Chitradurga news|nammajana.com|28-12-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗದ ಬೃಹನ್ಮಠದ ಅನುಭವ ಮಂಟಪದಲ್ಲಿ ನಡೆಯಲಿರುವ ಅಖಿಲ ಭಾರತ (Sharan Sahitya) ಶರಣ ಸಾಹಿತ್ಯ ಪರಿಷತ್ತಿನ 13ನೇ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಸಿದ್ದರಾಮ ಬೆಲ್ದಾಳ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಸಿ. ಸೋಮಶೇಖರ್ ತಿಳಿಸಿದರು.
ನಗರದ ಬೃಹನ್ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ಸುತ್ತೂರಿನ ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳು ಡಾ. ಸಿದ್ದರಾಮ ಬೆಲ್ದಾಳ್‌ರವರ (Sharan Sahitya) ಆಯ್ಕೆಯನ್ನು ಪ್ರಕಟಿಸಿದ್ದಾರೆ.
ಧರ್ಮಾಂಧತೆ, ಕೋಮುಗಲಭೆ, ಭಯೋತ್ಪಾದನೆಗಳ ನಿರ್ಮೂಲನೆಗೆ ಆಸಕ್ತಿ ವಹಿಸಿ ಮಾನವೀಯ ಏಕತೆ ಉದ್ದೇಶದಿಂದ ಏಕತಾ ಪರಿಷತ್ತನ್ನು ಸ್ಥಾಪಿಸುವುದರ ಮೂಲಕ ಶರಣರು ಪ್ರತಿಪಾದಿಸಿದ ಸಮಾನತೆಯ ಸಮಾಜದ (Sharan Sahitya Parishad) ನಿರ್ಮಾಣದ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ನಿರ್ವಹಿಸುತ್ತ ಬಂದಿದ್ದಾರೆ.
ಔಪಚಾರಿಕ ಶಿಕ್ಷಣ ಹೆಚ್ಚು ಪಡೆಯದೇ ಇದ್ದರೂ ಆಧ್ಯಾ ತ್ರಿಕ ಶಿಕ್ಷಣದಲ್ಲಿ ಬಹುದೊಡ್ಡ ಸಾಧನೆ ಮಾಡಿರು ವವರು. ಶರಣ ಸಾಹಿತ್ಯಕ್ಕೆ ಸಂಬಂದಿಸಿದಂತೆ ಹಲವು ಮೌಲಿಕ ಕೃತಿಗಳನ್ನು ರಚಿಸುವ ಮೂಲಕ ಶರಣ ಸಾಹಿತ್ಯ ಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ.
ವಚನ ತತ್ವಸಾರ, ಇಷ್ಟಲಿಂಗಾರ್ಚನೆ ವಿಧಾನ, ಷಟ್ ಸ್ಥಳ ಸಂಪತ್ತು, ವಚನ ತತ್ವಾನುಭವ, ಬಸವ ತತ್ವ ಪ್ರದೀಪಿಕೆ, ಶಿವಯೋಗ ಸುಖ, ಶರಣರ ಬೆಡ ಗಿನ ಬೆಳಕು, ಚನ್ನಬಸವಣ್ಣನವರ ವಚನ ವ್ಯಾಖ್ಯಾನ, ಶೂನ್ಯ ಸಂಪಾದನೆಯ ರಹಸ್ಯದ ಬಗ್ಗೆ ಬೃಹತ್‌ಗ್ರಂಥ ರಚನೆ, ಅಕ್ಕಮಹಾದೇವಿ-ಯೋಗಾಂಗ ತ್ರಿವಿಧಿಯ ತವನಿಧಿ, ವಚನಗಳಲ್ಲಿ ಶಿವಯೋಗ, ಮುಂತಾದ ಅತ್ಯಂತ ಶ್ರೇಷ್ಠ ಕೃತಿಗಳನ್ನು ಶರಣ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ನುಡಿದರು.
ಇವರ ಸಾಹಿತ್ಯ ಮತ್ತು ಸಮಾಜ ಸೇವೆ ಗುರುತಿಸಿ ನಾಡಿನ ಅನೇಕ ಪ್ರತಿಷ್ಠಿತ ಸಂಸ್ಥೆಗಳು ಮತ್ತು ಸರ್ಕಾರ ಅವರಿಗೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.
ಚಿತ್ರದುರ್ಗ ಮಠದಿಂದ ನೀಡುವ ಬಸವ ಶ್ರೀ ಪ್ರಶಸ್ತಿ, ಕುಮಾರ ಕಕ್ಕಯ್ಯ ಪ್ರಶಸ್ತಿ, ಕಂಬಳೇ ಬಾಬಾ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಬೀದರ್‌ಜಿಲ್ಲಾ ಪ್ರಶಸ್ತಿ, ಅನುಭವ ಮಂಟಪ ಪ್ರಶಸ್ತಿ, ಕಾಯಕ ಪ್ರಶಸ್ತಿ, ಸುವರ್ಣ ಸಿರಿ. ಹಳಕಟ್ಟಿ ಪ್ರಶಸ್ತಿ, ಮೃತ್ಯುಂಜಯ ಪ್ರಶಸ್ತಿ, ಮುಂತಾದ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ ಅವರಿಗೆ ಕಲಬುರಗಿ ವಿಶ್ವವಿದ್ಯಾನಿಲಯವು (Sharan Sahitya Parishad) ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ ಎಂದು ಹೇಳಿದರು.
ಇದನ್ನೂ ಓದಿ: ವಿ ವಿ ಸಾಗರ ಭರ್ತಿಗೆ ಅರ್ಧ ಅಡಿ ಮಾತ್ರ ಬಾಕಿ | ಇಂದು 693 ಕ್ಯೂಸೆಕ್ಸ್ ನೀರು | Vani Vilasa Sagara Dam
ಚಿತ್ರದುರ್ಗ ಮುರುಘಾರಾಜೇಂದ್ರ ಬೃಹನ್ಮಠದ ಸದಸ್ಯರು ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯ ಗೌರವ ಸಲಹೆಗಾರರಾದ ಡಾ.ಬಸವಕುಮಾರ ಶ್ರೀಗಳು, ಗುರುಮಠಕಲ್ ಶಾಂತವೀರ (Sharan Sahitya) ಗುರು ಮುರುಘರಾಜೇಂದ್ರ ಮಹಾಸ್ವಾಮೀಜಿ, ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷರು ಹಾಗೂ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ಕೆ.ಎಂ.ವೀರೇಶ್, ಡಾ.ಹೊನ್ನ ಲಿಂಗಯ್ಯ, ಖಜಾಟಚಿ ಎಸ್.ಷಣ್ಮುಖಪ್ಪ, ಹಂಪಯ್ಯ ಸಾರಂಗಮಠ, ಅಪ್ಪರಾವ್ ಅಕ್ಕೂಣಿ ಷಡಾಕ್ಷರಯ್ಯ, ರುದ್ರಮುನಿ, ಗಣೇಶಯ್ಯ ಹಾಜರಿದ್ದರು.