Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಗ್ರಾಮ ಪಂಚಾಯಿತಿ ಉಪಚುನಾವಣೆ: ವೇಳಾಪಟ್ಟಿ ಪ್ರಕಟ, ಎಲ್ಲೆಲ್ಲಿ ಚುನಾವಣೆ | Gram Panchayat by-election
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ರಾಜಕೀಯ > ಗ್ರಾಮ ಪಂಚಾಯಿತಿ ಉಪಚುನಾವಣೆ: ವೇಳಾಪಟ್ಟಿ ಪ್ರಕಟ, ಎಲ್ಲೆಲ್ಲಿ ಚುನಾವಣೆ | Gram Panchayat by-election
ರಾಜಕೀಯ

ಗ್ರಾಮ ಪಂಚಾಯಿತಿ ಉಪಚುನಾವಣೆ: ವೇಳಾಪಟ್ಟಿ ಪ್ರಕಟ, ಎಲ್ಲೆಲ್ಲಿ ಚುನಾವಣೆ | Gram Panchayat by-election

Editor Nammajana
Last updated: 6 November 2024 09:11
By Editor Nammajana 3 Min Read
Share
SHARE

Chitradurga news |nammajana.com|6-11-2024

ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ ಖಾಲಿ (Gram Panchayat by-election) ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ.

ಚುನಾವಣಾ ವೇಳಾಪಟ್ಟಿ ವಿವರ ಇಂತಿದೆ. 2024ರ ನ.06 ರಿಂದ 26 ರವರೆಗೆ ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುತ್ತದೆ.

ನ.06ರಂದು ಬುಧವಾರ ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು. ನ.12ರಂದು ಮಂಗಳವಾರ ನಾಮ ಪತ್ರ ಸಲ್ಲಿಸಲು ಕೊನೆಯ ದಿನ. ನ.13ರಂದು ಬುಧವಾರ ನಾಮಪತ್ರಗಳ ಪರಿಶೀಲನೆ, ನ.15ರಂದು ಶುಕ್ರವಾರ ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ (Gram Panchayat by-election) ದಿನವಾಗಿದೆ. ಮತದಾನ ಅವಶ್ಯವಿದ್ದರೆ ನ.23ರಂದು ಶನಿವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ರವರೆಗೆ ಮತದಾನ ನಡೆಸಲಾಗುವುದು.

ಮರು ಮತದಾನ ಅವಶ್ಯವಿದ್ದರೆ ನ.25ರಂದು ಸೋಮವಾರ ನಡೆಸಲಾಗುವುದು. ನ.26ರಂದು ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ನ.26ರಂದು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ಹಾಗೂ ಸದಸ್ಯ ಸ್ಥಾನಗಳ ವಿವರ ಇಂತಿದೆ.

ಮೊಳಕಾಲ್ಮುರು ತಾಲ್ಲೂಕಿನ ಜಹಗೀರ್ ಬುಡ್ಡೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಲ್ಲರಹಟ್ಟಿ ಹೊಸಹಳ್ಳಿ ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಜಾತಿ), ತುಮಕೂರ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕೋಬನಹಳ್ಳಿ-1 ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ), ಕೊಂಡ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡ್ಲಹಳ್ಳಿ-5 ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ ಮಹಿಳೆ),

ಚಳ್ಳಕೆರೆ ತಾಲ್ಲೂಕಿನ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿಯ ಅಬ್ಬೇನಹಳ್ಳಿ ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ ಮಹಿಳೆ), ಚೌಳಕೆರೆ ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಪಂಗಡ), ಘಟಪರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಜ್ಜನಹಳ್ಳಿ ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಪಂಗಡ-ಮಹಿಳೆ), ನೇರಲಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾತ್ರಿಕೇನಹಟ್ಟಿ ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಪಂಗಡ), ಮೈಲನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂದಿಹಳ್ಳಿ ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಪಂಗಡ), ದೊಡ್ಡಚೆಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಚೆಲ್ಲೂರು-1 ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ), ಕಾಲುವೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾದಗಲಗಟ್ಟೆ ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ), ಕ್ಯಾತಗೊಂಡನಹಳ್ಳಿ ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಪಂಗಡ-ಮಹಿಳೆ),

ಚಿತ್ರದುರ್ಗ ತಾಲ್ಲೂಕಿನ ಚಿಕ್ಕಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಲ್ಲರಹಟ್ಟಿ ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ-ಮಹಿಳೆ), ಭರಮಸಾಗರ ಗ್ರಾಮ  ಪಂಚಾಯಿತಿ ವ್ಯಾಪ್ತಿಯ ಭರಮಸಾಗರ-4 ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ-ಮಹಿಳೆ), ಹಿರೇಗುಂಟನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ (Gram Panchayat by-election) ಗೊಲ್ಲರಹಟ್ಟಿ ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ), ಜಂಪಣ್ಣನಾಯಕನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಪಣ್ಣನಾಯಕನಕೋಟೆ-1 ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ-ಮಹಿಳೆ),

