Chitradurga news|nammajana.com|21-10-2024
ನಮ್ಮಜನ.ಕಾಂ, ಹಿರಿಯೂರು: ಮಧ್ಯಪ್ರದೇಶ ಮೂಲದ ಇಬ್ಬರು ಮರ ಕಡಿಯಲು ಯತ್ನಿಸಿದಾಗ ತಡರಾತ್ರಿ ವಿದ್ಯುತ್ (Nut tree theft) ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ ತಾಲೂಕಿನ ಧರ್ಮಪುರದಲ್ಲಿ ನಡೆದಿದೆ.
ಧರ್ಮಪುರದ ಕಣಜನಹಳ್ಳಿ ರಸ್ತೆಯ ಕೃಷ್ಣಾಪುರ ಜಯರಾಂ ಎಂಬುವವರ ಅಡಿಕೆ ತೋಟದಲ್ಲಿ ಈ ಘಟನೆ ಜರುಗಿದ್ದು, ಮೃತ ರನ್ನು ಮಧ್ಯಪ್ರದೇಶ ಮೂಲದ ಮೋಹಿತ್ (22), ಅಕರ್‌ಲಾಲ್ ( 32) ಎಂದು ಗುರುತಿಸಲಾಗಿದೆ.

ಮೃತರು ರುದ್ರಾಕ್ಷಿ ತಯಾರಿಸುವವರು ಎನ್ನಲಾಗಿದ್ದು, (Nut tree theft) ಅವುಗಳನ್ನು ತಯಾರಿಸಲು ತಡರಾತ್ರಿ ಜಯರಾಂ ಅವರ ಅಡಿಕೆ ತೋಟದಲ್ಲಿ ಮರ ಕಡಿಯಲು ಹೋದಾಗ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರು ಧರ್ಮ ಪುರದ ಕಣಜನಹಳ್ಳಿ ರಸ್ತೆಯ ಸ್ವಾಭಿಮಾನ ಶಾಲೆ ಬಳಿ ಟೆಂಟ್ ಹಾಕಿಕೊಂಡು ವಾಸವಿದ್ದರು. ಮೃತರು ಮರ ಗಳ್ಳತನಕ್ಕೆ ಯತ್ನಿಸಿದ್ದರಾ ಎಂಬ ಶಂಕೆ ಪೊಲೀಸರು (Nut tree theft) ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Dina Bhavishya: ದಿನ ಭವಿಷ್ಯ 21-10-2024
ಮೃತರ ದೇಹಗಳಿದ್ದ ಸ್ಥಳದಲ್ಲಿ ಕೊಡಲಿ, ಗರಗಸ ಪತ್ತೆ ಯಾಗಿವೆ ಎನ್ನಲಾಗಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಅಡಿಷನಲ್ ಎಸ್‌ಪಿ ಕುಮಾರಸ್ವಾಮಿ, ಸಿಪಿಐ ಗುಡ್ಡಪ್ಪ, ಪಿಎಸ್‌ಐ ಬಾಹುಬಲಿ (Nut tree theft) ಪಡನಾಡ ಭೇಟಿ ನೀಡಿ ಪರಿಶೀಲನೆ ನಡೆಸಿ ಅಬ್ಬಿನಹೊಳೆ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252