Chitradurga news|nammajana.com|27-9-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಗಣಪತಿ ವಿಸರ್ಜನೆಯ ಶೋಭಾಯಾತ್ರೆ ಸೆ.28 ರಂದು ನಡೆಯಲಿದೆ. ಈ ಸಂಬಂಧ (Sobhayatre) ಐತಿಹಾಸಿಕ ಚಿತ್ರದುರ್ಗ ಸಿಂಗಾರಗೊಂಡಿದೆ.
ರಾಜ್ಯದ ವಿವಿಧ ಮೂಲೆಗಳಿಂದ 3 ಲಕ್ಷಕ್ಕೂ ಅಧಿಕ ಜನರ ಆಗಮನದ ಹಿನ್ನಲೆ ರಸ್ತೆ ಸೇರಿದಂತೆ ಪ್ರತಿಮೆಗಳಿಗೆ ವಿಶೇಷ (Sobhayatre) ಅಲಂಕಾರ ಮಾಡಿ ಅದಕ್ಕೊಂದು ಐತಿಹಾಸಿಕ ಹಿನ್ನಲೆಯ ಸ್ಪರ್ಶ ನೀಡಲಾಗಿದೆ.
ಮದಕರಿನಾಯಕನ ಕಂಚಿನ ಪ್ರತಿಮೆ ಹಿಂಭಾಗ ಐತಿಹಾಸಿಕ ಕೋಟೆಯ ಅಲಂಕಾರ ಮಾಡಲಾಗಿದ್ದು ಮೇಲ್ಬಾಗದಲ್ಲಿ ಶಿವನ ವಿಗ್ರಹದ ಜತೆ ತ್ರಿಶೂಲ ಮುಂದೆ ಆನೆಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿ ವೃತ್ತದಲ್ಲಿನ ಒನಕೆ ಓಬವ್ವ ಪ್ರತಿಮೆ ಹಿಂಭಾಗ ಕೋಟೆ ಅಲಂಕಾರ ಮಾಡಲಾ ಗಿದ್ದು, ಇದು (Sobhayatre) ಹೈದರಾಲಿ ಸೈನಿಕರನ್ನು ಸದೆ ಬಡಿ ಯುವ ಚಿತ್ರಕ್ಕೆ ಸೂಕ್ತವಾದ ಈ ಹೊಂದಾಣಿಕೆಯಾಗಿದೆ.
ನಗರ ಪೋಲಿಸ್ ಠಾಣೆಯ ಮುಂಭಾಗದಲ್ಲಿನ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೂ ಅಲಂಕಾರ ಮಾಡಿ ಮಂಟಪ ನಿರ್ಮಿಸ ಲಾಗಿದೆ.
ಮಹಾವೀರ ವೃತ್ತದಲ್ಲಿ ಕಲಾವಿನದ ಕೈ ಚಳಕ ಮನಮೋಹಕವಾಗಿದೆ. ಅರಮನೆ ನಿರ್ಮಿಸಿ ಅಕ್ಕವಕ್ಕದಲ್ಲಿ ಎರಡು ದೊಡ್ಡ ಗಂಟೆಗಳನ್ನು ಅಲಂಕಾರಕ್ಕೆ ಒಳಗಾಗಿದೆ. ಕಂಬಗಳ ಸೃಷ್ಟಿಸಿ ನಡುವೆ ವಾಸವಿ ದೇವಿಯ ಪ್ರತಿಮೆ ಇಡಲಾಗಿದೆ.
ಹೊಳಲ್ಕೆರೆ ರಸ್ತೆಯಲ್ಲಿನ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಹಿಂಭಾಗ ಅರಮನೆ ಚಿತ್ರಿಸಿ ಪರಾಕ್ರಮವ ತೋರಿಸಲಾಗಿದೆ. ಕನಕ ಪ್ರತಿಮೆಗೂ ವಿಶೇಷ ಅಲಂಕಾರ ಮಾಡಿ, ಇಲ್ಲಿ ಕನಕ ಮೂರ್ತಿಯ ಅಕ್ಕ-ಪಕ್ಕದಲ್ಲಿ ಶಂಕ- ಚಕ್ರ ನಿರ್ಮಾಣ (Sobhayatre) ಮಾಡಲಾಗಿದೆ. ಅದರ ಮೇಲೆ ನವಿಲು, ಕನಕನ ಮೂರ್ತಿಯ ಮೇಲೆ ತಿರುಪತಿ ತಿಮ್ಮಪ್ಪನ ನಾಮ ಮಾತ್ರದವನ್ನು ಚಿತ್ರಿಸಲಾಗಿದೆ.ಇದರೊಂದಿಗೆ
ಕಂಬಗಳನ್ನು ಇರಿಸಿ ಅದಕ್ಕೆ ಛತ್ರಿಗಳನ್ನು ಜೋಡಿಸಿ ಶಿಲಾಬಾಲಕಿಯರನ್ನು ಚಿತ್ರಿಸಲಾಗಿದೆ.
ಇದನ್ನೂ ಓದಿ: ಇಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷರ ಭೇಟಿ | chitradurga
ಚಿತ್ರದುರ್ಗದಲ್ಲಿನ ಎಲ್ಲ ಪ್ರತಿಮೆಗಳೂ ದೃಶ್ಯ ಕಾವ್ಯಗಳಾಗಿ ಗೋಚರಿಸುತ್ತಿವೆ. ಶೋಭಾಯಾತ್ರೆ ಸಾಗುವ ಇಕ್ಕೆಲಗಳಲ್ಲಿ ದೀಪದ ಅಲಂಕಾರ ಮಾಡಲಾಗಿದೆ. ಪ್ರಮುಖ ರಸ್ತೆ ಸೀಳಿರುವ ಡಿವೈಡರ್ ಗಳೂ ಸಿಂಗಾರಗೊಂಡಿರುವುದು ವಿಶೇಷ.