Chitradurga news|nammajana.com|6-10-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ನಗರದಲ್ಲಿ ನಡೆದಿರುವಂತಹ ಎಲ್ಲಾ ಕಾಮಗಾರಿಗಳು ಅವೈಜ್ಞಾನಿಕವಾಗಿವೆ. ಲೋಕೋಪಯೋಗಿ, ಭದ್ರಾ ಮೇಲ್ದಂಡೆ ಸೇರಿ ಯಾವುದೇ ಇಲಾಖೆಯಿಂದ ನಿರ್ಮಿಸಿರುವ ನೂತನ ರಸ್ತೆ, ವಿಭಜಕ, ಬೀದಿ ದೀಪಗಳು, ಪಾರ್ಕ್ ಗಳು ಸೇರಿ ಯಾವುದನ್ನೂ ಸಹ ನಗರಸಭೆಗೆ (Chitradurga Municipal Council)ಹಸ್ತಾಂತರ ಮಾಡಿಕೊಳ್ಳಬಾರದು ಎಂದು ನಗರಸಭೆ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.
ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಬಿ.ಎನ್. ಸುಮಿತ ಅಧ್ಯಕ್ಷತೆಯಲ್ಲಿ ಶನಿವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯ ಎಚ್.ಎನ್. ಮಂಜುನಾಥ್ ಗೊಪ್ಪೆ ಮಾತನಾಡಿ ನಗರದ ಪ್ರಮುಖ ರಸ್ತೆಗಳು ಹಾಗೂ ಡಿವೈಡರ್ ಗಳು ಅವೈಜ್ಞಾನಿಕವಾಗಿವೆ. ಸಂಚಾರಕ್ಕೂ ಅಡಚಣೆಯಾಗಿವೆ, ಅಪಘಾತಗಳು ಸಂಭವಿಸಿವೆ.
ಮಳೆ ನೀರು ನಿಲ್ಲುತ್ತದೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ವಿಭಜಕ ತೆರವುಗೊಳಿಸಲು ಅನುದಾನ ಯಾರು ಕೊಡುತ್ತಾರೆ ಎಂದು ಪ್ರಶ್ನಿಸಿದರು. ಇದಕ್ಕೆ (Chitradurga Municipal Council) ದ್ವನಿಗೂಡಿಸಿದ ಅಧ್ಯಕ್ಷೆ ಸುಮಿತ ರಘು, ಡಿವೈಡರ್‌ಗಳಿಂದ ನಮ್ ವಾರ್ಡಿನ ನಾಲ್ವರು ಮೃತಪಟ್ಟಿದ್ದಾರೆ. ಇಂತಹ ನಿರ್ಮಿಸುವಾಗ ಇಂಜಿನಿಯರ್‌ಗಳು ಯೋಚಿಸಲಿಲ್ಲವೇ ಎಂದು ಪ್ರಶ್ನಿಸಿದರು. ಅಧ್ಯಕ್ಷೆ ಸೇರಿ ಹಲವರು ಸದಸ್ಯರು ಸಾಥ್ ನೀಡಿದರು.
ಆದರೆ ಬಿಜೆಪಿ ಸದಸ್ಯ ಹೆಚ್.ಶ್ರೀನಿವಾಸ್ ಕಾಮಗಾರಿಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಕಾಮಗಾರಿಗಳನ್ನು
ಸಮರ್ಥಿಸಿಕೊಂಡರು. ಎಲ್ಲಾ ಕಾಮಗಾರಿಗಳು ಉತ್ತಮವಾಗಿವೆ. ಇದನ್ನೂ ಅಧಿಕಾರಿಗಳು ಸಹ ಪರಿಶೀಲನೆ ನಡೆಸಿದ್ದಾರೆ ಎಂದರು.ಇದಕ್ಕೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಕೂಡ ವೈಜ್ಞಾನಿಕವಾಗಿದೆ ಸ್ಪಷ್ಟನೆ ನೀಡಿದರು. ಆದರೆ, ಆಡಳಿತಾರೂಢ ಸದಸ್ಯರು ಇದಕ್ಕೆ ಒಪ್ಪಲಿಲ್ಲ.
