Chitradurga news|nammajana.com|17-11-2024
ನಮ್ಮಜನ.ಕಾ, ಚಿತ್ರದುರ್ಗ: ಪದವಿಯ ಜೊತೆ ಕೌಶಲ್ಯಾಧಾರಿತ ಶಿಕ್ಷಣ ಕಲಿಯದಿದ್ದರೆ ಜೀವನದಲ್ಲಿ ಏನನ್ನು ಸಾಧಿಸಲು (Skill based education) ಆಗುವುದಿಲ್ಲ ಎಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಹೇಳಿದರು.
ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರೇಶರ್ಸ್ ಡೇ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಗಟ್ಟಿ ನಿರ್ಧಾರ, ಸ್ಪಷ್ಠವಾದ ಗುರಿಯಿದ್ದಾಗ ಮಾತ್ರ ಸಮಾಜದಲ್ಲಿ ಸಂಬಂಧಿಗಳು, ಬಂದು-ಬಳಗದವರ ಎದುರು ಸ್ವಾಭಿಮಾನಿಯಾಗಿ ಬದುಕಿ ನಿಮ್ಮನ್ನು ಸಾಕಿ ಸಲಹಿದ ತಂದೆ-ತಾಯಿಗಳನ್ನು ಜೋಪಾನವಾಗಿ ನೋಡಿಕೊಳ್ಳಬಹುದು.

ಕೌಶಲ್ಯಯುತ ಶಿಕ್ಷಣದಿಂದ ಮಾತ್ರ ಸ್ವಂತ ಬದುಕು (Skill based education) ಕಟ್ಟಿಕೊಳ್ಳಬಹುದು. ಚಿತ್ರದುರ್ಗ ಜಿಲ್ಲೆ ಮೊದಲೆ ಬರಪೀಡಿತ ಪ್ರದೇಶ. ಇಲ್ಲಿ ಯಾವುದೇ ನೀರಾವರಿ ಕೈಗಾರಿಕೆಗಳಿಲ್ಲ. ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಪಡೆದವರು ದೊಡ್ಡ ದೊಡ್ಡ ನಗರಗಳಿಗೆ ಹೋಗಿ ನೆಲೆಸುತ್ತಾರೆ. ನೀವುಗಳು ಕಷ್ಟಪಟ್ಟು ಓದಿ ನ್ಯಾಯವಾಗಿ ದುಡಿದು ಉತ್ತಮ ಬದುಕು ಕಂಡುಕೊಳ್ಳಿ ಎಂದು ಹೇಳಿದರು.
ಶಿಕ್ಷಣದ ಜೊತೆ ಕಂಪ್ಯೂಟರ್, ಟ್ಯಾಲಿ ಕಲಿತರೆ ದುಡಿಮೆಯ ಮಾರ್ಗ ಕಂಡುಕೊಳ್ಳಬಹುದು. ದುಡಿಯುವ ಕೈಗಳಿಗೆ ಎಲ್ಲರೂ ನಮಸ್ಕಾರ ಹೊಡೆಯುತ್ತಾರೆ. ದುಡಿಯದೆ ಸೋಮಾರಿಗಳು (Skill based education) ಮತ್ತೊಬ್ಬರ ಮುಂದೆ ಕೈಚಾಚಿ ಬೇಡಬೇಕಾಗುತ್ತದೆ. ಅದಕ್ಕಾಗಿ 21-22 ವರ್ಷದೊಳಗೆ ಪದವಿ ಪಡೆದು ಸಮಾಜದಲ್ಲಿ ಉತ್ತಮ ನಾಗರೀಕರಿಗೆ ಬಾಳುವ ನಿರ್ಧಾರ ಮಾಡಬೇಕೆಂದು ತಿಳಿಸಿದರು.
ಇದನ್ನೂ ಓದಿ: ಪ್ರಭಾವಿಗಳಿಂದ ನಗರಸಭೆ ಆಸ್ತಿ ಒತ್ತುವರಿ ಮತ್ತು ಮಾರಟಕ್ಕೆ ಯತ್ನ: ನಗರಸಭೆ ಸದಸ್ಯ ಶ್ರೀನಿವಾಸ್ ಆರೋಪ | Akrama
ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಜೆ.ಶಿವಕುಮಾರ್, ಬಿ.ಇ.ಡಿ.ಕಾಲೇಜು ಪ್ರಾಚಾರ್ಯರಾದ ಡಾ.ಬಿ.ಸಿ.ಅನಂತರಾಮು, ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಚೀಫ್ ಕೋ-ಆರ್ಡಿನೇಟರ್ ರಾಜು ಆರ್.ಎಸ್. ಪ್ರಕೃತಿ (Skill based education) ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ.ಎಸ್.ಬಿ.ನವಾಜ್ ಇನ್ನು ಅನೇಕರು ವೇದಿಕೆಯಲ್ಲಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252