್ರ ಅವರು ಬಿಜೆಪಿ ಆಡಳಿತದಲ್ಲಿರುವ ಚಿತ್ರದುರ್ಗ ನಗರಸಭೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಸಿದ್ದವಾಗಿದ್ದಾರೆ ಎಂಬುದರ ಭಾಗವಾಗಿ ಶನಿವಾರ ಇಬ್ಬರು ಪಕ್ಷೇತರ ಸದಸ್ಯರನ್ನು ಕಾಂಗ್ರೆಸ್ ಸೆಳೆದು ರಾಜಕೀಯ ದಾಳ ಹುರುಳಿಸಿದ್ದಾರೆ.
ಅಸಮಾಧಾನಿತ ಬಿಜೆಪಿಗರ ಸೆಳೆಯಲು ಶಾಸಕ ಕೆ.ಸಿ.ವೀರೇಂದ್ರ ಯತ್ನ
ಕೆ.ಸಿ.ವೀರೇಂದ್ರ ಪಪ್ಪಿ ಅವರು ಬಿಜೆಪಿಯಲ್ಲಿ ಅಸಮಾಧಾನ ಲಾಭ ಪಡೆಯುವ ಕೆಲಸ ಮಾಡುತ್ತಿದ್ದು ಪಕ್ಷೇತರರ ಬೆಂಬಲ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಬೆಂಬಲ ಪಡೆಯುವ ಮೂಲಕ ನಗರಸಭೆ ಕಾಂಗ್ರೆಸ್ ವಶಕ್ಕೆ ಪಡೆಯಲು ಯತ್ನಿಸುತ್ತಿದ್ದು ಬಿಜೆಪಿ ಪಾಳೆಯದಲ್ಲಿ ಆತಂಕ ಮನೆ ಮಾಡಿದೆ.
ಮೀಸಲಾತಿ ವಿವರ
ಸರ್ಕಾರದಿಂದ ಚಿತ್ರದುರ್ಗ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ ಮಹಿಳೆಗೆ ನಿಗದಿಯಾಗಿದೆ.
ಕಾಂಗ್ರೆಸ್-ಬಿಜೆಪಿ ನಡುವೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ
ಕಾಂಗ್ರೆಸ್ ಪಕ್ಷದಿಂದ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ 29 ವಾರ್ಡ್‌ನಿಂದ ಪಕ್ಷೇತರರಾಗಿ ಆಯ್ಕೆಯಾಗಿ ಕಾಂಗ್ರೆಸ್ ಸೇರ್ಪಡೆಯಾಗಿರುವ ಸುನೀತಾ ರಾಘವೇಂದ್ರ ನಾಮಪತ್ರ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಇದೆ. ಬಿಜೆಪಿ ಪಕ್ಷದಿಂದ 32 ನೇ ವಾರ್ಡನ ಬಿಜೆಪಿ ನಗರಸಭೆ ಸದಸ್ಯೆ ತಾರಕೇಶ್ವರಿ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.
22 ನಗರಸಭೆ ಸದಸ್ಯರ ಹೊಸ ಟೀಂ ಸೃಷ್ಟಿ
ನಗರಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಪಕ್ಷೇತರ ನಗರಸಭೆ ಸದಸ್ಯರು ಸೇರಿ ಹೊಸ ಟೀಂ ರೆಡಿಯಾಗಿದ್ದು ಬಹುತೇಕ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿಯಬಹುದು ಎಂಬ ಮಾತು ರಾಜಕೀಯ ವಲಯಲ್ಲಿ ಕೇಳಿ ಬರುತ್ತಿದ್ದರು ಸಹ ರಾಜಕೀಯದಲ್ಲಿ ಯಾವ ಕ್ಷಣದಲ್ಲಿ ಯಾವ ಬದಲಾವಣೆ ಆದರು ಆಶ್ವರ್ಯವಿಲ್ಲ. ಈ ಎಲ್ಲಾವೂ ನಾಳೆ ನಡೆಯುವ (Municipal Council Election) ಚುನಾವಣೆಯಲ್ಲಿ ಯಾರು ನಗರಸಭೆ ಗದ್ದುಗೆ ಏರಲಿದ್ದಾರೆ ಎಂಬುದು ಅಧಿಕೃತವಾಗಿ ಹೊರಬೀಳಲು ನಾಳೆ ಮಧ್ಯಾಹ್ನದವರೆಗೂ ಕಾದು ನೋಡಬೇಕಿದೆ.