ಹಿರಿಯೂರು ತಾಲ್ಲೂಕಿನ ಮದಕರಿನಾಯಕನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಕರಿನಾಯಕನ ಕೋಟೆ ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ), ಧರ್ಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷ್ಣಾಪುರ ಕ್ಷೇತ್ರದ 1 ಸದಸ್ಯ ಸ್ಥಾನ (ಹಿಂದುಳಿದ ವರ್ಗ “ಬ”), ಮೇಟಿಕುರ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೆಹಳ್ಳದ ವಡ್ಡರಹಟ್ಟಿ ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ-ಮಹಿಳೆ), ಹೊಸಯಳನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸವನಹಳ್ಳಿ ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಜಾತಿ), ಯಲ್ಲದಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂದಿಗನಡು ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಜಾತಿ), ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡರಹಳ್ಳಿ-2 ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಪಂಗಡ-ಮಹಿಳೆ),

ಹೊಸದುರ್ಗ ತಾಲ್ಲೂಕಿನ ಜಾನಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲ್ಲಾಭೋವಿಹಟ್ಟಿ ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ-ಮಹಿಳೆ), ಬೆಲಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಿಯನಹಳ್ಳಿ ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ-ಮಹಿಳೆ), ಶ್ರೀರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀರಾಂಪುರ-2 ಕ್ಷೇತ್ರದ 1 ಸದಸ್ಯ ಸ್ಥಾನ (ಸಾಮಾನ್ಯ), ಹೆಗ್ಗೆರೆ ಗ್ರಾಮ  ಪಂಚಾಯಿತಿ ವ್ಯಾಪ್ತಿಯ ಓಬಳಾಪುರ ಕ್ಷೇತ್ರದ 1 ಸದಸ್ಯ ಸ್ಥಾನ (ಹಿಂದುಳಿದ ವರ್ಗ “ಅ”), ಚುನಾವಣೆ ನಡೆಯಲಿದೆ.

ಹೊಳಲ್ಕೆರೆ ತಾಲ್ಲೂಕಿನ ತೇಕಲವಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೇಕಲವಟ್ಟಿಗೊಲ್ಲರಹಟ್ಟಿ ಕ್ಷೇತ್ರದ 1 ಸದಸ್ಯ ಸ್ಥಾನ (ಹಿಂದುಳಿದ ವರ್ಗ “ಅ”-ಮಹಿಳೆ) ಹಾಗೂ 1 ಸದಸ್ಯ ಸ್ಥಾನ (ಸಾಮಾನ್ಯ) ವರ್ಗಕ್ಕೆ ಮೀಸಲಾಗಿದೆ.

ಇದನ್ನೂ ಓದಿ: Drugs: ಮನೆಯಲ್ಲಿ ಲಕ್ಷಾಂತರ ರೂಪಾಯಿ ಅಕ್ರಮ ಗಾಂಜಾ ವಶ

ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಯಾಗಳಹಳ್ಳಿ ಕ್ಷೇತ್ರದ 1 ಸದಸ್ಯ ಸ್ಥಾನ (ಅನುಸೂಚಿತ ಪಂಗಡ-ಮಹಿಳೆ)ಕ್ಕೆ ಉಪ ಚುನಾವಣೆ ನಿಗಧಿಯಾಗಿದ್ದು, ಚುನಾವಣೆ ನಡೆಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You Might Also Like

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

Chitradurga BJP ಗೆ ನೂತನ ಜಿಲ್ಲಾಧ್ಯಕ್ಷರಾಗಿ ಕೆ.ಟಿ.ಕುಮಾರಸ್ವಾಮಿ ನೇಮಕ

TAGGED:By-electionChitradurga DistrictGram PanchayatVacancyಉಪಚುನಾವಣೆಖಾಲಿ ಸ್ಥಾನಗ್ರಾಮ ಪಂಚಾಯಿತಿಚಿತ್ರದುರ್ಗ ಜಿಲ್ಲೆ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Drugs: ಮನೆಯಲ್ಲಿ ಲಕ್ಷಾಂತರ ರೂಪಾಯಿ ಅಕ್ರಮ ಗಾಂಜಾ ವಶ
Next Article Janakonda: ಜಾನಕೊಂಡ ಗ್ರಾ.ಪಂ‌.ನೂತನ ಅಧ್ಯಕ್ಷರಾಗಿ ಮಂಜುಳಾ ಸ್ವಾಮಿ ಆಯ್ಕೆ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ
ಇಂದಿನ ಸುದ್ದಿ
POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ
ದಿನ ಭವಿಷ್ಯ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?