Chitradurga news|nammajana.com|5-1-2025
ನಮ್ಮಜನ.ಕಾಂ, ಚಳ್ಳಕೆರೆ: ಗ್ರಾಮಪಂಚಾಯಿತಿ ಕೇಂದ್ರಗಳು ಜನಸ್ನೇಹಿ ಕೇಂದ್ರಗಳಾಗಿ ಕಾರ್ಯನಿರ್ವಹಿಸಬೇಕು, ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸಬೇಕು (Challakere) ಎಂದು ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಅವರು ಶನಿವಾರ ತಾಲ್ಲೂಕಿನ ನಗರಂಗೆರೆ ಗ್ರಾಮ ಪಂಚಾಯಿತಿಯ 65 ಲಕ್ಷ ವೆಚ್ಚದ ನೂತನ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣ, 65 ಲಕ್ಷ ವೆಚ್ಚದ ಎಸ್‌ಎಂಎಫ್ ಘಟಕ, ಲಕ್ಷ್ಮಿಪುರ ಗ್ರಾಮದಲ್ಲಿ ಮುಖ್ಯಮಂತ್ರಿಗಳ ಅನುದಾನದಡಿ 20 ಲಕ್ಷ ವೆಚ್ಚದ ಶ್ರೀಕೊಲ್ಲಾಪುರದಮ್ಮ ದೇವಸ್ಥಾನ, ಗ್ರಾಮದಲ್ಲಿ ಭೂಮಿ ಪೂಜೆ, 10 ಲಕ್ಷವೆಚ್ಚದಲ್ಲಿ ಹೆಚ್ಚುವರಿ ನೂತನ ಅರಿವು ಗ್ರಂಥಾಲಯ, ಸಿದ್ದಾಪುರ ಗ್ರಾಮದಲ್ಲಿ 10 ಲಕ್ಷವೆಚ್ಚದ (Challakere) ಈಶ್ವರದೇವಾಲಯದ ಭೂಮಿ ಪೂಜೆ ಕಾರ್ಯವನ್ನು ನೆರವೇರಿಸಿ ಮಾತನಾಡಿದರು.

ಗ್ರಾಮ ಪಂಚಾಯತಿಯ ಚುನಾಯಿತ ಸದಸ್ಯರು ಮತ್ತು ಅಧಿಕಾರಿ ವರ್ಗ ಪರಸ್ವರ ಚರ್ಚೆಯ ಮೂಲಕ ಗ್ರಾಮೀಣ ಭಾಗದ ಸಮಸ್ಯೆ ಹಾಗೂ ಅಭಿವೃದ್ದಿಯ ಬಗ್ಗೆ ಚಿಂತನೆ ನಡೆಸಬೇಕು. ಮಹಾತ್ಮಗಾಂಧೀಜಿಯವರ ಕನಸು ನನಸು ಮಾಡಲು ಗ್ರಾಮ ಸೇವೆಯಿಂದ ಮಾತ್ರ ಎಂಬ ಸತ್ಯವನ್ನು (Challakere) ನಿರೂಪಿಸುವಂತೆ ಕಾರ್ಯನಿರ್ವಹಿಸಿ ಎಂದು ಶಾಸಕರು ಸಲಹೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಮುಖ್ಯಮಂತ್ರಿಗಳ ಅನುದಾನ, ಸರ್ಕಾರ ಹಲವಾರು ಯೋಜನೆಗಳ ಮೂಲಕ ಹಣ ಬಿಡುಗಡೆ ಮಾಡಿದ್ದು ಅವುಗಳನ್ನು ಸೂಕ್ತ ರೀತಿಯಲ್ಲಿ ಜನರ ಹಿತಕ್ಕಾಗಿ ಬಳಸುವ ಕೆಲಸ ನಿರಂತರ ನಡೆಯಬೇಕು. ಯಾವುದೇ ಹಂತದಲ್ಲೂ ಸರ್ಕಾರದ ನಿಯಮಗಳನ್ನು ನಿರ್ಲಕ್ಷಿಸಬಾರದು. ಗ್ರಾಮ ಪಂಚಾಯಿತಿ ಆಡಳಿತ ಜನರ ಮೆಚ್ಚುಗೆ ಪಡೆಯುವ ಮಟ್ಟಿಗೆ ಎಲ್ಲರೂ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಬೇಕು, ನೀವು ನೀಡುವ ಸೇವೆಯಿಂದ ಜನರಲ್ಲಿ ಸಂತೃಪ್ತಿ ಭಾವನೆ (Challakere) ಉಂಟಾಗಬೇಕು ಎಂದರು.
ಇದನ್ನೂ ಓದಿ: ಜಿಲ್ಲೆಯ 3584 ರೈತರಿಗೆ ರೂ.2333.01 ಲಕ್ಷ ವಿಮಾ ಮೊತ್ತ ಬಿಡುಗಡೆ |Crop compensation
ಇಒ ಎಚ್.ಶಶಿಧರ, ನಿರ್ಮಿತಿಕೇಂದ್ರದ ಇಂಜಿನಿಯರ್ ಸಿದ್ದೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಾ, ಉಪಾಧ್ಯಕ್ಷ ಓಬಣ್ಣ, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಫೇಸ್ವಾಮಿ, ಕೆಡಿಪಿಸದಸ್ಯ ಅಂಗಡಿರಮೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಎನ್.ಮಂಜುನಾಥ, ಎಂ.ಕುಮಾರಸ್ವಾಮಿ, ಎಂ.ಹಿದಾಯಿತ್‌ವುಲ್ಲಾ, ಪಾತಲಿಂಗಪ್ಪ, ಷಣ್ಮುಖಪ್ಪ, ಬಿ.ಸಿ.ಸತೀಶ್‌ಕುಮಾರ್, ಪಿಡಿಒ (Challakere) ಎಂ.ರಾಮಚಂದ್ರಪ್ಪ, ಶಲ್ಯದ್ಯಾಮಣ್ಣ, ರವಿಕುಮಾರ್, ಮೈನಬಾಬು, ದೇವರಾಜ, ಕೆ.ವೀರಭದ್ರಪ್ಪ, ರಾಜಣ್ಣ, ದೊಣ್ಣಪ್ಪರೆಡ್ಡಿ ಮುಂತಾದವರು ಉಪಸ್ಥಿತರಿದ್ದರು
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252