Chitradurga news|nammajana.com|05-02-2025
ನಮ್ಮಜನ.ಕಾಂ, ಚಿತ್ರದುರ್ಗ : ಗಂಡನ ಮೇಲಿನ ಸಿಟ್ಟಿಗೆ ಕ್ರೂರ ತಾಯಿಯೊಬ್ಬಳು ಏಳು ವರ್ಷದ ತನ್ನ ಮಗುವಿಗೆ ಬರೆ ಹಾಕಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದ್ದು. ಸ್ವಂತ ಮಗುವಿಗೆ (Child Torture) ಚಿತ್ರಹಿಂಸೆ ನೀಡಿ ತಾಯಿಯನ್ನು ಉಮ್ಮೇಸಲ್ಮಾ ಎಂದು ಗುರುತಿಸಲಾಗಿದೆ.
ಚಿತ್ರದುರ್ಗದ ಕವಾಡಿಗರಹಟ್ಟಿ ಆಶ್ರಯ ಬಡಾವಣೆಯಲ್ಲಿ ಘಟನೆ ನಡೆದಿದ್ದು. ಕಳೆದ 10ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಉಮ್ಮೇಸಲ್ಮಾ-ಅನಿಲ್ಗೆ ಒಬ್ಬ ಮಗನು ಇದ್ದನು. ಆದರೆ ಕಳೆದ ಎರಡು ವರ್ಷಗಳ ಹಿಂದೆ ತಲಾಖ್ ಪಡೆದು ಇಬ್ಬರು ದೂರ ಆಗಿದ್ದರು. ಆದರೆ ಮಗು ತನ್ನ (Child Torture) ತಂದೆಯೊಂದಿಗೆ ಮಾತನಾಡುವುದನ್ನು ಸಹಿಸದ ಕ್ರೂರ ತಾಯಿ ಮಗುವಿನ ಕೈ ಕಾಲುಗಳಿಗೆ ಬರೆ ಎಳೆದಿದ್ದಾಳೆ.
ಅಜ್ಜಿ ಮನೆಗೆ ಹೋಗದಂತೆ, ತಂದೆ ಜೊತೆ ಮಾತನಾಡದಂತೆ ಬಾಲಕನಿಗೆ ಕಿರುಕುಳ ನೀಡಿದ್ದು. ಮಗುವಿಗೆ ಊಟ ಕೊಡದೇ, ಮನೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಇದೀಗ ಸೊಸೆ ವಿರುದ್ದ ಮಗುವಿನ ಅಜ್ಜಿ ಶಮಶಾದ್ ಕೋಟೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮಗು ತಮಗೆ ಬೇಕು ಅಂತಾ ಪೊಲೀಸ್ ಠಾಣೆಯ ಮುಂದೆಯೇ ಎರಡೂ ಕುಟುಂಬಗಳ ವಾಗ್ವಾದ ಮಾಡಿವೆ. ಇನ್ನು ಮಗುವಿನ ಅಜ್ಜಿ ಶಮಶಾದ್ (Child Torture) ಮಾಧ್ಯಮದ ಮುಂದೆ ಮಗುವನ್ನು ತಮಗೆ ನೀಡಿ ಅಂಗಲಾಚಿ ಬೇಡಿಕೊಂಡಿದ್ದಾರೆ.
ಇದನ್ನೂ ಓದಿ: ಆರ್.ಬಿ.ಐ ಮಾರ್ಗಸೂಚಿ ಪಾಲನೆ ಕಡ್ಡಾಯ | Micro Finance ಸಂಸ್ಥೆ ಡಿಸಿ ಸೂಚನೆ
ಬಾಲಕನಿಗೆ ಮಕ್ಕಳ ರಕ್ಷಣಾ ಘಟಕದಲ್ಲಿ ಕೌನ್ಸಲಿಂಗ್ ನಡೆಸಿದ್ದು. ಕೌನ್ಸಲಿಂಗ್ ಬಳಿಕ ಮಗುವನ್ನ ಅಜ್ಜಿ ಬಳಿಗೆ ಕಳುಹಿಸಲಾಗಿದೆ. ಅಜ್ಜಿ ಶಮಶಾದ್ಗೆ ಕರವೆ ಹೋರಾಟಗಾರರು ಬೆಂಬಲ ನೀಡಿದ್ದಾರೆ ಎಂದು ತಿಳಿದು ಬಂದಿದೆ.