
Chitradurga news|nammajana.com|11-10-2024
ವರದಿ: ಕೆ.ಎಂ.ಶಿವಸ್ವಾಮಿ ನಾಯಕನಹಟ್ಟಿ
ನಮ್ಮಜನ.ಕಾಂ, ಚಿತ್ರದುರ್ಗ: ಕಳೆದ ಒಂದು ವಾರದಿಂದ ಸುರಿದ ಸತತ ಮಳೆಗೆ ನಾಯಕನಹಟ್ಟಿ ಪಟ್ಟಣ ಸುತ್ತಲಿನ (Nayakanahatty Rain) ಪ್ರದೇಶದಲ್ಲಿರುವ 2.5 ಕೋಟಿ ರೂ. ವೆಚ್ಚದ ಮೂರು ಚೆಕ್ ಡ್ಯಾಂಗಳು ಕೊಚ್ಚಿ ಹೋಗಿವೆ.

ನಾಯಕನಹಟ್ಟಿ ಪಟ್ಟಣ ಸಮೀಪದ ಪಿ.ಎಂ.ತಿಪ್ಪೇಸ್ವಾಮಿ ಅವರ ತೋಟದ ಬಳಿಯಿರುವ ಚೆಕ್ ಡ್ಯಾಂ, ಮಾಳಪ್ಪನಹಟ್ಟಿ ಮತ್ತು ಎನ್.ಮಹಾದೇವಪುರ ಗ್ರಾಮ ಸಮೀಪವಿರುವ 2 ಚೆಕ್ ಡ್ಯಾಂಗಳು ಹಾಳಾಗಿವೆ.
ಈ ಎಲ್ಲ ಚೆಕ್ ಡ್ಯಾಂಗಳು ದೊಡ್ಡ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾಗಿತ್ತು. ನಾಯಕನಹಟ್ಟ ಬಳಿ ಇರುವ ಎರಡು ಚೆಕ್ ಡ್ಯಾಂಗಳು ತಲಾ ಒಂದು ಕೋಟಿ ವೆಚ್ಚದಲ್ಲಿ (Nayakanahatty Rain) ನಿರ್ಮಾಣಗೊಂಡಿವೆ. ಇದೇ ರೀತಿಯಲ್ಲಿ ಎನ್. ಮಹಾದೇವಪುರ ಚೆಕ್ ಡ್ಯಾಂ 50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಒಟ್ಟಾರೆ 2.5 ಕೋಟಿ ವೆಚ್ಚದ ಚೆಕ್ ಡ್ಯಾಂಗಳು ನೀರು ಸಂಗ್ರಹಿಸುವುದರಲ್ಲಿ ವಿಫಲವಾಗಿವೆ.
ವಿಶೇಷ
ಮೂರು ಚೆಕ್ ಡ್ಯಾಂಗಳನ್ನು ಒಂದೇ ಮಾದರಿಯಲ್ಲಿ ನಿರ್ಮಾಣಗೊಂಡಿವೆ. ಆದರೆ ಚೆಕ್ ಡ್ಯಾಂನ ಎರಡೂ ಬದಿಯಲ್ಲಿ ನಿರ್ಮಿಸಲಾಗಿರುವ ರಿವೀಟ್‌ಮೆಂಟ್ ಗುಣಮಟ್ಟದ್ದಾಗಿದೆ. ಹಳ್ಳಕ್ಕೆ ಅಡ್ಡಲಾಗಿ ವಾಲ್ ನಿರ್ಮಿಸಿದ ನಂತರ ಎರಡೂ ಬದಿಯಲ್ಲಿ (Nayakanahatty Rain) ದೊಡ್ಡ ಪ್ರಮಾಣದಲ್ಲಿ ಮಣ್ಣು ಹಾಕಲಾಗುವುದು. ನಂತರ ಒಳಭಾಗದಲ್ಲಿ ಕಲ್ಲಿನ ಕಟ್ಟಡ
ನಿರ್ಮಿಸುವುದು ಚೆಕ್ ಡ್ಯಾಂನಲ್ಲಿರುವ ಸಾಮಾನ್ಯ ರಚನೆಯಾಗಿದೆ. ಆದರೆ ಇಲ್ಲಿನ ಮೂರು ಚೆಕ್ ಡ್ಯಾಂಗಳಲ್ಲಿ ಕೇವಲ ಮಣ್ಣು ಹಾಕಲಾಗಿದೆ. ಕಲ್ಲಿನ ರಿವೀಟ್ಮೆಂಟ್ ಇಲ್ಲದಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದ ಪರಿಣಾಮ ಮಣ್ಣು ಕೊಚ್ಚಿ ಹೋಗಿದೆ. ಹೀಗಾಗಿ ಚೆಕ್ ಡ್ಯಾಂನಲ್ಲಿ ನೀರು ಸಂಗ್ರಹವಾಗಿಲ್ಲ,
25 ವರ್ಷದ ದಾಖಲೆ ಮಳೆ.
ನಾಯಕನಹಟ್ಟಿ ಪ್ರದೇಶವು ಇಡೀ ರಾಜ್ಯದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಎಂದು ಕುಖ್ಯಾತಿ ಪಡೆದಿದೆ. ಆದರೆ ಈ ಬಾರಿ 25 ವರ್ಷದ ಇತಿಹಾಸದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಇಲ್ಲಿನ ಸರಾಸರಿ 415.9 ລ້ ಆಗಿದೆ. ಆದರೆ ಇಲ್ಲಿಯವರೆಗೆ 984.4 2 2. ಇದು 25 ವರ್ಷದ ಅತ್ಯಧಿಕ ಮಳೆಯಾಗಿದೆ.
ಇದನ್ನೂ ಓದಿ: ವಾಣಿ ವಿಲಾಸ ಸಾಗರದ ಇಂದಿನ ನೀರಿನ ಮಟ್ಟ | Vani Vilasa Sagara Dam
ಅ.5ರಂದು 129.6 ಮಿಮೀ ಮಳೆಯಾಗಿದ್ದು ಇದು ಒಂದೇ ದಿನ ಸುರಿದ ಸರ್ವಕಾಲಿನ ದಾಖಲೆ ಮಳೆಯಾಗಿದೆ. ಹೀಗಾಗಿ ನಿರೀಕ್ಷೆ ಹಾಗೂ ಸರಾಸರಿಗಿಂತ ಹೆಚ್ಚು ಮಳೆ ಸುರಿದಿರುವುದು ಚೆಕ್ ಡ್ಯಾಂಗಳು ಕೊಚ್ಚಿರುವುದಕ್ಕೆ ಪ್ರಮುಖ ಕಾರಣವಾಗಿದೆ. ಸಣ್ಣನೀರಾವರಿ ಇಲಾಖೆ ಇವುಗಳನ್ನು ತಕ್ಷಣ (Nayakanahatty Rain) ದೊರಸ್ತಿಗೊಳಿಸಿದರೆ ಅಂತರ್ಜಲದ ಮಟ್ಟ ಹೆಚ್ಚಲಿದೆ ಎನ್ನುವುದು ರೈತರ ಒತ್ತಾಯವಾಗಿದೆ.
