Chitradurga news|nammajana.com|19-11-2024
ನಮ್ಮಜನ.ಕಾಂ, ಚಿತ್ರದುರ್ಗ: ಜಿಲ್ಲೆಯಾದ್ಯಂತ 1670 ಬಿಪಿಎಲ್ ಕಾರ್ಡ್ ಗಳು ಎಪಿಎಲ್ ಕಾರ್ಡ್ ಆಗಿ (BPL card) ಬದಲಾವಣೆಯಾಗಿದ್ದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಚ್ಚಬೋರನಹಟ್ಟಿ ಗ್ರಾಮದಲ್ಲಿ10ಕ್ಕೂ ಅಧಿಕ ಬಿಪಿಎಲ್ ಕಾರ್ಡ್ ಬದಲಾವಣೆಯಾಗಿದ್ದು, ರೈತರಾದ ಪಾಲಯ್ಯ, ಬೋರಯ್ಯ ಪ್ರತಿಕ್ರಿಯಿಸಿ ಬಿಪಿಎಲ್ ಕಾರ್ಡ್ ಎಪಿಎಲ್ ಆಗಿಬದಲಾವಣೆ ಆದಕಾರಣ ಜೀವನ ನಡೆಸಲು ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಆಸ್ಪತ್ರೆಗಳಿಗೆ ಹೋದರೆ ಲಕ್ಷಾಂತರ ರುಪಾಯಿ ಕೇಳ್ತಿದ್ದಾರೆ. ಜಮೀನಿದೆ ಎಂದು ಕಾರ್ಡ್ ತೆಗೆದಿದ್ದಾರೆ, ಅತ್ತ ಜಮೀನಲ್ಲಿ ಬೆಳೆಯೂಸಿಗ್ತಿಲ್ಲ, ಇತ್ತ ರೇಷನ್ ಕಾರ್ಡ್ ಇಲ್ಲ (BPL card) ಎಂಬಂತಾಗಿದೆ.ಜಮೀನನ ಅಧಾರದ ಮೇಲೆ ಬಿಪಿಎಲ್ ಕಾರ್ಡ್ ತೆಗೆದರೆ ರೈತರು ವಿಷ ಕುಡಿಯಬೇಕಾಗುತ್ತದೆ ಎಂದರು.
8 ಎಕರೆ ಜಮೀನಿದೆ ಎಂದು ಬಿಪಿಎಲ್ ನ ಎಪಿಎಲ್ ಮಾಡಿದರೆ ಜಮೀನು ಇಬ್ಬರು ಮಕ್ಕಳಿಗೆ ತಲಾ ನಾಲ್ಕು ಎಕರೆ ಸೇರುತ್ತದೆ. (BPL card) ಹೀಗಿದ್ದಾಗ ಯಾವ ಅಧಾರದ ಮೇಲೆ ಸರ್ಕಾರಗಳು ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಿ ವಿ ಸಾಗರಕ್ಕೆ 462 ಕ್ಯೂಸೆಕ್ಸ್ ನೀರು | ಎಷ್ಟಿದೆ ಇಂದಿನ ನೀರಿನ ಮಟ್ಟ | Vani Vilasa Sagara
ಎಪಿಎಲ್ ಕಾರ್ಡ್ ಆಗಿರೋದಕ್ಕೆ ಉಪವಾಸ, ವನವಾಸ (BPL card) ಅನುಭವಿಸುಂತಾಗಿದೆ. ಸರ್ಕಾರ ನಮ್ಮಂತಹ ರೈತರಿಗೆ ಬಿಪಿಎಲ್ ಕಾರ್ಡ್ ಕೊಡಲೇಬೇಕು ಎಂದು ಅವರು ಒತ್ತಾಯಿಸಿದ್ದಾರೆ.