Chitradurga news|nammajana.com|7-10-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗದ ಮುರುಘಾ ಮಠದ ಶ್ರೀಗಳ ಪೋಕ್ಸೋ ಪ್ರಕರಣ ರಾಜ್ಯದಲ್ಲಿ ತೀವ್ರ ಹಲವರಿಗೆ ಆಘಾತ ಸೃಷ್ಟಿಸಿತ್ತು. ಈ ಪ್ರಕರಣದಲ್ಲಿ ಮುರುಘಾ ಶ್ರೀಗಳು ಜೈಲು ಸಹ ಸೇರಿದ್ದರು. ಇದೀಗ, ಪ್ರಕರಣದ ಸಾಕ್ಷಿಗಳ ವಿಚಾರಣೆ ಮುಗಿದಿದೆ. ಈ ಹಿನ್ನೆಲೆಯಲ್ಲಿ ಮುರುಘಾಶ್ರೀ ಜಾಮೀನು ಮಂಜೂರು ಮಾಡಿ ಬಿಡುಗಡೆಗೆ ಕೋರ್ಟ್ ಆದೇಶ ನೀಡಿದೆ.
ಜೈಲಿನ ಮುಂಭಾಗ ಬಸಪ್ರಭು ಸ್ವಾಮೀಜಿ ಮತ್ತು ಮುರುಘಾ ಮಠದ ಭಕ್ತ ಹೂವಿನ ಹಾರ ಹಾಕಿ ಸ್ವಾಗತ ಮಾಡಿಕೊಂಡರು. ಶರಣರು ನಗು ನಗುತ್ತಲೇ ಕಾರಗೃಹದಿಂದ ಹೊರ ಬಂದರು.
ಬಿಡುಗಡೆಯಾದ ಶರಣರು ಮಾಧ್ಯಮದ ಜೊತೆ ಮಾತನಾಡಿ ಈ ಸಮಯ ಮೌನ ವಹಿಸುವ ಸಮಯವಾಗಿದೆ. ಭಕ್ತರು ಏನು ತಿಳಿಸಬೇಕೋ ಈಗಾಗಲೇ ತಿಳಿಸಲಾಗಿದೆ. ಸತ್ಯಕ್ಕೆ ಜಯ ಸಿಗುವ ವಿಶ್ವಾಸವಿದೆ. ಕಾನೂನು ಹೋರಟ ಮುಂದುವರೆಸಲಾಗುತ್ತದೆ ಎಂದು ನಗುತ್ತಲೇ ಮಾಧ್ಯಮದವರಿಗೆ ಉತ್ತರಿಸಿದರು.
ಜೈಲಿನಿಂದ ಮುರುಘಾ ಶ್ರೀ ಬಿಡುಗಡೆಗೆ ಕೋರ್ಟ್ ಆದೇಶ ನೀಡಿದ್ದು, ಜೈಲಿನಿಂದ ಬಿಡುಗಡೆ ಬಳಿಕ ದಾವಣಗೆರೆಯಲ್ಲಿನ ಮುರುಘಾ ಮಠದ ಶಾಖ ಮಠವಾದ ಶಿವಯೋಗಿಯಾಶ್ರಮಕ್ಕೆ ತೆರಳಿದ್ದಾರೆ.
ಇಂದು ಮುಖ್ಯ ಸಾಕ್ಷಿ ವಿಚಾರಣೆ,, ಸಂತ್ರಸ್ಥೆಯ ಕ್ರಾಸ್ ಎಕ್ಸಾಮಿನ್ ಹಿನ್ನಲೆಯಲ್ಲಿ ಚಿತ್ರದುರ್ಗ ಕೋರ್ಟ್ ಗೆ ಮುರುಘಾ ಸ್ವಾಮಿ (Muruga Shri Released) ಹಾಜರಾಗಿದ್ದರು.ವಿಚಾರಣೆ ಬಳಿಕ ಜೈಲಿಂದ ಬಿಡುಗಡೆಗೆ ನ್ಯಾಯಾದೀಶರ ಆದೇಶ ನೀಡಿದರು.
ಮುರುಘಾ ಶ್ರೀ ಗೆ ಜಾಮೀನು ರದ್ದು ಮಾಡಿ ನಾಲ್ಕು ತಿಂಗಳಲ್ಲಿ ವಿಚಾರಣೆ ಮುಗಿಸಲು ಸುಪ್ರೀಂ ಆದೇಶ ಹಿನ್ನಲೆಯಲ್ಲಿ ಮರುಘಾ ಶರಣರು ಜೈಲು ಸೇರಿದ್ದರು. ಆದರೇ ಮುರುಘಾ ಶ್ರೀಗಳಿಗೆ (Muruga Shri Released) ಇಂದು ಮತ್ತೆ ಜೈಲಿಂದ ಬಿಡುಗಡೆಗೆ ಆದೇಶ ಮಾಡಲಾಗಿದೆ.
ಚಿತ್ರದುರ್ಗ 2 ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಧಿಶ ನ್ಯಾಯಾದೀಶರಾದ ಗಂಗಾಧರ GC ಅವರಿಂದ ಬಿಡುಗಡೆಗೆ ಆದೇಶ ಮಾಡಿದರು.
ಇದನ್ನೂ ಓದಿ: ಮುರುಘಾ ಶರಣರಿಗೆ ಬಿಡುಗಡೆ ಭಾಗ್ಯ | ಜಾಮೀನು ಮಂಜೂರು | Bail for Shivamurthy Sharan
ಚಿತ್ರದುರ್ಗ ಜಿಲ್ಲೆ ಪ್ರವೇಶ ನಿರ್ಬಂಧ ಹಾಕಿ ಜಾಮೀನು ನೀಡಿದ್ದ ಹೈಕೋರ್ಟ್, ಸುಪ್ರಿಂ ಕೋರ್ಟ್ ನ ನಿರ್ದೆಶನದಂತೆ 12 (Muruga Shri Released) ಸಾಕ್ಷಿಗಳ ವಿಚಾರಣೆ ಬಳಿಕ ಬಿಡುಗಡೆಗೆ ಆದೇಶ ನೀಡಲಾಗಿದೆ.