Chitradurga news|nammajana.com|30-9-2024
ನಮ್ಮಜನ.ಕಾಂ, ಚಿತ್ರದುರ್ಗ: ಕೇವಲ ನಾಲ್ಕು ತಿಂಗಳ ಮಗುವೊಂದು ಬರೋಬ್ಬರಿ 216 ಫ್ಲ್ಯಾಶ್ ಕಾರ್ಡ್‌ಗಳನ್ನು (World record) ಗುರುತಿಸುವ ಮೂಲಕ ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿ ವಿಶ್ವ ದಾಖಲೆ ಬರೆದ ಕೀರ್ತಿಗೆ ಭಾಜನವಾಗಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಪರಶುರಾಂಪುರ ಹೋಬಳಿ ಕಾಮಸಮುದ್ರ ಗ್ರಾಮದ ಸಿದ್ದೇಶ್ವರಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿ ರಾಮಾಂಜನೇಯ ದಂಪತಿಯ ಕಂದ, (World record) ಆರ್.ಯಶ್ಚಿಕ್ ಅರ್ಜುನ್ ಅಪರೂಪದ ದಾಖಲೆ ಬರೆದು ಅಚ್ಚರಿ ಹುಟ್ಟಿಸಿದ ಮಗು.
ತನ್ನ ತಾಯಿ ಫ್ಲ್ಯಾಶ್ ಕಾರ್ಡ್ ತೋರಿಸಿ ಕೇಳುವ ಪ್ರಶ್ನೆಗಳಿಗೆ 33 ಆಡುತ್ತಲೇ ಉತ್ತರಿಸುವುದು ಯಶ್ಚಿಕ್ ಅರ್ಜುನ್ ವಿಶೇಷತೆ.
ನಾನಾ ಬಣ್ಣ ಪಕ್ಷಿಗಳು, ಇಂಗ್ಲಿಷ್ ಅಕ್ಷರಗಳು, ಹಣ್ಣು, ತರಕಾರಿ, ವರ್ಣಮಾಲೆ ಮತ್ತು ಆಕಾರಗಳು, ಸಂಖ್ಯೆಗಳುಳ್ಳ 216 ಫ್ಲ್ಯಾಶ್ ಕಾಡ್ ೯ಗಳನ್ನು ಗುರುತಿಸುವ ಮಗುವಿನ ಸಾಮರ್ಥ್ಯ ವನ್ನು (World record) ವಿಡಿಯೋ ಮಾಡಿದ ತಂದೆ-ತಾಯಿ, ಅವುಗಳನ್ನು ನೋಬಲ್ ವರ್ಲ್ಡ್ ರೆಕಾರ್ಡ್‌ಗೆ ಕಳುಹಿಸಿದರು. ಇದನ್ನು ಪರಿಶೀಲಿಸಿದ ತಂಡ, ವಿಶ್ವ ದಾಖಲೆಯ ಪ್ರಮಾಣಪತ್ರ ನೀಡಿದೆ.
ಇದನ್ನೂ ಓದಿ: Angle attack: ಬೈಕ್‌ನಲ್ಲಿ ಹೋದರು ದೇವರ ಕೋಣಗಳ ದಾಂಧಲೆ, ಬೆಚ್ಚಿಬಿದ್ದ ಜನರು
ತಂದೆ-ತಾಯಿಯ ಪರಿಶ್ರಮ ಹಾಗೂ ಪುಟಾಣಿ ಯಶ್ವಿಕ್ ಅರ್ಜುನ್ ನೆನಪಿನ ಶಕ್ತಿಯಿಂ ದಾಗಿ ಈ ಗೌರವ ಸಂದಿದೆ. ಈ ಹಿನ್ನೆಲೆಯಲ್ಲಿ ರಾಮಾಂಜನೇಯ ಅವರ ಮನೆಗೆ ಶನಿವಾರ (World record) ಭೇಟಿ ನೀಡಿದ ಶಾಸಕ ಟಿ.ರಘುಮೂರ್ತಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಗುವಿನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.