
Chitradurga news | Nammajana.com | 4-9-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (DCC) ಚುನಾವಣೆ ರಾಜಕೀಯ ಮಗ್ಗಲಿಗೆ (DCC Bank Election) ಉರುಳಿದ್ದು ನಿರ್ದೇಶಕ ಸ್ಥಾನಗಳ ಚುನಾವಣೆಯಲ್ಲಿ ಷಡ್ಯಂತ್ರದ ಆಟ ಶುರುವಾಗಿದೆ.
ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಗಳಿಗೆ ಸೆಪ್ಟೆಂಬರ್ 12 ರಂದು ಚುನಾವಣೆ ನಿಗದಿಯಾಗಿದ್ದು ಕಳೆದ ಬಾರಿ ಮತ ಚಲಾಯಿಸಿದ್ದಂತಹ 200 ಸೊಸೈಟಿಗಳಿಗೆ ಮತದಾನದಿಂದ ವಂಚಿತರಾಗಿದ್ದು ಇದರ ಹಿಂದೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಟಾರ್ಗೆಟ್ ಮಾಡಿರುವುದು ಸ್ಪಷ್ಟವಾಗುತ್ತಿದೆ.

ಡಿಸಿಸಿ ಬ್ಯಾಂಕಿನ ನಿರ್ದೇಶಕ, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಪ್ರತಿನಿಧಿಸುವ ಕಡಬನಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕೂಡ ಮತದಾನದಿಂದ ವಂಚಿತವಾಗಿದೆ. ಹೀಗಾಗಿ ಸಹಕಾರ ಬ್ಯಾಂಕಿನ ನಿರ್ದೇಶಕರಾಗಿದ್ದಾರೆ.
ಶಾಸಕ ಟಿ.ರಘುಮೂರ್ತಿ ಮತದಾನ ಹಾಗೂ ಚುನಾವಣೆಗೆ ಸ್ಪ ರ್ಧಿಸುವ ಅವಕಾಶದಿಂದ ವಂಚಿತರಾಗಿದ್ದು ಭಾರೀ ಕುತೂಹಲ ಕೆರಳಿಸಿದೆ.
ಜಿಲ್ಲೆಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘ, ಹಾಲು ಒಕ್ಕೂಟ, ಅರ್ಬನ್ ಬ್ಯಾಂಕುಗಳು ಸೇರಿದಂತೆ ಒಟ್ಟು 419 ಸೊಸೈಟಿಗಳು ಡಿಸಿಸಿ ಬ್ಯಾಂಕ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಬರೋಬ್ಬರಿ 200 ಸೊಸೈಟಿಗಳು ಡಿಸಿಸಿ ಬ್ಯಾಂಕಿನ ಬೈಲಾ, (DCC Bank Election) ಕಾಯ್ದೆಗಳಿಂದ ಮತದಾನದಿಂದ ವಂಚಿತವಾಗಿದ್ದಾರೆ.
ಟಿ.ರಘುಮೂರ್ತಿ ಅವರನ್ನು ಡಿಸಿಸಿ ನಿರ್ದೇಶಕ ಸ್ಥಾನದಿಂದ ದೂರವಿಡಲು ಪ್ಲಾನ್
ಕಳೆದ ಬಾರಿ ಡಿಸಿಸಿ ಬ್ಯಾಂಕ್ ನಿಂದ ನಿರ್ದೇಶಕರಾಗಿ ಆಯ್ಕೆ ಆಗಿದ್ದ ಟಿ.ರಘುಮೂರ್ತಿ ಅವರು ಈ ಬಾರಿ ಸಹ ಚುನಾವಣೆಗೆ ಸ್ವರ್ಧೆ ಬಯಸಿದ್ದರು ಆದರೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನೀಡಬಹುದು ಎಂಬ ಕಾರಣಕ್ಕೆ ಅವರ ಆಯ್ಕೆ ಆಗುತ್ತಿದ್ದ (DCC Bank Election) ಸೊಸೈಟಿಯನ್ನು ರದ್ದು ಮಾಡಿದ್ದಾರೆ ಎಂಬ ಮಾತು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕೇಳಿ ಬರುತ್ತದೆ.