ಚಿತ್ರದುರ್ಗ ನಗರದಲ್ಲಿ ಅವೈಜ್ಞಾನಿಕ ಡಿವೈಡರ್ ನಿರ್ಮಾಣದಲ್ಲಿ ಶೇ.40 ರಷ್ಟು ಕಮಿಷನ್ ತಿಂದು ಸರ್ಕಾರಿ ಹಣ ಲೂಟಿ ಮಾಡಲಾಗಿದೆ. ನಗರಸಭೆ ಅನುಮತಿ ಪಡೆಯದೇ ಎಲ್ಲವನ್ನೂ ನಿರ್ವಹಿಸಲಾಗಿದೆ ಎಂಬ ಸಂಗತಿ ಶನಿವಾರ ನಡೆದ ಚಿತ್ರದುರ್ಗ (Chitradurga Municipal Council) ನಗರಸಭೆ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು. ಅರ್ಧ ತಾಸಿಗೂ ಹೆಚ್ಚುವ ಸಮಯವನ್ನು ಡಿವೈಡರ್ ನುಂಗಿತು.
ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಚಂದ್ರಪ್ಪ ಹೇಳಿದ್ದಿಷ್ಟು!
ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಚಂದ್ರಪ್ಪ, ಸಿಸಿ ರಸ್ತೆ ಹಾಗೂ ಡಿವೈಡರ್‌ನಿರ್ಮಾಣ ಮಾಡುವಾಗ ನಗರಸಭೆ ಅನುಮತಿ ಪಡೆಯಲಾಗಿಲ್ಲ. ಚಳ್ಳಕೆರೆ ಟೋಲ್ ಗೇಟ್ ನಿಂದ ಪ್ರವಾಸಿ ಮಂದಿರ, ಗಾಂಧಿ ವೃತ್ತ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ನಾಲ್ಕವರೆಗೆ ಸಿಸಿ ರಸ್ತೆ, ಡಿವೈಡರ್‌ನಿರ್ಮಾಣ ಮಾಡಲಾಗಿದೆ ಎಂದರು.
ಇದು ಹಳೇ ಲೋಕೋಪ ಯೋಗಿ ಇಲಾಖೆ ರಸ್ತೆಯಾಗಿರುವುದರಿಂದ ಸರ್ಕಾರದ ನಿಯಮಾನುಸಾರ ಅನುಮತಿ ಪಡೆಯಲಾಗಿಲ್ಲ. ಐಆರ್‌ಸಿ(ಇಂಡಿಯನ್ ರೋಡ್ ಕಾಂಗ್ರೆಸ್) ಪ್ರಕಾರ ಐದುವರೆ ಮೀಟರ್ ರಸ್ತೆ ಇದ್ದರೆ ಡಿವೈಡರ್ (Chitradurga Municipal Council) ಹಾಕಬೇಕು ಎಂದಿದೆ. ಇದರ ಅನುಸಾರವೇ ಚಿತ್ರದುರ್ಗದಲ್ಲಿ ಡಿವೈಡರ್ ನಿರ್ಮಿಸಲಾಗಿದೆ ಎಂದರು.
ಈ ಮಾತಿಗೆ ಕೆರಳಿದ ಸದಸ್ಯ ಮಂಜುನಾಥ ಗೊಪ್ಪೆ ಹಾಗೂ ನಸರುಲ್ಲಾ, ಓಡಾಡಲು ಪುಟ್ ಪಾತ್, ಚರಂಡಿಗಳೇ ಇಲ್ಲ. ಡಿವೈಡರ್ ಹಾಕಿದರೆ ಹೇಗೆ?
