![](https://nammajana.com/wp-content/uploads/2025/02/IMG-20250203-WA0008.jpg)
Chitradurga news|nammajana.com|26-12-2024
ನಮ್ಮಜನ.ಕಾಂ, ಚಿತ್ರದುರ್ಗ: ಖಾಸಗಿ ಶಾಲೆ ಆವರಣದಲ್ಲಿ ನಾಯಿ ಕಚ್ಚಿದ ಸ್ಥಿತಿಯಲ್ಲಿ ಅರ್ಧ ದೇಹವಿರುವ ಮಗುವಿನ ಶವ ಪತ್ತೆಯಾಗಿರುವ ಘಟನೆ ಚಿತ್ರದುರ್ಗ ನಗರದಲ್ಲಿ (Chitradurga) ನಡೆದಿದೆ.
ನಗರದ ಚಳ್ಳಕೆರೆ ಗೇಟ್ ಬಳಿಯ ಶಾಲೆ ಆವರಣದಲ್ಲಿ ಅರ್ಧ ದೇಹವಿರುವ ಶವ ಪತ್ತೆಯಾಗಿದೆ. ಹೊರವಲಯದಲ್ಲಿರುವ (Chitradurga) ಖಾಸಗಿ ಆಸ್ಪತ್ರೆ ಆವರಣದಿಂದ ನಾಯಿಗಳು ಶಿಶುವನ್ನು ಎಳೆದು ತಂದಿರುವ ಅನುಮಾನ ವ್ಯಕ್ತವಾಗಿದೆ.
![](https://nammajana.com/wp-content/uploads/2025/01/gifmaker_me-2.gif)
ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಶಿಶುವನ್ನು ಸರಿಯಾಗಿ ಅಂತ್ಯಕ್ರಿಯೆ ನಡೆಸದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರುವ ಸಾಧ್ಯತೆ ಇದೆ (Chitradurga)ಎಂದು ಪೊಲಿಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಲದ ಗುಂಡಿಗಿಳಿದ ಕಾರ್ಮಿಕ ಉಸಿರುಗಟ್ಟಿ ಸಾವು | Septic Tank
ಈ ಘಟನೆ ನಡೆದಿರುವ ಸ್ಥಳಕ್ಕೆ ಚಿತ್ರದುರ್ಗ DYSP ದಿನಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
![](https://nammajana.com/wp-content/uploads/2025/01/gifmaker_me-1.gif)