Chitradurga news |nammajana.com|17-9-2024
ನಮ್ಮಜನ.ಕಾಂ, ಹೊಸದುರ್ಗ: ಹೊಸದುರ್ಗದ ಸರಕಾರಿ ವೈದ್ಯರೊಬ್ಬರು ಕನ್ನಡದಲ್ಲಿಯೇ ಔಷಧಿ ಚೀಟಿ ಬರೆಯುವ (Kannada) ಮೂಲಕ ಕನ್ನಡ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕನ್ನಡ ಅಭಿವೃದ್ದಿ ಪ್ರಾಧಿ ಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ವೈದ್ಯರು ಔಷಧಿ ಚೀಟಿಯನ್ನು ಕನ್ನಡದಲ್ಲಿ ಬರೆಯುವಂತೆ ಸೂಚನೆ ನೀಡಲು ಸರಕಾರಕ್ಕೆ ಪತ್ರ ಬರೆದಿದ್ದರು.
ಈ ಸಂಬಂಧ ಸರಕಾರ ಕ್ರಮ ತೆಗೆದುಕೊಳ್ಳುವ ಮೊದಲೇ ಹೊಸದುರ್ಗದ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಕೀಲು ಮೂಳೆ ಕಾರದ ಅಧ್ಯಕ್ಷರು ಇತ್ತೀಚೆಗೆ ಆರೋಗ್ಯ ಮಂತ್ರಿ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಯು.ಎಸ್. ಸಂಜಯ್ (Kannada) ಪರೀಕ್ಷಿಸಿದ ರೋಗಿಗಳಿಗೆ ಕನ್ನಡದಲ್ಲಿಯೇ ಔಷಧಿ ಚೀಟಿ, ರೋಗ ಲಕ್ಷಣಗಳು ಹಾಗೂ ಪರಿಹಾರೋಪಾಯಗಳನ್ನು ಕನ್ನಡದಲ್ಲಿ ಬರೆಯುವ ಜತೆಗೆ ರೋಗಿಯ ದಾಖಲೆಗಳನ್ನು ಕೂಡ ಕನ್ನಡ ದಲ್ಲಿಯೇ ದಾಖಲಿಸುವ ಮೂಲಕ ಕನ್ನಡ ಮೆರೆದಿದ್ದಾರೆ.
ತನ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಇತೀಚಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದು ಕನ್ನಡದಲ್ಲಿ ಔಷಧಿ ಚೀಟಿ ಬರೆಯುವುದನ್ನು ಉತ್ತೇಜಿಸಬೇಕು.
ಇದನ್ನೂ ಓದಿ: Dina Bhavishya kannada: ಇಂದಿನ ರಾಶಿ ಭವಿಷ್ಯ, ಯಾರಿಗೆಲ್ಲ ಉದ್ಯೋಗ ಭಾಗ್ಯ?
ಕನ್ನಡದಲ್ಲಿ ಔಷಧಿ ಚೀಟಿ ಬರೆಯುವ ವೈದ್ಯರನ್ನ ಗುರುತಿಸಿ ಅಭಿನಂದಿಸುವ ಕೆಲಸವನ್ನು ಸರಕಾರ ಮಾಡಬೇಕು ಒತ್ತಾಯಿಸಿದ್ದಾರೆ. ಗುರುವಾರ ಎಂದು ಡಾ. ಸಂಜಯ್ ಕನ್ನಡದಲ್ಲಿ ಬರೆದ ಔಷಧಿ ಚೀಟಿಗಳನ್ನು ಸಾಮಾಜಿಕ (Kannada) ಜಾಲತಾಣದಲ್ಲಿ ವೈರಲ್ ಆಗಿತ್ತು. ವೈದ್ಯರ ಕನ್ನಡ ಅಭಿಮಾನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಭಿನಂದನಾ ಮಹಾಪೂರವೇ ವ್ಯಕ್ತವಾಗಿದೆ.
ಬಾಕ್ಸ್
ವೈದ್ಯರು ಕನ್ನಡದಲ್ಲಿ ಮಾತ್ರೆ ಚೀಟಿಯನ್ನು ಬರೆಯುವ ವಿಚಾರಕ್ಕೆ ಸರಕಾರದ ಹಂತದಲ್ಲಿ ಚರ್ಚೆಯಾಗುವುದನ್ನು ಗಮನಿಸಿ, ನಾನು ಕನ್ನಡದಲ್ಲಿ ರೋಗಿಗಳಿಗೆ ಅರ್ಥವಾಗುವಂತೆ ಔಷಧಿ ಹಾಗೂ ಚಿಕಿತ್ಸೆಯ ಮಾಹಿತಿಯನ್ನು ದಾಖಲಿಸಲು ನಿರ್ಧರಿಸಿದೆ. ಕಳೆದ ವಾರದಿಂದ ಕನ್ನಡದಲ್ಲಿ ಮಾತ್ರೆ, ಔಷಧಿ ಹೆಸರು ಹಾಗೂ ಬಳಸುವ ವಿಧಾನ, ರೋಗಿಗೆ ನೀಡುವ ಸಲಹೆಗಳನ್ನು ಕನ್ನಡದಲ್ಲಿಯೇ ದಾಖಲಿಸಲು ಆರಂಭಿಸಿದ್ದೇನೆ. ಕನ್ನಡದ (Kannada) ನೆಲದಲ್ಲಿ ಹುಟ್ಟಿರುವ ನನಗೆ ಕನ್ನಡದಲ್ಲಿ ಬರೆಯಲು ಯಾವುದೇ ತೊಂದರೆಯಾಗುವುದಿಲ್ಲ. ಚಿಕಿತ್ಸೆ ನೀಡುವಾಗ ರೋಗಿಗಳೊಂದಿಗೆ ಕನ್ನಡದಲ್ಲಿಯೇ ಸಂಭಾಷಿಸುತ್ತೇವೆ. ಈಗ ಮಾಹಿತಿಯನ್ನೂ ಕನ್ನಡದಲ್ಲಿ ದಾಖಲಿಸಲಾಗುತ್ತಿದೆ.
– ಡಾ. ಯು.ಎಸ್. ಸಂಜಯ್ ಕೀಲು ಮೂಳೆ ತಜ್ಞ,
ಹೊಸದುರ್ಗ