Chitradurga news|nammajana.com|11-11-2024
ನಮ್ಮಜನ.ಕಾಂ, ಚಿತ್ರದುರ್ಗ: ಮನುಷ್ಯನ ದೇಹದ (Cricket) ಸೌಂದರ್ಯವನ್ನು ವೃದ್ಧಿಸಲು ಸದ್ಯದಲ್ಲಿ ಯಾವುದೇ ಔಷದವಿಲ್ಲ ಅದು ಕ್ರೀಡೆ ಮತ್ತು ಯೋಗದಿಂದ ಮಾತ್ರ ಸಾಧ್ಯ ಎಂದು ನಿವೃತ್ತ ತಹಶೀಲ್ದಾರ್ ಎನ್. ರಘುಮೂರ್ತಿ ಹೇಳಿದರು .
ಅವರು ಭಾನುವಾರ ಹೋಬಳಿಯ ಎನ್. ಮಹದೇವಪುರ ಗ್ರಾ.ಪಂ. ವ್ಯಾಪ್ತಿಯ ಮನಮೈನಹಟ್ಟಿ ಗ್ರಾಮದ ಏಕಾಂತೇಶ್ವರ ಅಂಗಳದಲ್ಲಿ ನಾಯಕನಹಟ್ಟಿ ಪ್ರೀಮಿಯರ್ ಲೀಗ್ ಸೀಜನ್-2 ಕ್ರಿಕೆಟ್ ಕ್ರೀಡಾಂಗಣದಲ್ಲಿ ಕ್ರೀಡಾಕೂಟಗಳನ್ನು ಉದ್ದೇಶಿಸಿ (Cricket) ಮಾತನಾಡಿದರು.

ಜಗತ್ತಿನಲ್ಲಿ ಕ್ರಿಕೆಟ್ ಕ್ರೀಡೆ ಅತ್ಯಂತ ಶ್ರೀಮಂತರ ಪ್ರಯೋಜಕತ್ವ ಆದರೂ ಇಲ್ಲಿನ ಪ್ರತಿಭೆಗಳು ಮತ್ತು ಕ್ರೀಡಾಪಟುಗಳು ಅತ್ಯಂತ ಬಡತನ ಮತ್ತು ಪ್ರತಿಭೆ ಹಾಗೂ ಪರಿಶ್ರಮದಿಂದ ಬಂದಂತ ಕ್ರೀಡೆಯಾಗಿದ್ದು ಯಾರು ಪರಿಶ್ರಮದಿಂದ ಕ್ರಿಕೆಟ್ ತನ್ಮಯತೆಯನ್ನು ಉಳಿಸಿಕೊಳ್ಳುತ್ತಾರೋ ಅವರಿಗೆ ಈ ಕ್ರೀಡಾಸಂಪತ್ತು ದೊರೆಯುತ್ತದೆ ಅಷ್ಟೇ ಮನಸ್ಸಿನ ಏಕಾಗ್ರತೆ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ.
ಇಲ್ಲಿನ ಯುವಕನಾದಂತ ರವಿಕುಮಾರ್ ಅವರು ರಾಜ್ಯಕ್ಕೆ ಆಯ್ಕೆಯಾಗಿರುವುದು ತುಂಬಾ ಸಂತಸ ತಂದಿದೆ. ತಿಪ್ಪೆ ರುದ್ರ ಸ್ವಾಮಿಯವರ ಈ ಮಣ್ಣಿನ ಸೊಗಡಿನ ಈ ನೆಲದ ಗುಣವೇ ಹಾಗೆ ಮುಂದಿನ ದಿನಗಳಲ್ಲಿ ಈ ಪ್ರೀಮಿಯರ್ ಲೀಗ್ ನಿಂದ (Cricket) ಹತ್ತು ಹಲವು ಕ್ರೀಡಾಪಟುಗಳು ರಾಜ್ಯ ಮತ್ತು ದೇಶ ಮಟ್ಟದಲ್ಲಿ ಪ್ರಶಸ್ತಿಯ ಗರಿಗಳನ್ನು ಹಾಕಿಕೊಳ್ಳಲಿ ಎಂದು ಹಾರೈಸಿದರು.
ಇದೇ ವೇಳೆ ಕರ್ನಾಟಕ ರಾಜ್ಯ ದ್ರಾಕ್ಷಾ ರಸ ನಿಗಮ ಮಂಡಳಿಯ ಅಧ್ಯಕ್ಷ ಡಾ. ಬಿ. ಯೋಗೇಶ್ ಬಾಬು ಮಾತನಾಡಿ ಕ್ರೀಡೆ ವ್ಯಕ್ತಿಯ ವ್ಯಕ್ತಿತ್ವ ವೃದ್ಧಿಸುತ್ತದೆ ಜೊತೆಗೆ ಮಾನಸಿಕ ಸಾಮರ್ಥ್ಯ ದೈಹಿಕ ಸಾಮರ್ಥ್ಯವನ್ನು ಗಟ್ಟಿಗೊಳಿಸುತ್ತದೆ. ಈ ನಿಟ್ಟಿನಲ್ಲಿ ಯುವಕರು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ತಂಡಗಳೊಂದಿಗೆ ಕ್ರೀಡೆಗೆ ಹೆಚ್ಚಿನ ಮಹತ್ವವನ್ನು ನೀಡಿ ನನ್ನ ಸಹಕಾರ ಯಾವಾಗಲೂ ಕ್ರೀಡಾಭಿಮಾನಿಗಳ ಜೊತೆಯಲ್ಲಿ ಇರ್ತೀನಿ ಸೋಲು ಗೆಲುವು ಸಹಜ ಗೆದ್ದೇಲಿ ಎಂದು ಬೀಗದೆ ಸೋತಿಯನ್ನು ಎಂದು ಕುಗ್ಗದೆ ಸೋದರತ್ವದಲ್ಲಿ ಎಲ್ಲರೂ ಅಣ್ಣತಮ್ಮಂದಿರಂತೆ ಉತ್ತಮವಾಗಿ ಆಟವನ್ನು ಮುನ್ನಡೆಸುವಂತೆ ಕ್ರೀಡಾಭಿಮಾನಿಗಳಿಗೆ ಸೂಚನೆಯನ್ನು ನೀಡಿದರು.
ಇದನ್ನೂ ಓದಿ: ವಾಣಿ ವಿಲಾಸ ಸಾಗರ ಭರ್ತಿಗೆ ಎರಡುವರೆ ಅಡಿ ಬಾಕಿ | ಈಗ ಎಷ್ಟಿದೆ ನೀರಿನ ಮಟ್ಟ | Vani Vilasa Sagara Dam
ಇದೇ ಸಂದರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಜಿ.ಬಿ. ಉಮೇಶ್ ಕುದಾಪುರ, ಪಟ್ಟಣ ಪಂಚಾಯಿತಿ ಸದಸ್ಯ ಸೈಯದ್ ಅನ್ವರ್, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ನಾಗರಾಜ್, ಸೇರಿದಂತೆ ಎಲ್ಲಾ ಕ್ರೀಡಾಪಟುಗಳು ಹೋಬಳಿಯ ವಿವಿಧ ಹಳ್ಳಿಯ ಸಾರ್ವಜನಿಕರು ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252