Chitradurga news |nammajana.com|20-11-2024
ನಮ್ಮಜನ.ಕಾಂ, ಹೊಳಲ್ಕೆರೆ: ಜೀವನದಲ್ಲಿ ಜಿಗುಪ್ಪೆಗೊಂಡು ತಾಯಿ, ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ (suicide) ಚಿಕ್ಕಂದವಾಡಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಗ್ರಾಮದ (55), ಲಾವಣ್ಯ(17)ಮೃತರು. ಆರು ತಿಂಗಳ ಹಿಂದೆ ಮನೆಯ ಯಜಮಾನ ಹೃದಯಾಘಾತ ದಿಂದ ಮೃತರಾಗಿದ್ದರು.
ಗಂಡ, ಹೆಂಡತಿ, ಮಗಳು ಮೂರು ಜನರ ಚಿಕ್ಕ ಕುಟುಂಬ ವಾಗಿತ್ತು. ಕಷ್ಟಪಟ್ಟು ದುಡಿದು ಉಣ್ಣುವ ಮನಸ್ಸು ಅವರದ್ದು, ವಿಧಿ ಆಟವೇನೋ ಆರು ತಿಂಗಳ ಹಿಂದೆ ಮನೆಯ (suicide) ಯಜಮಾನನಿಗೆ ಹೃದಯಾಘಾತವಾಗಿ ಮರಣ ಹೊಂದಿದರು. ಅಂದಿನಿಂದ ಆ ಕುಟುಂಬದಲ್ಲಿ ಕತ್ತಲೆ ಕಾರ್ಮೋಡ ಕವಿಯಲಾರಂಭಿಸಿತು.
ಪತಿ ತೀರಿಕೊಂಡಿದ್ದೆ ಒಂದು ನೆಪವಾಯೇನೋ. ಪತಿ ಬಸವರಾಜಪ್ಪ ನಿಧನರಾದ ಪತ್ನಿ-ಮಗಳು ಖಿನ್ನತೆಗೆ ದಿನದಿಂದಲೂ ಒಳಗಾಗಿದ್ದರು.ಅಂದಿನಿಂದಲೂ (suicide) ಯಾರೊಂದಿಗೂ ಬೆರೆಯುತ್ತಿರಲಿಲ್ಲ.
ಕಳೆದ ಎಂಟತ್ತು ದಿನಗಳಿಂದ ಸಂಬಂಧಿಕರು ಫೋನ್ ಮಾಡಿದರೆ ಸ್ವಿಚ್ ಆಫ್ ಬರುತ್ತಿತ್ತು. ಪಕ್ಕದ ಮನೆಗೆ ಫೋನ್ ಮಾಡಿ ಕೇಳಿದಾಗ ಹಲವು ದಿನಗಳಿಂದ ಮನೆ ಬೀಗ ಹಾಕಿರುವುದಾಗಿ ತಿಳಿಸಿದ್ದಾರೆ.
ಪುಷ್ಪ ವಾಸವಿದ್ದ ಮನೆಯ ಅಕ್ಕಪಕ್ಕ ಯಾವುದೇ ಮನೆಗಳು ಇರಲಿಲ್ಲ. ಓಡಾಡುವ ಜನರು ಮನೆ ಬೀಗ ಹಾಕಿರುವುದನ್ನು ಕಂಡು ಯಾವುದೋ ಊರಿಗೆ ಹೋಗಿರಬಹುದು ಎಂದು ಭಾವಿಸಿದ್ದಾರೆ. ಪುಷ್ಪ ಅವರ ಸಂಬಂಧಿ ಆಡನೂರು ನರೇಶ್ ಗ್ರಾಮದ ಪರಿಚಯಸ್ಥರಿಗೆ ಪೋನ್ ಮಾಡಿ ವಿಚಾರಿಸಿದ್ದಾರೆ.(suicide) ಅವರು ಮನೆಯಬಳಿ ಹೋದಾಗ ಬೀಗ ಹಾಕಿದೆ, ಆದರೆ ಮನೆಯಿಂದ ಏನೋ ವಾಸನೆ ಬರುತ್ತಿದೆ ಎಂದು ತಿಳಿಸಿದ್ದಾರೆ.
ಕೂಡಲೇ ಸಂಬಂಧಿಕರು ಮಂಗಳವಾರ ಆಗಮಿಸಿ ಬಾಗಿಲು ಮುರಿದು ನೋಡಿದಾಗ ತಾಯಿ, ಮಗಳು ಇಬ್ಬರೂ ನೇಣಿಗೆ ಶರಣಾಗಿರುವುದು ಕಂಡು ಬಂದಿದೆ. ನೇಣು ಬಿಗಿದುಕೊಂಡು ಹಲವು ದಿನಗಳಾಗಿರುವ ಕಾರಣ ಹಗ್ಗದಲ್ಲಿ ತಲೆ ಮಾತ್ರ ಇದ್ದು, ದೇಹಗಳು ನೆಲಕ್ಕೆ ಬಿದ್ದಿರುವುದಾಗಿ ತಿಳಿದು ಬಂದಿದೆ.
ಸಮೃದ್ಧ ಅಡಕೆ ತೋಟ: ಬಸವರಾಜಪ್ಪ ತನ್ನ ಒಬ್ಬಳೇ
ಮಗಳ ಭವಿಷ್ಯ ರೂಪಿಸುವ ಉದ್ದೇಶದಿಂದ ಕಷ್ಟಪಟ್ಟು ನಾಲ್ಕು ಎಕರೆ ಅಡಕೆ ತೋಟ ಮಾಡಿದ್ದರು. ಅದು ಈಗಾಗಲೇ ಫಲ ಕೊಡುವ ಹಂತದಲ್ಲಿದೆ. ಮಗಳು ಲಾವಣ್ಯ ಚಿಕ್ಕಜಾಜೂರಿನ ಎಸ್ಜೆಎಂ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಳು. ಇಡೀ ಶಾಲೆಯೇ ಮೌನಕ್ಕೆ ಶರಣಾಗಿದೆ. ಶಿಕ್ಷಕರ, ಸ್ನೇಹಿತರ ಕಣ್ಣುಗಳು ತುಂಬಿಕೊಂಡಿದ್ದವು. ಇನ್ನು ಮನೆಯಲ್ಲಿ ಯಾರು ಇಲ್ಲದ ಕಾರಣ ಮನೆ ಬಣಗುಡುತ್ತಿದೆ. ಮೂವರು ಅಗಲಿದ ಕಾರಣ (suicide) ಸಂಬಂಧಿಕರು, ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು.
ಇದನ್ನೂ ಓದಿ: Accident: ಟಾಟಾಏಸಿ ಗೆ ಬೈಕ್ ಡಿಕ್ಕಿ, ಇಬ್ಬರು ಸಾವು
ಪಿಎಸ್ಐ ನೇತ್ರಾವತಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.