Chitradurga news |nammajana.com|22-9-2024
ನಮ್ಮಜನ.ಕಾಂ, ಚಳ್ಳಕೆರೆ: ಪ್ರಸ್ತುತ ಮುಖ್ಯಮಂತ್ರಿ ಎಸ್ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ದಿಪರ (Parashurampur) ಚಿಂತನೆಗಳಿಗೆ ಹೆಚ್ಚು ಸಹಕಾರ ನೀಡುತ್ತಾ ಬಂದಿದ್ಧಾರೆ ಎಂದು ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಅವರು, ಭಾನುವಾರ ತಾಲ್ಲೂಕಿನ ಪರಶುರಾಮಪುರದ ಗುಂಡುತೋಪು ಪ್ರದೇಶದಲ್ಲಿ ಸುಮಾರು ೨೩.ಲಕ್ಷ ವೆಚ್ಚದ ಅಂಗನವಾಡಿ ಬಿ.ಕೇಂದ್ರದ ನೂತನ ಕಟ್ಟಡ ನಿರ್ಮಾಣದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ನಮ್ಮ ಸರ್ಕಾರ ವಿಶೇಷವಾಗಿಶೈಕ್ಷಣಿಕ ಪ್ರಗತಿಗೆ ಒತ್ತು ನೀಡುತ್ತಿದ್ದಾರೆ. ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಅಭಿವೃದ್ದಿ ಕಾಮಗಾರಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ (Parashurampur) ನೆರವಾಗಿದ್ಧಾರೆ.
ಅಂಗನವಾಡಿ ಕೇಂದ್ರಗಳಲ್ಲೂ ಮಕ್ಕಳಿಗೆ ಪೌಷ್ಠೀಕ ಆಹಾರ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಸಕಾಲದಲ್ಲಿ ಸರ್ಕಾರ ಒದಗಿಸುತ್ತಾ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು (Parashurampur) ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮಕ್ಕಳಿಗೆ ಯಾವುದೇ ಕೊರತೆ ಉಂಟಾಗದಂತೆ ಜಾಗ್ರತೆ ವಹಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರೆ ಎನ್.ಕಾವ್ಯ ಮಾತನಾಡಿ, ೨೦೨೨-೨೩ನೇ ಸಾಲಿನ ಮಹಾತ್ಮಗಾಂಧಿ ರಾಷ್ಟೀಯ ಉದ್ಯೋಗಖಾತರಿ ಯೋಜನೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅನುದಾನದಲ್ಲಿ ಈ ಕಟ್ಟಡವನ್ನು ನಿರ್ಮಾಣ ಮಾಡಲಾಗುವುದು.
ಕ್ಷೇತ್ರದ ಅಭಿವೃದ್ದಿಗೆ ಶಾಸಕರು ಸದಾ ಸಹಕಾರ ನೀಡುತ್ತಾ ಬಂದಿದ್ಧಾರೆ. ನಿಗದಿತ ಅಧಿಯಲ್ಲೇ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುವುದು ಎಂದರು.
ಇದನ್ನೂ ಓದಿ: ಮೃತರ ಕುಟುಂಬಕ್ಕೆ ಧೈರ್ಯ ತುಂಬಿದ ಶಾಸಕ ಟಿ.ರಘುಮೂರ್ತಿ | bommakanahalli
ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗಲೂರಸ್ವಾಮಿ, ಉಪಾಧ್ಯಕ್ಷೆ ಸರೋಜಮ್ಮ, ತಾಲ್ಲೂಕು ಪಂಚಾಯಿತಿ ನಾಮನಿರ್ದೇಶನ ಸದಸ್ಯ ಚೌಳೂರುಬಸವರಾಜು, ಮುಖಂಡರಾದ ಚನ್ನಕೇಶವ, ಜಯವೀರಚಾರಿ, ಕೃಷ್ಣಪ್ಪ, ರುದ್ರೇಶ್, ಬೊಮ್ಮಕ್ಕ, ಮಂಜುಳಮ್ಮ, ಪ್ರಕಾಶ್, ನಾಗಭೂಷಣ್, ಕರಿಯಣ್ಣ, ಜಯಕುಮಾರ್, ಬಿ.ಕೆ.ಗುಜ್ಜಾರಪ್ಪ, ಪಿಡಿಒ ಗುಂಡಪ್ಪ ಮುಂತಾದವರು ಉಪಸ್ಥಿತರಿದ್ದರು.