Chitradurga news|nammajana.com|14-12-2024
ನಮ್ಮಜನ.ಕಾಂ, ಹಿರಿಯೂರು: ತೋಟದಲ್ಲಿ ಜಾನುವಾರು ಮೇಯಿಸಲು ಹೊರಟಿದ್ದ ಮಹಿಳೆ ಮೇಲೆ ಹಲ್ಲೆ ನಡೆಸಿದ (Crime) ದುಷ್ಕರ್ಮಿಗಳು, 48 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾದ ಘಟನೆ ತಾಲೂಕಿನ ಪಟ್ರೆಹಳ್ಳಿ ಸಮೀಪ ಶುಕ್ರವಾರ ಬೆಳಗ್ಗೆ ನಡೆದಿದೆ.
ತಾಲೂಕಿನ ಪಟ್ರೆಹಳ್ಳಿ ನಿವಾಸಿ ಶಿವಸ್ವಾಮಿ ಅವರ ಪತ್ನಿ ದೀಪಾ(32) ಹಲ್ಲೆಗೆ ಒಳಗಾದ ಮಹಿಳೆ. ಹಲ್ಲೆಯಿಂದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ತುಮಕೂರಿನ ಸಿದ್ದಗಂಗಾ (Crime) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪಾರಾಗಿದ್ದಾರೆ. ಪ್ರಾಣಾಪಾಯದಿಂದ
ದೀಪಾ ಎಂದಿನಂತೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ನಂದಿಹಳ್ಳಿ ರಸ್ತೆಯಲ್ಲಿರುವ ತಮ್ಮ ತೋಟಕ್ಕೆ ಹಸುಗಳನ್ನು ಹೊಡೆದುಕೊಂಡು ಹೋಗಿದ್ದಾರೆ. ತೋಟದ ಗೇಟ್ ಬೀಗ (Crime) ತೆಗೆದು ಹಸುಗಳನ್ನು ಒಳಗೆ ತಂದುಗೇಟ್ ಹಾಕಿದ್ದಾರೆ.
ಈ ವೇಳೆ ಎತ್ತರಕ್ಕೆ ಬೆಳೆದು ನಿಂತಿದ್ದ ಹುಲ್ಲಿನ ಪೊದೆಯೊಳಗೆ ಅವಿತು ಕುಳಿತಿದ್ದ ದುಷ್ಕರ್ಮಿಗಳು, ಸುತ್ತ ಯಾರೂ ಇಲ್ಲದ್ದನ್ನು ಗಮನಿಸಿ, ದೀಪಾ ಮೇಲೆ ಹಲ್ಲೆ ನಡೆಸಿ, ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಇದನ್ನೂ ಓದಿ: Darshan Case | ದರ್ಶನ್ ಗೆ ಜಾಮೀನು | ರೇಣುಕಾಸ್ವಾಮಿ ತಂದೆ ಹೇಳಿದ್ದೇನು?
ಗಾಯಗೊಂಡ ದೀಪಾ ಕೂಗಿದ್ದನ್ನು ಕೇಳಿಸಿಕೊಂಡ, ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರ, ದೀಪಾ (Crime) ಮನೆಯವರಿಗೆ ವಿಷಯ ತಿಳಿಸಿದ್ದಾನೆ.
ಮನೆಯವರು ಬಂದು ದೀಪಾರನ್ನು ತುಮಕೂರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವಿಷಯ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಡಿವೈಎಸ್ಪಿಶಿವಕುಮಾರ್, ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಕಾಳಿಕೃಷ್ಣ, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಚಿತ್ರದುರ್ಗ ಶ್ವಾನದಳ ಕರೆಸಿ ಪರಿಶೀಲನೆ ನಡೆಸಿದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.