ನಾಲ್ಕು ದಿನದ ಹಿಂದೆ ಕರೆಯಲಾದ ಸಭೆಯಲ್ಲಿ ಸದಸ್ಯ ಶ್ರೀನಿವಾಸ್ ಅಧ್ಯಕ್ಷರಿಗೆ ಅವಮಾನ ಮಾಡಿದ್ದಾರೆಂಬ ಸಂಗತಿ ಕೆಲಕಾಲ ಚರ್ಚೆಗೆ ಗ್ರಾಸವಾಗಿತ್ತು. ಬಹುತೇಕ ಸದಸ್ಯರು ಶ್ರೀನಿವಾಸ್ ಮೇಲೆ ಮುಗಿಬಿದ್ದರು. ಒಂದು ಹಂತದಲ್ಲಿ ಸದಸ್ಯರ ಹೊರ ಹಾಕುವ ಅಧಿಕಾರ ಅಧ್ಯಕ್ಷರಿಗಿದೆ. ಅವರು ತೀರ್ಮಾನ ಕೈಗೊಳ್ಳಬೇಕೆಂದು ಸದಸ್ಯರು ಆಗ್ರಹಿಸಿದರು.
ಒಂದರ ಪಕ್ಕ ಮತ್ತೊಂದು ಕಾರು ಹೋಗುವಷ್ಟ ಜಾಗ ಎಲ್ಲ, ಡಿವೈಡರ್ ನಿರ್ಮಿಸುವಾಗ ನಗರಸಭೆ ಯಿಂದ ಅನುಮತಿ ಪಡೆದಿಲ್ಲವೆಂದಾದಲ್ಲಿ ಅದನ್ನು ಏಕೆ ಹಸ್ತಾಂತರಿಸುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.
ಚಿತ್ರದುರ್ಗ ನಗರದಲ್ಲಿ ಡಿವೈಡರ್‌ಗಳಲ್ಲಿರುವ ವಿದ್ಯುತ್ ಕಂಬಗಳಿಗೆ ಸಂಪರ್ಕ ಕಲ್ಪಿಸುವ ಸಂಬಂಧ ಸಿಸಿ ರಸ್ತೆಗಳ ಅಗೆಯಲಾಗುತ್ತಿದೆ. ಡಿವೈಡರ್ ನಿರ್ಮಿಸುವಾಗ ಪರಿಜ್ಞಾನ (Chitradurga Municipal Council) ಇರಲಿಲ್ಲವೇ? ರಸ್ತೆ ಮಾಡಿ ಮತ್ತೆ ಅಗೆಯುವುದು ಏಕೆ? ಎಂದು ಸದಸ್ಯ ಮಂಜುನಾಥ ಗೊಪ್ಪೆ ಪ್ರಶ್ನಿಸಿದರು.
ಬಹುತೇಕ ಕಡೆ ಡಿವೈಡರ್‌ಗಳಲ್ಲಿರುವ ವಿದ್ಯುತ್ ಕಂಬಗಳಲ್ಲಿ ದೀಪ ಉರಿಯುತ್ತಿಲ್ಲ, ಕತ್ತಲಾಗಿದೆ ಎಂದು ನಸರುಲ್ಲಾ ಅಸಮಧಾನ ಹೊರ ಹಾಕಿದರು.
ನಗರಸಭೆ ವಿದ್ಯುತ್ ಬಿಲ್ ಕಟ್ಟಬೇಕಿರುವುದರಿಂದ ಮೀಟರ್ ಹಾಕಬೇಕಿದೆ. ಮೀಟರ್‌ಹಾಕದೇ ಇರುವುದರಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿಲ್ಲ, ಹಿಂದೂ ಮಹಾಗಣಪತಿ ಶೋಭಾಯಾತ್ರೆ ಇದ್ದುದರಿಂದ ತಾತ್ಕಾಲಿಕವಾಗಿ ಎಲ್ಲ ಕಂಬಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತೆಂದು ಪಿಡಬ್ಲ್ಯುಡಿ ಇಂಜಿನಿಯರ್ ಚಂದ್ರಪ್ಪ ಹೇಳಿದರು.
