Chitradurga news|nammajana.com|5-10-2024
ನಮ್ಮಜನ.ಕಾಂ, ಚಿತ್ರದುರ್ಗ: ಸಾಧನೆಗೆ ಇಷ್ಟಲಿಂಗ ಪೂಜೆ ಬಹಳ ಮುಖ್ಯ, ಮನುಷ್ಯನ ಸಕಲ ಸಿದ್ದಿಗೆ ಎಲ್ಲರೂ ಸಾರ್ವತ್ರಿಕವಾಗಿ ಶಿವಯೋಗ ಮಾಡಬೇಕು. ಜೀವನದಲ್ಲಿ ಸಹಜವಾದ ಬದುಕನ್ನು ಹೇಳಿ ಕೊಡುವಂತಹದ್ದೇ ಸಹಜ ಶಿವಯೋಗ ಎಂದು ಗುರುಮಠಕಲ್ ಖಾಸಾ ಶ್ರೀ (Sharan Culture Festival 2024) ಮುರುಘಾಮಠದ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು ನುಡಿದರು.
ಶ್ರೀಗಳು ದಿನಾಂಕ ೦೫.೧೦.೨೦೨೪ ರ ಶನಿವಾರ ಬೆಳಿಗ್ಗೆ ೭.೩೦ ಗಂಟೆಗೆ ಶ್ರೀಮಠದ ಅನುಭವಮಂಟಪದಲ್ಲಿ ನಡೆದ ಸಹಜ (Sharan Culture Festival 2024) ಶಿವಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟು ಮಾತನಾಡಿದರು.
ಹೊಟ್ಟೆಯ ಹಸಿವನ್ನು ನೀಗಿಸಲು ಪ್ರಸಾದವು ಹೇಗೆ ಮುಖ್ಯಯೋ, ಹಾಗೆಯೇ ಆತ್ಮದ ಹಸಿವನ್ನು ನೀಗಿಸಲು ಶಿವಯೋಗ ಮುಖ್ಯ. ಅದನ್ನು ಪ್ರತಿಯೊಬ್ಬರು ಪ್ರತಿನಿತ್ಯ (Sharan Culture Festival 2024) ಮಾಡಬೇಕು. ಎಲ್ಲ ಸಮುದಾಯದವರಿಗೂ ಆಧ್ಯಾತ್ಮಿಕ ಹಸಿವಿರುವುದನ್ನು ನೋಡುತ್ತಿದ್ದೇವೆ.
ಆ ಹಸಿವನ್ನು ನೀಗಿಸಲು ಪ್ರತಿನಿತ್ಯ ಸಹಜ ಶಿವಯೋಗ ಮಾಡಬೇಕು. ಸಾವಿರಾರು ಜನರಿಗೆ ಇಷ್ಟಲಿಂಗ ಧಾರಣೆ ಮಾಡಿದ ಕೀರ್ತಿ ಮುರುಘಾ ಮಠಕ್ಕೆ ಸಲ್ಲುತ್ತದೆ. ಪ್ರತಿನಿತ್ಯ ಸ್ನಾನ ಮಾಡಿ, ವಿಭೂತಿ ಧರಿಸಿ ಶಿವಯೋಗ ಮಾಡಿದರೆ ಆ ಮನೆ ಮಹಾ (Sharan Culture Festival 2024) ಮನೆಯಾಗುತ್ತದೆ. ಮನಸ್ಸು ಪ್ರಪುಲ್ಲವಾಗುತ್ತದೆ, ಪ್ರಶಾಂತವಾಗುತ್ತದೆ.
ಮನಸ್ಸನ್ನು ಹಿಡಿದಿಟ್ಟುಕೊಳ್ಳಲು ಶಿವಯೋಗ ಮುಖ್ಯ. ಮನಸ್ಸಿನ ಗುಣ ಚಂಚಲತೆಯನ್ನು ಹಿಡಿದಿಟ್ಟುಕೊಳ್ಳಲು, ಜೀವನದಲ್ಲಿ ಸಾಧನೆಯ ಮೆಟ್ಟಿಲುಗಳನ್ನು ಏರಲು, ಏಕಾಗ್ರತೆ ಬೆಳೆಸಿಕೊಳ್ಳಲು, ಯಶಸ್ಸು ಗಳಿಸಲು, ಮನಸ್ಸನ್ನು ಕೇಂದ್ರಿಕರಿಸಲು, ಒಳ್ಳೆಯ (Sharan Culture Festival 2024) ಆಲೋಚನೆಗಳನ್ನು ಬೆಳೆಸಿಕೊಳ್ಳಲು ಶಿವಯೋಗ ಬಹಳ ಮುಖ್ಯ. ಬಸವಣ್ಣನವರು ನಮ್ಮ ಕೈಯಲ್ಲಿ ಇಷ್ಟಲಿಂಗ ಕೊಟ್ಟಿದ್ದಾರೆ.
