Chitradurga news | nammajana.com | 7-9-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಸ್ಥಾನಗಳಿಗೆ ಸೆ.12ರಂದು ನಡೆಯುವ ಚುನಾವಣೆ ದಿನದಿಂದ ರಂಗೇರುತ್ತಿದ್ದು ತೀವ್ರ (DCC Bank) ಕುತೂಹಲ ಎಡೆ ಮಾಡಿಕೊಟ್ಟಿದೆ.
ಸುಮಾರು 200 ಸೊಸೈಟಿಗಳು ಅನರ್ಹಗೊಂಡಿರುವ ಸಹಕಾರ ಸಂಘಗಳ ಪ್ರತಿನಿಧಿಗಳು ಮತದಾನದ ಹಕ್ಕಿಗಾಗಿ ಹೈಕೋರ್ಟ್(DCC Bank) ಬಾಗಿಲು ತಟ್ಟಿದ್ದು, ಸೆ.9ರಂದು ತೀರ್ಪು ಹೊರಬೀಳಲಿದೆ. ಹೀಗಾಗಿ ಎಲ್ಲರ ಚಿತ್ತ ಹೈಕೋರ್ಟ್ ನೆಟ್ಟಿದೆ.
ಐವರು ಅಭ್ಯರ್ಥಿಗಳ ನಾಮಪತ್ರ ತಿರಸ್ಕಾರ (DCC Bank)
ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಶುಕ್ರವಾರ ಅಂತ್ಯವಾಗಿದ್ದು ಸಚಿವ ಡಿ.ಸುಧಾಕರ್ ಸೇರಿ 6 ಜನರು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಡಬನಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಪ್ರತಿನಿಧಿಸುವ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರನ್ನು ಅನರ್ಹಗೊಳಿಸಿರುವ ಹಿನ್ನೆಲೆಯಲ್ಲಿ ಅವರ ನಾಮಪತ್ರವನ್ನು (DCC Bank) ತಿರಸ್ಕರಿಸಲಾಗಿದೆ. ಆದರೆ, ಸೆ.9ರಂದು ಬರಲಿರುವ ಹೈಕೋರ್ಟ್ ತೀರ್ಪಿನ ಷರತ್ತಿಗೆ ಒಳಪಟ್ಟು ನಾಮಪತ್ರ ತಿರಸ್ಕರಿಸಲಾಗಿದೆ ಎಂದು ಚುನಾವಣಾಧಿಕಾರಿ ಎಂ.ಕಾರ್ತಿಕ್ ಹೇಳಿದ್ದಾರೆ.
‘ಕಡಬನಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮ ಪಾಲನೆಯಲ್ಲಿ ಆಗಿರುವ ವ್ಯತ್ಯಯಗಳ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಹಿಂದೆಯೇ ಪತ್ರ ಬರೆಯಲಾಗಿದ್ದು ಪತ್ರವನ್ನು (DCC Bank) ಹೈಕೋರ್ಟ್ಗೆ ಸಲ್ಲಿಸಲಾಗಿದೆ. ಹೀಗಾಗಿ ರಘುಮೂರ್ತಿ ಅವರು ಮತದಾನಕ್ಕೆ ಅರ್ಹತೆ ಪಡೆಯುವ ಸಾಧ್ಯತೆ ಇದೆ. ಆದರೆ, ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಕೇವಿಯಟ್ ಹಾಕಿರುವುದು ಅವೈಜ್ಞಾನಿಕ ಎಂಬುದನ್ನೂ ಕೋರ್ಟ್ ಗಮನಕ್ಕೆ ತರಲಾಗಿದೆ ಎಂಬ ಮಾಹಿತಿ ಇದೆ.
ಟಿ.ರಘುಮೂರ್ತಿ ಸೇರಿ ಚಿತ್ರದುರ್ಗ ತಾಲ್ಲೂಕು ಫ್ಯಾಕ್ಸ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ.ಪಿ.ಮಂಜುನಾಥ್, ಅರುಣ್ಕುಮಾರ್ ಹಾಗೂ ಹಾಲು ಸಹಕಾರ ಸಂಘಗಳ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಿ.ಎಸ್.ಶಶಿಧರ್ ಅವರ ನಾಮಪತ್ರಗಳೂ ತಿರಸ್ಕೃತವಾಗಿದೆ
ಆಯ್ಕೆಯಾಗಿದ್ದು ಮತ್ತೊಬ್ಬರ ಫಲಿತಾಂಶ ತಡೆ ಹಿಡಿಯಲಾಗಿದೆ. ಕೋರ್ಟ್ ತೀರ್ಪು ಆಧರಿಸಿ ಇನ್ನುಳಿದ ಸ್ಥಾನಗಳಿಗೆ 12ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. (DCC Bank) ಅಂದು ಸಂಜೆಯೇ ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
ಇದನ್ನೂ ಓದಿ: ಚಿತ್ರದುರ್ಗ ಸಿಟಿ ಇನ್ಸ್ಟಿಟ್ಯೂಟ್ನಲ್ಲಿ ಲಕ್ಷಾಂತರ ರು. ಅವ್ಯವಹಾರ ಆರೋಪ | Chitradurga
ಕ್ರಮ ಕೋರ್ಟ್ ತೀರ್ಪಿನ ಷರತ್ತಿಗೆ ಒಳಪಟ್ಟಿರುತ್ತದೆ. ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ರಾಮರೆಡ್ಡಿ ಅವರ ನಾಮಪತ್ರ ತಿರಸ್ಕೃತವಾಗಿದೆ. ಆದರೆ, (DCC Bank) ರಾಮರೆಡ್ಡಿ ಅವರು ಅನರ್ಹ ಮತಪಟ್ಟಿ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿಲ್ಲ. ಹೀಗಾಗಿ ಷರತ್ತು ಇವರಿಗೆ ಅನ್ವಯವಾಗುವುದಿಲ್ಲ ಎಂದು ಚುನಾವಣಾಧಿರಿ ತಿಳಿಸಿದ್ದಾರೆ.