ಮೊದಲ ಸಭೆ:
ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ನಿಗದಿ ವಿಳಂಬದಿಂದಾಗಿ 16 ತಿಂಗಳು ಆಡಳಿತ ಮಂಡಳಿ ಇಲ್ಲದೆ ಸ್ಥಳೀಯ ನಗರ ಆಡಳಿತ ಸೊರಗಿತ್ತು. ಈ ಬಾರಿ ಎರಡನೇ ಅವಧಿ ಯ ಮೊದಲ ಸಭೆ ಕಳೆದ ವಾರ ನಿಗದಿಯಾಗಿತ್ತಾದರೂ ಕೆಲ ಅಧಿ ಕಾರಿಗಳ ಗೈರು, ತಡವಾಗಿ ಆಗಮಿಸಿದ ಕಾರಣ ಸಭೆ ನಡೆದಿರಲಿಲ್ಲ.
ಪೈಪ್‌ಲೈನ್ ಅಳವಡಿಸಿ ಸಂಪರ್ಕ ಕಲ್ಪಿಸಿ
‘ವಾರ್ಡ್‌ನಲ್ಲಿ ಕೊಳವೆಬಾವಿ ಕೊರೆಸಿ ಏಳೆಂಟು ತಿಂಗಳುಗಳು ಕಳೆದಿವೆ. ಆದರೂ ಇದುವರೆಗೆ ಪೈಪ್ ಲೈನ್ ಅಳವಡಿಸಿ ಸಂಪರ್ಕ ಕಲ್ಪಿಸಿಲ್ಲ. ವಾರ್ಡ್ ನಲ್ಲಿ ಮೂರು ಬೋರ್‌ವೆಲ್ ದುರಸ್ತಿಯಲ್ಲಿದ್ದು, ಅಧಿಕಾರಿಗಳು ಗಮನಹರಿಸಿಲ್ಲ. ಎಲ್ಲ ವಾರ್ಡ್ ಗಳಲ್ಲೂ ಹೊಸದಾಗಿ ಕೊಳವೆಬಾವಿ ಕೊರೆಸಲಾಗಿದ್ದು, ನನ್ನ ವಾರ್ಡ್‌ನಲ್ಲಿ ಯಾವಾಗ ಕೊರೆಸುತ್ತೀರಾ? ವಿಳಂಬ ಮಾಡುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಎಂದು ಎಂಜಿನಿಯರ್ ಮುನಿಸ್ವಾಮಿ ಅವರನ್ನು ಸದಸ್ಯ ಮೊಹಮ್ಮದ್ ಜೈಲಾದ್ದೀನ್ ತರಾಟೆ ತೆಗೆದುಕೊಂಡರು.
ಸ್ಲಂ ವಾರ್ಡಗಳಿಗೆ ಯಾರಲ್ಲಿ ಅನುದಾನ ಕೇಳಬೇಕು?
