Chitradurga news | nammajana.com | 2-9-2024
ನಮ್ಮಜನ.ಕಾಂ, ಮೊಳಕಾಲ್ಮುರು: ರಾಯಾಪುರ ಗ್ರಾಮ (Huge mushroom) ಸಮೀಪದ ಹೊಲವೊಂದರಲ್ಲಿ ಅಪರೂಪದ ಬೃಹತ್ ಗಾತ್ರದ ನೈಸರ್ಗಿಕ ಅಣಬೆ ಪತ್ತೆಯಾಗಿದೆ.
ಅಪರೂಪದಲ್ಲಿ ಅಪರೂಪ ಎನ್ನಬಹುದಾದ ತಿನ್ನಲು ಯೋಗ್ಯವಾಗಿರುವ ಈ ಅಣಬೆಯು ಸುಮಾರು ಒಂದು ಅಡಿ (Huge mushroom) ಎತ್ತರ ಒಂದು ಅಡಿ ಅಗಲ ಇದ್ದು ಸುಮಾರು ಐದು ಕೆಜಿ ತೂಕದ ಅಣಬೆ ಇದಾಗಿದೆ.

ಕಾಡು ಜಾತಿಗೆ ಸೇರಿರುವ ಈ ಅಣಬೆಯು ಇತ್ತೀಚೆಗೆ ಸುರಿದ ಮಳೆಯಿಂದಾಗಿ ಬೆಳೆದು ದೊಡ್ಡದಾಗಿರುವ ಈ ಅಣಬೆಯು ಹೊಲದಲ್ಲಿ ಬಿಳಿ ಛತ್ರಿಯಂತೆ ಕಂಡುಬಂದಿದೆ.
ಇದನ್ನೂ ಓದಿ: ಸಿರಿಗೆರೆ ಮಠದ ತರಳಬಾಳು ಶ್ರೀ ಗಳಿಗೆ ವಿರೋಧಿ ಬಣದ ಎರಡು ಬೇಡಿಕೆಗಳು | Taralabalu math
ಭಾನುವಾರದಂದು ಅಣಬೆ ಶಿಖಾರಿಗೆಂದು ಹೊರಟು ಕಾಡು ಮೇಡು ಅಲೆಯುತ್ತಿದ್ದ ಪ್ರಕಾಶ್ ಎಂಬುವರಿಗೆ ಈ ಅಪರೂಪದ ಅಣಬೆಯು ಹೊಲವೊಂದರಲ್ಲಿ ಪತ್ತೆಯಾಗಿದೆ. ಮಳೆ ಬೀಳುವ ಸಂದರ್ಭದಲ್ಲಿ ಫಲವತ್ತಾದ ಭೂಮಿಯಲ್ಲಿ ಅಣಬೆಗಳು (Huge mushroom) ಹುಟ್ಟಿಕೊಳ್ಳುವುದು ಸಹಜ,ಆದ್ರೆ ಈ ದೊಡ್ಡ ಪ್ರಮಾಣದ ಅಣಬೆ ಸಿಕ್ಕಿರುವುದು ಇದೆ ಮೊದಲು ಎನ್ನುತ್ತಾರೆ ಪ್ರಕಾಶ್.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252