Chitradurga news | nammajana.com| 2-9-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತದುರ್ಗ ಜಿಲ್ಲೆಯ ಪ್ರತಿಷ್ಠಿತ ಮಠಗಳಲ್ಲಿ ಒಂದಾಗಿರುವ ಸಿರಿಗೆರೆ ಮಠದ ಆಸ್ತಿ ವಿವಾದ (Taralabalu math) ಪೀಠಕ್ಕೆ ಹೊಸ ಶಿಷ್ಯರ ನೇಮಕ ಮಾಡಬೇಕು ಎಂದು ದಾವಣಗೆರೆ ಸಾಧುಸದ್ದರ್ಮ ಲಿಂಗಾಯತ ಮುಖಂಡರು ತರಳಬಾಳು ಶ್ರೀಗಳ ವಿರುದ್ದ ಸಿಡಿದಿದ್ದಾರೆ.
ಮಠದ ಆಸ್ತಿ ವಿವಾದ ಹೆಚ್ಚಾಗುತ್ತಿದ್ದು, ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗೆ ಭಕ್ತರ ವಿರೋಧ ಸಹ ಹೆಚ್ಚಾಗಿದೆ. ದಾವಣಗೆರೆ ಸಾದರ ಲಿಂಗಾಯತ ಭಕ್ತರ ಬಣ ವಿರೋಧ (Taralabalu math) ಮಾಡಿದರೆ, ಚಿತ್ರದುರ್ಗದ ಭಕ್ತರ ಬಣ ಸ್ವಾಮೀಜಿ ಪರ ನಿಂತಿದೆ.
ಸಿರಿಗೆರೆ ಶ್ರೀ ವಿರುದ್ಧ ಮತ್ತೆ ದಂಡೆದ್ದ ಭಕ್ತ ಸಮೂಹ, ಮರಿ ಪೀಠಾಧೀಪತಿ ಯಾರು ಎಂದು ಪ್ರಶ್ನೆ ಮಾಡುತ್ತಿದ್ದು, ಟ್ರಸ್ಟ್ ಡೀಡ್ ರದ್ದುಗೊಳಿಸಲು ಒತ್ತಾಯಿಸುತ್ತಿದ್ದಾರೆ.
ಸ್ವಾಮೀಜಿ ಹೆಸರಲ್ಲಿ 2 ಸಾವಿರ ಕೋಟಿ ಆಸ್ತಿ (Taralabalu math)
ತಮ್ಮ ಸ್ವ ಹಿತಾಸಕ್ತಿಗಾಗಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ 30 ವರ್ಷದ ಹಿಂದೆ ಟ್ರಸ್ಟ್ ಡೀಡ್ ಮಾಡಿದ್ದು, ತಮ್ಮ (Taralabalu math) ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ರೇಬಲ್ ಮುಖಂಡರು ಆರೋಪಿಸುತ್ತಿದ್ದಾರೆ.
ಸಮಾಜದ ಇಡೀ ಆಸ್ತಿಯನ್ನು ಒಬ್ಬರೇ ಬರೆದುಕೊಂಡಿದ್ದಾರೆ. ಜಗದ್ಗುರು ಆದವರಿಗೆ ಹಣ, ಆಸ್ತಿ ಆಸೆ ಇರಬೇಕೆ? ವೀರಶೈವ ಸಮಾಜದ ಹಲವಾರು ಸ್ವಾಮೀಜಿಗಳು ಸಮಾಜದ (Taralabalu math) ಉದ್ಧಾರಕ್ಕಾಗಿ ಶ್ರಮಿಸಿದ್ದಾರೆ. ಆದರೆ, ಸಿರಿಗೆರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಮಾಜದ 2 ಸಾವಿರ ಕೋಟಿ ಮೌಲ್ಯದ ಇಡೀ ಆಸ್ತಿಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.
ತೆರಿಗೆ ಉಳಿಸುವ ನೆಪದಲ್ಲಿ ಟ್ರಸ್ಟ್ ಡೀಡ್
ತೆರಿಗೆ ಉಳಿಸುವ ನೆಪದಲ್ಲಿ ಟ್ರಸ್ಟ್ ಡೀಡ್ ಮಾಡಿಕೊಂಡಿದ್ದಾರೆ. ಹಾಗಾದರೆ ಈ ಟ್ರಸ್ಟ್ ಡೀಡ್‌ನ್ನು 30 ವರ್ಷಗಳಿಂದಲೂ ರಹಸ್ಯವಾಗಿಯೇ ಇಟ್ಟಿದ್ದು ಏಕೆ? 2 ಸಾವಿರ ಕೋಟಿ ಮೌಲ್ಯದ ಇಡೀ ಆಸ್ತಿಯನ್ನು ಸ್ವಾಮೀಜಿ ಒಬ್ಬರೇ ಬರೆದುಕೊಂಡಿರುವುದು ಎಷ್ಟು ಸರಿ? ಸಮಾಜದ ಆಸ್ತಿಯನ್ನು ತಮ್ಮ ಹೆಸರಿಗೆ (Taralabalu math) ಬರೆಸಿಕೊಂಡರೆ ಹೇಗೆ? ಹಿರಿಯ ಜಗದ್ಗುರುಗಳು ಮಾಡದ ಬೈಲಾದಲ್ಲಿ ಸಮಾಜದ ಹಿರಿಯರು, ಗುರುಗಳ ನೇತೃತ್ವದಲ್ಲಿ ಉತ್ತರಾಧಿಕಾರಿ ನೇಮಕ ಮಾಡಬೇಕೆಂಬುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ.ಆದರೆ ಗುರುಗಳು ಉತ್ತರಾಧಿಕಾರಿಯನ್ನು ನೇಮಿಸಲು ಮೀನಮೇಷ ಎಣಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಸಿರಿಗೆರೆ ಮಠದ ವಿರುದ್ದ ರೆಸಾರ್ಟ್ ಸಭೆ ನಡೆಸಿದ ನಾಯಕರು ಯಾರು? | Sirigere Math
ಒಬ್ಬ ಶಿಷ್ಯರನ್ನು ಪೀಠಕ್ಕೆ ಆಯ್ಕೆ ಮಾಡಿ
ಉದ್ಯಮಿ ಅಣಬೇರು ರಾಜಣ್ಣ ಮಾತನಾಡಿ, ಈಗಾಗಲೇ ಸ್ವಾಮೀಜಿಗೆ 78 ವರ್ಷ ವಯಸ್ಸಾಗಿದೆ. ನೂರು ವರ್ಷ ಬದುಕಲಿ ಇದಕ್ಕೆ ನಮ್ಮ ತಕರಾರು ಇಲ್ಲ. ತಮ್ಮಲ್ಲಿನ ಐದು ಜನ ಶಿಷ್ಯರಲ್ಲಿ ಒಬ್ಬರನ್ನು ಆಯ್ಕೆ ಮಾಡಲಿ. ನಾಲ್ಕು ಗೋಡೆಗಳ ಮಧ್ಯೆದಲ್ಲೇ ಈ ಎಲ್ಲಾ ವಿಚಾರ ಚರ್ಚೆ ಮಾಡಬೇಕೆಂಬುದು ನಮ್ಮ (Taralabalu math) ಆಶಯವಾಗಿದೆ. ಆದರೆ, ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ಅದಕ್ಕೆ ಅವಕಾಶವನ್ನೇ ನೀಡುತ್ತಿಲ್ಲ ಎಂದು ಸ್ವಾಮೀಜಿ ವಿರುದ್ದ ಕುಟುಕಿದರು.