
Chitradurga news|nammajana.com|17-12-2024
ನಮ್ಮಜನ.ಕಾಂ, ಚಿತ್ರದುರ್ಗ: ಅಮೇರಿಕಾ ಯುವತಿಯನ್ನು ಪ್ರೀತ್ಸಿ ಮದುವೆಯಾದ ಭಾರತದ ಯುವಕ ಅದರಲ್ಲೂ (love marriage) ಅಪರೂಪದ ಮದುವೆಗೆ ಸಾಕ್ಷಿಯಾಗಿದ್ದು ಕೋಟೆನಾಡು ಚಿತ್ರದುರ್ಗವಾಗಿದೆ.
ಚಿತ್ರದುರ್ಗ ಮೂಲದ ಅಭಿಲಾಶ್, ಅಮೇರಿಕೆ ಮೂಲದ ಕೆಲ್ಲಿ ಪ್ರೀತ್ಸಿ ಮದುವೆಯಾದ ವಧು ವರರಾಗಿದ್ದು ಚಿತ್ರದುರ್ಗದಲ್ಲಿ (love marriage) ಭಾರತೀಯ ಸಂಪ್ರದಾಯದಂತೆ ಮದುವೆ ಹಸೆಮಣೆ ಏರಿದ್ದಾರೆ.

ಅಮೇರಿಕೆಯಲ್ಲಿ ಓದುತ್ತಿದ್ದಾಗ ಕೋವಿಡ್ ವೇಳೆ ಪ್ರೀತಿಯಲ್ಲಿ ಬಿದ್ದಿದ್ದ ಜೋಡಿ ಬಳಿಕ ಕೋವಿಡ್ ಯುದ್ದ ಗೆದ್ದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಲವ್ ಬರ್ಡ್ಸ್.
ಚಿತ್ರದುರ್ಗದ ಜಿ.ಜಿ. ಕಲ್ಯಾಣ ಮಂಟಪದಲ್ಲಿ ನಡೆದ ವಿವಾಹದಲ್ಲಿ ಅಮೇರಿಕದ ಹುಡುಗಿ ಕೆಲ್ಲಿ ಸೀರೆಯುಟ್ಟು, (love marriage) ಕಾಲುಂಗುರು ತೊಟ್ಟು, ಮೆಹೆಂದಿ ಹಾಕಿ, ಹಸೆಮಣೆ ಏರಿದ್ದಾಳೆ. ಹುಡುಗಿ ಜೊತೆ ಭಾರತೀಯ ಉಡುಪು ಧರಿಸಿ ಮದುವೆಯಲ್ಲಿ ಅಮೇರಿಕನ್ ಫ್ಯಾಮಿಲಿ ಮಿಂಚಿಂಗ್ ದೃಶ್ಯಗಳು ಕಂಡು ಬಂದವು.
ವಧು ಕೆಲ್ಲಿ ಕನ್ನಡ ಪ್ರೇಮಕ್ಕೆ ವರ ಅಭಿಲಾಷ್ ದಿಲ್ ಖುಷ್ ಆಗಿದ್ದು ಅಭಿಲಾಶ್ ಬಿಎನ್ವೈ ಬ್ಯಾಂಕಲ್ಲಿ ಕ್ವಾಂಟಿಟಿ ರಿಸರ್ಚರ್ ಆಗಿ ಕೆಲಸ ಮಾಡುತ್ತಿದ್ದಾನೆ.
ಇದನ್ನೂ ಓದಿ: ಮದುವೆ ಮೆರವಣಿಗೆ | ಯುವಕನ ಹೃದಯದ ಸದ್ದು ನಿಲ್ಲಿಸಿದ DJ ಸದ್ದು | Death young man
ಹುಡುಗಿ ಕೆಲ್ಲಿ ಸಹ ಹೆಲ್ಥ ಕೇರ್ ಕಂಪನಿಯಲ್ಲಿ ಇನ್ಸ್ ಸ್ಟ್ರಕ್ಷನಲ್ ಡಿಸೈನರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾಳೆ.ಕುಟುಂಬ ಐಕ್ಯತೆ (love marriage) ಜೊತೆ ಸಾಂಸ್ಕೃತಿಕ ಐಕ್ಯತೆಗೆ ಸಾಕ್ಷಿಯಾದ ಮದುವೆಯಾಗಿದ್ದು ಇದು ಒಂದು ವಿಶೇಷ ಮದುವೆಯಾಗಿದ್ದು ಕೋಟೆ ನಾಡಿನ ಜನರ ಕಣ್ಣು ಹುಬ್ಬೆರುವಂತೆ ಮಾಡಿದೆ.