Chitradurga news|nammajana.com|7-12-2024
ನಮ್ಮಜನ.ಕಾಂ, ಹೊಸದುರ್ಗ: ಸಾಮಾನ್ಯವಾಗಿ ಖಾಸಗಿ, ಸರಕಾರಿ ಬಸ್ನಲ್ಲಿ ಶಾಲಾ ಮಕ್ಕಳು ಪ್ರವಾಸ ಮಾಡುವುದು ಸಾಮಾನ್ಯ, ಆದರೆ ಹೊಸದುರ್ಗ ತಾಲೂಕಿನ ಮಾರಬಘಟ್ಟ (Air travel) ಗ್ರಾಮದ ಸರಕಾರಿ ಶಾಲೆಯ ಮಕ್ಕಳು ವಿಮಾನದಲ್ಲಿ ಪ್ರವಾಸ ಮಾಡಿದ್ದಾರೆ.
ಹಳ್ಳಿಯಲ್ಲಿ ಆಕಾಶದಲ್ಲಿ ಹಾರಾಡುವ ವಿಮಾನವನ್ನು ನೋಡಿ ಖುಷಿಪಡುತ್ತಿದ್ದ ಮಕ್ಕಳು ವಿಮಾನ ಪ್ರಯಾಣ ಮೂಲಕ ಪ್ರವಾಸ ಹೋಗಿರುವುದು ವಿದ್ಯಾರ್ಥಿಗಳ ಪೋಷಕರು, ಗ್ರಾಮಸ್ಥರಿಗೂ ಖುಷಿ ತಂದಿದೆ. ವಿಮಾನ ಪ್ರಯಾಣದ ಮೂಲಕ ಶೈಕ್ಷಣಿಕ (Air travel) ಪ್ರವಾಸ ಹೊರಟ್ಟಿದ್ದ ಮಕ್ಕಳನ್ನು ಇಡೀ ಗ್ರಾಮವೇ ಬೀಳ್ಕೊಟ್ಟಿದೆ.
23 ಸದಸ್ಯರ ತಂಡ ಇಂದು ಹೊಸದುರ್ಗಕ್ಕೆ, 19 ವಿದ್ಯಾರ್ಥಿಗಳು ವಾಪಸ್
ಶಾಲೆಯ ಸೌಟ್ಸ್ ಮತ್ತು ಹಾಗೂ ಮೂವರು ಶಿಕ್ಷಕರು, ಒಬ್ಬ ಶಿಕ್ಷಣ ಸಂಯೋಜಕ ಸೇರಿದಂತೆ ಒಟ್ಟು 23 ಸದಸ್ಯರ ತಂಡ ಗುರುವಾರ ಬೆಳಗ್ಗೆ ಶಿವಮೊಗ್ಗದ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ. ಶಿವಮೊಗ್ಗ-ಬೆಂಗಳೂರು ವಿಮಾನ ಪ್ರಯಾಣದ ಪ್ರತಿ ಟಿಕೆಟ್ ದರ 2876 ರೂ. ಇದೆ.
ಗುರುವಾರ ಸಂಜೆ ಬೆಂಗಳೂರು ತಲುಪಿರುವ ಮಕ್ಕಳು ಸರ್ ಎಂ.ವಿಶ್ವೇಶ್ವರಯ್ಯ ಅವರ ಹುಟ್ಟೂರು ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರದ ಆದಿಯೋಗಿ ಮಂದಿರ, ಬನ್ನೇರುಘಟ್ಟ, ವಿಧಾನಸೌಧ, ನೆಹರು ತಾರಾಲಯ, ವಿಶ್ವೇಶ್ವರಯ್ಯ (Air travel) ಮೂಸಿಯಂ, ಲಾಲ್ ಬಾಗ್ ಸೇರಿದಂತೆ ಹಲವು ಸ್ಥಳಗಳನ್ನು ವೀಕ್ಷಿಸಿ ಶನಿವಾರ ಸಂಜೆ ವಾಪಸ್ ಬರಲಿದ್ದಾರೆ.
ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಶಾಲೆಯ ಮೂವರು ಶಿಕ್ಷಕರು ತಲಾ 10 ಸಾವಿರ ರೂ. ಭರಿಸಿದ್ದಾರೆ. ನಂತರ ಗ್ರಾಮಸ್ಥರು, ದಾನಿಗಳ ನೆರವಿನಿಂದ ಹೆಚ್ಚಿನ ಆರ್ಥಿಕ ನೆರವು ಪಡೆದು ಸರಕಾರಿ ಶಾಲೆಯ ಮಕ್ಕಳನ್ನು ವಿಮಾನದಲ್ಲಿ ಬೆಂಗಳೂರಿಗೆ ಪ್ರವಾಸ ಮಾಡಿಸಿದ್ದಾರೆ. ಈ ಮೂಲಕ ಹಳ್ಳಿಯ ಮಕ್ಕಳ ವಿಮಾನ ಏರುವ ಕನಸನ್ನು ನನಸು ಮಾಡಿದ್ದಾರೆ.
