Chitradurga news|nammajana.com|15-12-2024
ನಮ್ಮಜನ.ಕಾಂ, ಸಿರಿಗೆರೆ: ಸಮೀಪದ ಆಲಘಟ್ಟ, (Leopard attack) ವಡ್ಡರಸಿದ್ದವ್ವನಹಳ್ಳಿ ಗ್ರಾಮದ ನಡುವಿನ ಗುಡ್ಡದ ಸಮೀಪ ಚಿರತೆಯೊಂದು ಕುರಿ ಮೇಲೆ ಶುಕ್ರವಾರ ತಡರಾತ್ರಿ ದಾಳಿ ಮಾಡಿದೆ. ಗ್ರಾಮದ
ಹೊರವಲಯದಲ್ಲಿರುವ ಗುಡ್ಡದ ಬಳಿ ದನಗಳು ಮತ್ತು (Leopard attack) ಕುರಿಗಳನ್ನು ಮೇಯಿಸಿಕೊಂಡು ಬರಲು ರಂಗಪ್ಪ ಎಂಬುವರು ತೆರಳಿದ್ದರು. ಈ ನಡುವೆ ಚಿರತೆಯೊಂದು ಕುರಿ ಮೇಲೆ ದಾಳಿ ನಡೆಸಿದೆ. ಎಚ್ಚೆತ್ತುಕೊಂಡ ದನ ಕಾಯುವವರು ಜೋರಾಗಿ ಕೂಗಿ ಚಿರತೆಯನ್ನು ಓಡಿಸಿದ್ದಾರೆ.
ಇದನ್ನೂ ಓದಿ: horoscope | ದಿನ ಭವಿಷ್ಯ ,ಯಾವ್ಯಾವ ರಾಶಿಗೆ ಶುಭ ಭಾನುವಾರ?
ಚಿರತೆಯು ಅಕ್ಕಪಕ್ಕದ ಗುಡ್ಡಗಳಲ್ಲಿ ಇದ್ದು, ಇದನ್ನ ಅರಣ್ಯ (Leopard attack) ಇಲಾಖೆ ಅಧಿಕಾರಿಗಳು ಚಿರತೆ ಹಿಡಿಯಲು ಅರಣ್ಯ ಇಲಾಖೆಗೆ ರೈತರ ಮನವಿ ಹಿಡಿದು, ರೈತರು ನಿರ್ಭಯವಾಗಿ ಧನಕರಗಳನ್ನು ಮೇಯಿಸಲು ಅನುವು ಮಾಡಿಕೊಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.