Chitradurga news|nammajana.com|11-11-2024
ನಮ್ಮಜನ.ಕಾಂ, ಚಿತ್ರದುರ್ಗ: ಖಚಿತ ಮಾಹಿತಿ ಆಧರಿಸಿ ಮಕ್ಕಳ ಸಹಾಯವಾಣಿ, ಶಿಶು ಅಭಿವೃದ್ಧಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ನಗರದ ತಿರುಮಲ ಕಲ್ಯಾಣ ಮಂಟಪದಲ್ಲಿ (Child marriage) ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ತಡೆದಿದ್ದಾರೆ.
ಹೊಳಲ್ಕೆರೆ ನಗರದ 17 ವರ್ಷ 3 ತಿಂಗಳಿನ ಬಾಲಕಿಯ ವಿವಾಹವನ್ನು ನಗರದ ಹುಡುಗನೊಂದಿಗೆ ನೆರವೇರಿಸಲು (Child marriage) ಪೋಷಕರು ಹಾಗೂ ಕುಟುಂಬಸ್ಥರು, ಮಾಳಪ್ಪನಹಟ್ಟಿಯ ತಿರುಮಲ ಕಲ್ಯಾಣ ಮಂಟಪದಲ್ಲಿ ಮದುವೆ ಆಯೋಜಿಸಿದ್ದರು.
ಈ ವೇಳೆ ಭೇಟಿ ನೀಡಿದ ಅಧಿಕಾರಿಗಳು ಜನ್ಮ ದಾಖಲೆ ಪರಿಶೀಲಿನೆ ನಡೆಸಿದಾಗ ಹುಡುಗಿ ಅಪ್ರಾಪ್ತ ಬಾಲಕಿ ಎಂದು ತಿಳಿದು ಬಂದಿದೆ. ಕಾನೂನಿನ ಪ್ರಕಾರ ಬಾಲ್ಯ ವಿವಾಹ ಜರುಗಿಸಿದರೆ ಕನಿಷ್ಠ ಒಂದು ವರ್ಷಕ್ಕೆ ಕಡಿಮೆ ಇಲ್ಲದಂತೆ ಎರೆಡು ವರ್ಷಗಳವರೆಗೆ ವಿಸ್ತರಿಸಬಹುದಾದ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸಲಾಗುತ್ತದೆ ಎಂದು (Child marriage) ಪೋಷಕರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Cricket: ಯುವಕರು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು: ಎನ್.ರಘುಮೂರ್ತಿ
18 ವರ್ಷ ತುಂಬುವವರೆಗೂ ಮದುವೆ ಮಾಡದಂತೆ ಬಾಲಕಿ ಹಾಗೂ ಹುಡುಗನ ಪೋಷಕರಿಂದ ಮುಚ್ಚಳಿಕೆ (Child marriage) ಬರಸಿಕೊಂಡಿದ್ದಾರೆ. ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ.ಸಿ ತಿಳಿಸಿದ್ದಾರೆ.