ಈ ಇಷ್ಟಲಿಂಗದಿಂದ ಮನಸ್ಸನ್ನು ಕೇಂದ್ರಿಕರಿಸಲು ಸಾಧ್ಯ. ಹಣವಿದ್ದವರನ್ನು ಹಣವಂತನೆಂದು, ಗುಣವಿದ್ದವರನ್ನು ಗುಣವಂತನೆಂದು, ಶೀಲವಿದ್ದವರನ್ನು ಶೀಲವಂತನೆAದು ಕರೆದರೆ ಲಿಂಗ ಇದ್ದವರಿಗೆ ಲಿಂಗವಂತ ಎನ್ನುತ್ತಾರೆ.
ಸಾತ್ವಿಕ ಶಕ್ತಿಯನ್ನು ಪಡೆಯಲು ಶಿವಯೋಗ ಮುಖ್ಯ. ಹಣೆ ತುಂಬಾ ವಿಭೂತಿ ಹಚ್ಚಿವುದರಿಂದ ಅವರನ್ನು ನೋಡುವ ದೃಷ್ಟಿಕೋನವೇ ಬೇರೆಯಾಗಿರುತ್ತದೆ. ವಿಭೂತಿ, ಇಷ್ಟಲಿಂಗ ಧರಿಸಿದರೆ ಬೆಲೆ ಹಾಗು ಗೌರವ ನೀಡುತ್ತಾರೆ. ಶಿವಯೋಗ ಪ್ರಾತ್ಯಕ್ಷಿತೆ ನೆರೆವೇರಿಸುತ್ತಾ ಇಷ್ಟಲಿಂಗಕ್ಕೆ ವಚನಾಭೀಷೇಕ, ವಿಭೂತಿ ಧಾರಣೆ, ಭಾವಶುದ್ದಿಯಿಂದ, ಭಕ್ತಿಯಿಂದ ಲಿಂಗಪೂಜೆ ಮಾಡುತ್ತಾ ಎಲ್ಲರೂ ಪ್ರತಿನಿತ್ಯ ಮನೆಯಲ್ಲಿ ಶಿವಯೋಗ (Sharan Culture Festival 2024) ಮಾಡಬೇಕು. ಇದರಿಂದ ಸಕಲ ಸಿದ್ದಿ ಪ್ರಾಪ್ತವಾಗುತ್ತದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿ ಸದಸ್ಯರಾದ ಡಾ.ಶ್ರೀ.ಬಸವಕುಮಾರಸ್ವಾಮಿಗಳು, ರಾವಂದೂರು ಶ್ರೀ ಮುರುಘಮಠದ ಶ್ರೀ ಮ.ನಿ.ಪ್ರ. ಮೋಕ್ಷಪತಿ ಸ್ವಾಮಿಗಳು, ಹುಲಸೂರು ಶ್ರೀ ಗುರುಬಸವೇಶ್ವರ ವಿರಕ್ತಮಠದ ಶ್ರೀ ಮ.ನಿ.ಪ್ರ. ಶಿವಾನಂದ ಸ್ವಾಮಿಗಳು, ಹಾವೇರಿ ಹೊಸಮಠದ ಶ್ರೀ ಬಸವ ಶಾಂತಲಿಂಗಸ್ವಾಮಿಗಳು, ಶಿರಗುಪ್ಪ ಬಸವಕೇಂದ್ರದ ಶ್ರೀ ಬಸವಭೂಷಣ ಸ್ವಾಮಿಗಳು, ದಾವಣಗೆರೆಯ ವಿರಕ್ತಮಠದ ಶ್ರೀ. ಬಸವಪ್ರಭು ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಮುಖ್ಯ (Sharan Culture Festival 2024) ಅತಿಥಿಗಳಾಗಿ ಶಿಗ್ಗಾವಿ ಸಮಾಜಸೇವಕರಾದ ಶ್ರೀ ಡಿ.ಎಸ್.ಮಾಳಗಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಇಂದಿನಿಂದ ಅ.13 ರವರೆಗೆ ಶರಣ ಸಂಸ್ಕøತಿ ಉತ್ಸವ ಆಕಾಶವಾಣಿಯಲ್ಲಿ ಪ್ರಸಾರ | Sharan Culture Festival
ಕಾರ್ಯಕ್ರಮದಲ್ಲಿ ಜ.ಮು.ರಾ ಕಲಾವಿದರಿಂದ ಪ್ರಾರ್ಥಿಸಿ, ಡಾ.ಶ್ರೀ.ಬಸವಕುಮಾರಸ್ವಾಮಿಗಳು ಶರಣು ಸಮರ್ಪಣೆ ನಡೆಸಿಕೊಟ್ಟರು.