ಸೊಸೈಟಿ ರದ್ದುಪಡಿಸಿರುವ ಹಿಂದೆ ರಾಜಕೀಯ ಷಡ್ಯಂತ್ರ
ಡಿಸಿಸಿ ಬ್ಯಾಂಕ್ ಚುನಾವಣೆ ಕಾರ್ಯ ಹೀಗಿರುತ್ತೆ
ಒಟ್ಟು 12 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಇಲ್ಲಿ ಆಯ್ಕೆಯಾದ ನಿರ್ದೇಶಕರು ಆನಂತರ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈಗ ‘ಎ’ಯಿಂದ ‘ಎಫ್’ವರೆಗೆ ಒಟ್ಟು 6ವರ್ಗಗಳಲ್ಲಿ ನಿರ್ದೇಶಕರನ್ನು ಆಯ್ಕೆ ಮಾಡಲಾಗುತ್ತದೆ. ‘ಎ’ ವರ್ಗದಲ್ಲಿ 6 ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ‘ಬಿ’ ವರ್ಗದಲ್ಲಿ ಟಿಎಪಿಸಿಎಂಎಸ್, ‘ಸಿ’ ವರ್ಗದಲ್ಲಿ ಪಟ್ಟಣ ವ್ಯಾಪ್ತಿಯ ಅರ್ಬನ್ ಬ್ಯಾಂಕುಗಳು, ‘ಡಿ’ ವರ್ಗದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು, ‘ಇ’ ವರ್ಗದಲ್ಲಿ (DCC Bank Election) ನೇಕಾರ ಮತ್ತಿತರೆ ಸೊಸೈಟಿಗಳು ಹಾಗೂ ‘ಎಫ್’ ವರ್ಗದಲ್ಲಿ ಮೇಲಿನ ಐದು ಹೊರತುಪಡಿಸಿದ ಕೈಗಾರಿಕೆ ಮತ್ತಿತರೆ ಸಹಕಾರಿ ವಲಯಗಳಿಂದ ಪ್ರತಿನಿಧಿಗಳು ಈ ಚುನಾವಣೆಗೆ ಸ್ಪರ್ಧಿಸಬಹುದು ಮತ್ತು ಮತದಾನ ಮಾಡಬಹುದು.
ತಮ್ಮದೇ ಸರ್ಕಾರ ಇದ್ದರು ಸ್ವ ಪಕ್ಷದ ಶಾಸಕರಿಗೆ ಮತದಾನ ಭಾಗ್ಯವಿಲ್ಲ
ಡಿಸಿಸಿ ಬ್ಯಾಂಕ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅಧ್ಯಕ್ಷರಾಗಿದ್ದರು ಸಹ ತಮ್ಮ ಪಕ್ಷದ ಶಾಸಕರ ಮತ ರದ್ದಾಗಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಬ್ಯಾಂಕಿನ ಚುನಾವಣೆ ವೇಳೆ ಅವರದ್ದೇ ಪಕ್ಷದ ಶಾಸಕರಿಗೆ ಮತದಾನಕ್ಕೆ ಅವಕಾಶ ಇಲ್ಲದಂತಾಗಿದೆ.
ಮತದಾನ ರದ್ದಿಗೆ ಕಾರಣಗಳು
ವರ್ಷದಲ್ಲಿ ಕನಿಷ್ಪ 2 ಸಾಮಾನ್ಯ ಸಭೆಗಳಿಗೆ ಹಾಜರಾಗಿರಬೇಕು. ಕನಿಷ್ಟ 2 ವರ್ಷ ಡಿಸಿಸಿ ಬ್ಯಾಂಕಿನಲ್ಲಿ ಸೊಸೈಟಿಗಳು * ವಹಿವಾಟು ನಡೆಸಿರಬೇಕು.
ಇದೆಲ್ಲದರ ಜೊತೆಗೆ ಆಡಳಿತ ಮಂಡಳಿ ಇಲ್ಲದೆ ಕೇವಲ ಆಡಳಿತಾಧಿಕಾರಿ ನಡೆಸಿಕೊಂಡು ಹೋಗುತ್ತಿರುವ ಸೊಸೈಟಿಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹವಲ್ಲ ಎಂಬ ನಿಯಮಗಳಿವೆ. ಶಾಸಕ ಟಿ. ರಘು ಮೂರ್ತಿ ಪ್ರತಿನಿಧಿಸುವ (DCC Bank Election) ಕಡಬನಕಟ್ಟೆ ಕೃಷಿ ಪತ್ತಿನ ಸಹಕಾರ ಸಂಘ ಬೈಲಾ ಪ್ರಕಾರ ಬ್ಯಾಂಕಿನೊಡನೆ ವ್ಯವಹಾರ ನಡೆಸಿಲ್ಲ ಎಂದು ಕಾರಣ ನಮೂದು ಮಾಡಲಾಗಿದೆ. ನಾಮಪತ್ರ ಸಲ್ಲಿಕೆಗೆ ಇಂದು ಕಡೆಯ ದಿನವಾಗಿದ್ದು ಶಾಸಕ ಟಿ.ರಘುಮೂರ್ತಿ ಅವರು ಷರ ಬರೆದು ಸುಮಾರು 15 ಸೊಸೈಟಿಗಳು ಕೋರ್ಟ್ ಮೆಟ್ಟಿಲು ಏರಿದ್ದು ಇಂದು ಭವಿಷ್ಯ ನಿರ್ಧಾರವಾಗಲಿದೆ.