ಬಡ ಮಕ್ಕಳಿಗೆ ವಿಮಾನಯಾನ ಎನ್ನುವುದು ಕನಸಿನ ಮಾತು. ತಂದೆ ತಾಯಿಗಳು ಸಹ ಮಕ್ಕಳಿಗೆ ವಿಮಾನ ಪ್ರಯಾಣ ಮಾಡಿಸುವುದು ಕಷ್ಟಕರ. ಹಾಗಾಗಿ ಮಕ್ಕಳಿಗೆ ವಿಮಾನ ಪ್ರಯಾಣದ ಮೂಲಕ ಶೈಕ್ಷಣಿಕ ಪ್ರವಾಸಕ್ಕೆ ಕರೆದುಕೊಂಡು ಹೋಗಬೇಕೆಂಬ ಯೋಜನೆಗೆ ಶಾಲೆಯ ಶಿಕ್ಷಕರು, ದಾನಿಗಳು,
ಹೊಸದುರ್ಗ ತಾಲೂಕಿನ ಮಾರಬಘಟ್ಟ ಸರಕಾರಿ ಶಾಲೆಯ ಮಕ್ಕಳು ಶಿವಮೊಗ್ಗ ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ ವಿಮಾನ ಪ್ರಯಾಣ ಕೈಗೊಂಡರು.
ಗ್ರಾಮಸ್ಥರು ನೆರವು ನೀಡಿದ್ದರಿಂದ ವಿಮಾನಯಾನ ಸಾಧ್ಯವಾಗಿದೆ. ಇಲ್ಲಿನ ಬಹುತೇಕ ಮಕ್ಕಳು ರೈಲು, ಮೆಟ್ರೋದಲ್ಲಿ ಪ್ರಯಾಣ ಮಾಡಿಲ್ಲ, ಹಾಗಾಗಿ ಬೆಂಗಳೂರಿನಲ್ಲಿ ಮೆಟ್ರೋದಲ್ಲಿ ಸಂಚರಿಸುವ ಮೂಲಕ ರೈಲು ಪ್ರಯಾಣದ ಅನುಭವನೀಡಿದ್ದೇವೆ. ಎರಡು ದಿನದ ಶೈಕ್ಷಣಿಕ ಪ್ರವಾಸಕ್ಕೆ 1.9 ಲಕ್ಷ ರೂ. ವೆಚ್ಚವಾಗಲಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಮಾರಬಘಟ್ಟದ ಪ್ರಭಾಕರ್ ಎನ್ನುವವರು ವಿದ್ಯಾರ್ಥಿಗಳಿಗೆ (Air travel) ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ ಎನ್ನುತ್ತಾರೆ ಶಿಕ್ಷಕ ಯೋಗರಾಜ್.
ಇದನ್ನೂ ಓದಿ: ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೂಮಿ ಪೂಜೆ | Development work
ಬಾಕ್ಸ್
ವಿಮಾನಯಾನದ ಶೈಕ್ಷಣಿಕ ಪ್ರವಾಸ ಮಕ್ಕಳಿಗೆ ಖುಷಿ ಕೊಟ್ಟಿದೆ. ಶಾಲೆಯ ಶಿಕ್ಷಕರು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ವಿಮಾನಯಾನದ ಅನುಭವ ತಿಳಿಯಲಿ ಹಾಗೂ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯಲು ಯೋಜನೆ ರೂಪಿಸಿದ್ದಾರೆ.
ಆಕಾಶದಲ್ಲಿ ಹಾರಾಡುತ್ತಿದ್ದ ವಿಮಾನ ನೋಡಿ ಖುಷಿ ಪಡುತ್ತಿದ್ದ ಮಕ್ಕಳು ವಿಮಾನ ಪ್ರಯಾಣ ಮಾಡಿ ಪ್ರತ್ಯಕ್ಷ ಅನುಭವ ಪಡೆದಿದ್ದಾರೆ. ಪ್ರವಾಸದ ಸಂದರ್ಭದಲ್ಲಿ ಜಲ ಸಾರಿಗೆ, ಮೆಟ್ರೋ, ವಿಮಾನ ಪ್ರಯಾಣ ಮಾಡಿಸಿದ್ದೇವೆ.
-ಶಶಿಧರ್ ಶಿಕ್ಷಣ ಸಂಯೋಜಕ, ಹೊಸದುರ್ಗ.