Chitradurga news|nammajana.com|13-10-2024
ನಮ್ಮಜನ.ಕಾಂ, ಚಿತ್ರದುರ್ಗ: ರಾಜವೀರ ಮದಕರಿ ನಾಯಕ ಯಾವೊಂದು ಜಾತಿಗೆ ಸೀಮಿತವಾಗದೆ, ಜಾತ್ಯಾತೀತ (Madakari Nayaka) ನಾಯಕನಾಗಿದ್ದ ಎಂದು ವಾಲ್ಮೀಕಿ ಗುರಪೀಠದ ಶ್ರೀ ವಾಲ್ಮಿಕಿ ಪ್ರಸನ್ನಾನಂದ ಶ್ರೀಗಳು ತಿಳಿಸಿದರು.
ಚಿತ್ರದುರ್ಗ ನಗರದ ಮೆಜೆಸ್ಟಿಕ್ ವೃತ್ತದಲ್ಲಿನ ರಾಜ ವೀರ ಮದಕರಿನಾಯಕಮ ಪ್ರತಿಮೆ ಬಳಿ ಭಾನುವಾರ ನಡೆದ ರಾಜ ವೀರ ಮದಕರಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ (Madakari Nayaka) ಮಾತನಾಡಿದರು.
ಮದಕರಿ ಪ್ರತಿಮೆ ಪುಷ್ಪಾರ್ಚಣೆ ಸಲ್ಲಿಸಿ ಶ್ರೀಗಳು, ನಾಡಿನಾದ್ಯಂತ ಇಂದು ಚಿತ್ರದುರ್ಗವನ್ನು ಆಳಿದ ನಾಡದೂರೆ ರಾಜ ವೀರ ಮದಕರಿನಾಯಕಯ ಜಂಯತೋತ್ಸವವನ್ನು ಅತಂತ್ಯ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ.
ಬಹುತೇಕ ದಕ್ಷಿಣ ಭಾರತದಲ್ಲಿ ಮೊಗಲರ ದಾಳಿಯನ್ನು ಸಮರ್ಥವಾಗಿ ಎದುರಿಸಿದ ತನ್ನ ಸುತ್ತ-ಮುತ್ತಲ್ಲಿನ ವೈರಿಗಳನ್ನು ಹಿಮೆಟ್ಟಿಸಿ ಚಿತ್ರದುರ್ಗವನ್ನು ಮದಕರಿ ನಾಯಕ ೨೫ ವರ್ಷಗಳ ಆಳ್ವಿಕೆಯನ್ನು ನಡೆಸಿ ಒಬ್ಬ ಹಿರೋ ಎಂದರು.
ಜಾತ್ಯಾತೀತ ನಾಯಕ ಮದಕರಿ ನಾಯಕ ಈ ಸಮಯದಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡದೆ ಎಲ್ಲಾ (Madakari Nayaka) ಜಾತಿಯವರನ್ನು ಸಮಾನಾಗಿ ಕಾಣುವುದರ ಮೂಲಕ ರಾಜ್ಯದ ಆಳ್ವಿಕೆ ನಡೆಸಿದ್ದಾರೆ.
ಈ ವ್ಯಕ್ತಿಯ ಜಯಂತಿಯನ್ನು ಪ್ರತಿ ವರ್ಷ ಚಿತ್ರದುರ್ಗದಲ್ಲಿ ಅದ್ದೂರಿಯಿಂದ ಆಚರಣೆ ಮಾಡಲಾಗುತ್ತಿದೆ. ಈ ವರ್ಷ ಸಾಂಕೇತಿಕವಾಗಿ ಆಚರಣೆ ಮಾಡಲಾಗುತ್ತಿದೆ. ಮುಂದಿನ ವರ್ಷ ಮದಕರಿ ನಾಯಕ ಜಯಂತಿಯನ್ನು ಅದ್ದೂರಿಯಾಗಿ (Madakari Nayaka) ಆಚರಿಸಲಾಗುವುದು ಈಗ ದಸರಾ ಶರಣ ಸಂಸ್ಕೃತಿ ಉತ್ಸವ ನಡೆದಿದೆ. ನಿನ್ನೆ ಅದರ ಮೆರವಣಿಗೆ ಆಗಿದೆ.
ಮದಕರಿ ಜಯಂತಿಯ ಅದ್ದೂರಿ ಅಚರಣೆಯ ಬಗ್ಗೆ ತೀರ್ಮಾನ ತೆಗೆದುಕೊಂಡು ಎಲ್ಲರನ್ನು ಜೊತೆಗೂಡಿಸಿ ಆಚರಣೆ ಮಾಡಲಾಗುವುದು ಎಂದರು.
ಇದನ್ನೂ ಓದಿ: ಚಳ್ಳಕೆರೆ | ನೀರಿನಲ್ಲಿ ಮುಳುಗಿದ ಲಕ್ಷಾಂತರ ರೂಪಾಯಿ ಟಮೋಟ, 50 ಮನೆ | ಬೆಳೆ, ಮನೆಗಳಿಗೆ ಭಾರೀ ಹಾನಿ | Challakere Rain
ಕಾರ್ಯಕ್ರಮದಲ್ಲಿ ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷರಾದ ಹೆಚ್.ಜೆ.ಕೃಷ್ಣಮೂರ್ತಿ, ಮದಕರಿ ನಾಯಕ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸಂದೀಪ್, ಮುಖಂಡರಾದ ಗೋಪಾಲಸ್ವಾಮಿ ನಾಯಕ್, ರತ್ನಮ್ಮ, ಸೋಮು, ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ಕಾಟೇಹಳ್ಳಿ ಕರಿಯಣ್ಣ, ಜಿ.ಟಿ,ರಾಜೇಶ್, ತಿಪ್ಪೇಸ್ವಾಮಿ, ಅಹೋಬಲ ಟಿವಿಎಸ್ ಮಾಲೀಕ ಪಿ.ವಿ.ಅರುಣ್, ಅಜೇಯ ಮದಕರಿ, ದರ್ಶನ್ ಇಂಗಳದಾಳ್, ತಿಪ್ಪೇಸ್ವಾಮಿ, ರಾಜ ಮದಕರಿ ನಾಯಕ, ಕಿರಣ್ ಸೇರಿದಂತೆ ಇತರರು ಭಾಗವಹಿಸಿದ್ದರು.