
Chitradurga news|nammajana.com|16-1-2025
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಶಾಸಕ (Chitradurga MLA) ಕೆ.ಸಿ.ವೀರೇಂದ್ರ ಪಪ್ಪಿ ಕಾರು ಡಿಕ್ಕಿ ಹೊಡೆ ಪರಿಣಾಮ ಇಬ್ಬರು ಓಂಶಕ್ತಿ ಮಾಲಾಧಾರಿಗಳು ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಚಾಲಕನ ನಿರ್ಲಕ್ಷ್ಯ, ಅಜಾಗರೂಕತೆ ಚಾಲನೆ ಆರೋಪದಡಿ ಎಫ್ಐಆರ್ ದಾಖಲಾಗಿದೆ. ಅಪಘಾತಕ್ಕೀಡಾದ KA 55, P 0003 ಸಂಖ್ಯೆ ಬೆಂಜ್ ಕಾರನ್ನು ಜಪ್ತಿ ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೇಗೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ (Chitradurga MLA) ಘಟನೆ ನಡೆದಿದೆ. ಅಪಘಾತದ ದೃಶ್ಯ ಸಿಸಿಕ್ಯಾಮಾರದಲ್ಲಿ ಸೆರೆ ಆಗಿದೆ. ಬೆಳಿಗ್ಗೆ 9:25ರ ಸುಮಾರಿಗೆ ಒಟ್ಟು ಮೂರು ಕಾರುಗಳ ಮುಖಾಂತರ ಬೆಂಗಳೂರಿಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಮುಂದಿನ ಕಾರಿನಲ್ಲಿ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ತೆರಳುತ್ತಿದ್ದರು. KA 55, P 0003 ಸಂಖ್ಯೆ ಬೆಂಜ್ ಕಾರಿನಲ್ಲಿ ಪತ್ನಿ ಚೈತ್ರಾ ತೆರಳುತ್ತಿದ್ದರು. ಈ ವೇಳೆ ರಸ್ತೆ ದಾಟುತ್ತಿದ್ದ ಓಂ ಶಕ್ತಿ ಮಾಲಾಧಾರಿಗಳಿಗೆ ಬೆಂಜ್ ಕಾರು ಡಿಕ್ಕಿ ಹೊಡೆದಿದೆ. ಅಪಘಾತ ನಂತರ ವೀರೇಂದ್ರ ಪಪ್ಪಿ ಕಾರಿನಲ್ಲೇ ಪತ್ನಿ ಚೈತ್ರಾ ಬೆಂಗಳೂರಿಗೆ ತೆರಳಿದ್ದಾರೆ. ಬೆಂಜ್ ಕಾರಿನಲ್ಲೇ ಗಾಯಳುಗಳನ್ನು ಪಿಎ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಗಾಯಳು ಹೇಳುವುದೇನು?
ಗಾಯಳು ಬಿಂದು ಪ್ರತಿಕ್ರಿಯಿಸಿದ್ದು, ರಸ್ತೆ ದಾಟಲು ನಿಂತಿದ್ದ ವೇಳೆ ಏಕಾಏಕಿ ಕಾರು ಬಂದು ನಮ್ಮ ಅತ್ತೆ ಹಾಗೂ ನನಗೆ (Chitradurga MLA) ಡಿಕ್ಕಿಯಾಗಿದೆ. ಆಮೇಲೆ ನನಗೆ ಏನಾಯಿತು ಗೊತ್ತಿಲ್ಲ. ಅವರ ಕಾರಿನಲ್ಲೇ ನಮ್ಮನ್ನ ಆಸ್ಪತ್ರೆಗೆ ಕರಕೊಂಡು ಬಂದು ಚಿಕಿತ್ಸೆಗೆ ಸೇರಿಸಿದ್ದಾರೆ. ನನಗೆ ತಲೆ, ಕೈ, ಕಾಲು ಮತ್ತು ಮುಖಕ್ಕೆ ಗಾಯಗಳಾಗಿವೆ ಎಂದು ಹೇಳಿದ್ದಾರೆ.