ಸದಸ್ಯ ಮೊಹಮ್ಮದ್ ಜೈಲಾದ್ದೀನ್ ಮಾತನಾಡಿ, ಬೇರೆ ವಾರ್ಡ್ ಗಳಲ್ಲಿ ಒಂದೆರಡು ಕಾಮಗಾರಿಗೆ 25-35 ಲಕ್ಷ ರೂ. ಅನುದಾನ ನೀಡಿದರೆ, ಸ್ಲಂ ವಾರ್ಡ್ ಗಳ ಸದಸ್ಯರು ಯಾರಲ್ಲಿ ಅನುದಾನ ಕೇಳಬೇಕು. ನಮ್ಮಲ್ಲಿ ಶೇ.90ರಷ್ಟು ಎಸ್ಸಿ ಸಮುದಾಯದವರಿದ್ದು, ಹೆಚ್ಚಿನ ಅನುದಾನ ನೀಡಿ ಎಂದು ಅಧ್ಯಕ್ಷರಿಗೆ ಆಗ್ರಹಿಸಿದರು. ಜೆಜೆ ಹಟ್ಟಿ ವಾರ್ಡ್ ನಲ್ಲಿ ಯಾವುದೇ ಕೆಲಸಗಳಾಗಿಲ್ಲ. ಕುಡಿವ ನೀರಿನ ಕೊಳವೆ ಬಾವಿಗಳಿಗೆ ಮೋಟರ್ ಇಳಿಬಿಟ್ಟಿಲ್ಲವೆಂದು ಸದಸ್ಯ ಜೈಲುದ್ದೀನ್ ಸಭೆ ಗಮನಕ್ಕೆ ತಂದರು. ಸಮಸ್ಯೆಗಳ ಪಟ್ಟಿ ಮಾಡಿ ಕೊಟ್ಟಲ್ಲಿ ಎಲ್ಲಾ ಕೆಲಸಗಳನ್ನು ಹಂತ ಹಂತವಾಗಿ ಆದ್ಯತೆ ಮೇರೆಗೆ ಕೆಲಸಗಳನ್ನು ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ವಾಣಿ ವಿಲಾಸ ಸಾಗರ ಜಲಾಶಯ | 6 OCTOBER 2024 |1964 ಕ್ಯೂಸೆಕ್ಸ್ ನೀರು ಹೆಚ್ಚಳ | Vani Vilasa Sagara Dam
ಲ್ಯಾಪ್ ಟಾಪ್ ವಿತರಿಸಲು ಪಟ್ಟಿ ಸಿದ್ದಪಡಿಸಿ
ಸದಸ್ಯ ಜೆ.ಎಸ್.ದೀಪಕ್ ಮಾತನಾಡಿ, ಲ್ಯಾಪ್ ಟಾಪ್ ವಿತರಿಸಲು ವಿದ್ಯಾರ್ಥಿಗಳ ಪಟ್ಟಿ ಸಿದ್ದಪಡಿಸಿ ಮೂರು ವರ್ಷವಾಗಿದೆ. ಶೀಘ್ರ ವಿತರಿಸಲು ಕ್ರಮವಹಿಸಿ ಎಂದು ಒತ್ತಾಒತ್ತಾಯಿಸಿದರು.
ಆಡಳಿತ ನಿಭಾಯಿಸಲು ನಾನು ಸಿದ್ಧಳಿದ್ದೇನೆ, ರಾಜಕೀಯಕ್ಕೂ ಸೈ ಎಂದ ಅಧ್ಯಕ್ಷೆ ಸುಮಿತಾ
ಅಧಿಕಾರಿಗಳು ತಡವಾಗಿ ಆಗಮಿಸಿದ್ದರಿಂದ ಕಳೆದ ಸಭೆಯನ್ನು ಮುಂದೂಡಲಾಗಿತ್ತೇ ಹೊರತು ಆಡಳಿತ ವೈಫಲ್ಯದಿಂದಲ್ಲ ಎಂದು ಅಧ್ಯಕ್ಷೆ ಬಿ.ಎನ್.ಸುಮಿತಾ ತಿಳಿಸಿದರು. ಕಳೆದ ವಾರ ನಿಗದಿಯಾಗಿದ್ದ ಸಭೆ ನಡೆಯದಿರುವುದು ಅಧ್ಯಕ್ಷರಿಗೆ ಆದ (Chitradurga Municipal Council) ಅವಮಾನ ಎಂದು ಕೆಲ ಸದಸ್ಯರು ಹೇಳಿದ್ದಾರೆ. ಸಮರ್ಥವಾಗಿ ಆಡಳಿತ ನಿಭಾಯಿಸಲು ನಾನು ಸಿದ್ಧಳಿದ್ದೇನೆ. ಮೊದಲು ಮಹಿಳೆಯರನ್ನು ಗೌರವಿಸಿ. ರಾಜಕೀಯ ಮಾಡುವುದಾದರೆ, ಅದಕ್ಕೂ ಸೈ ಎಂದರು.