![](https://nammajana.com/wp-content/uploads/2025/02/IMG-20250203-WA0008.jpg)
Chitradurga news|nammajana.com|06-02-2025
ನಮ್ಮಜನ.ಕಾಂ, ಮೊಳಕಾಲ್ಮುರು: ನರೇಗಾ ಯೋಜನೆಯಲ್ಲಿ ಅತ್ಯುತ್ತಮ ಒಗ್ಗೂಡಿಸುವ ಜಿಲ್ಲಾ ಪ್ರಶಸ್ತಿಗೆ ಮೊಳಕಾಲ್ಮುರು (Forest Department) ಅರಣ್ಯ ಇಲಾಖೆ ಭಾಜನವಾಗಿದೆ.
2023-24ನೇ ಸಾಲಿನ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅನುಷ್ಠಾನದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಜಿಲ್ಲೆ ಹಾಗೂ ತಾಲೂಕು ಮತ್ತು ಗ್ರಾಮ ಪಂಚಾಯಿತಿಗಳ ಅನುಷ್ಠಾನ ಇಲಾಖೆಗಳನ್ನು ಗುರ್ತಿಸಿ ಈ ಪ್ರಶಸ್ತಿಯನ್ನು ನೀಡಿ (Forest Department) ಗೌರವಿಸಲಾಗುತ್ತದೆ.
![](https://nammajana.com/wp-content/uploads/2025/01/gifmaker_me-2.gif)
ಪ್ರತಿ ಪ್ರಶಸ್ತಿಗೆ ನಿಗದಿಪಡಿಸಲಾಗದ ಮಾನದಂಡಗಳಿಗೆ ಅನುಗುಣವಾಗಿ ಜಿಲ್ಲಾ ಪಂಚಾಯಿತಿಗಳು ಸಲ್ಲಿಸಿದ ಪ್ರಸ್ತಾವನೆಗಳನ್ನು ರಾಜ್ಯ ಮಟ್ಟದ ಆಯ್ಕೆ ಸಮಿತಿಯು ಮೌಲ್ಯಮಾಪನ ಮಾಡಿ ವಿವಿಧ ಪ್ರಶಸ್ತಿಗಳಿಗೆ ಆಯ್ಕೆಯಾದ ಅನುಷ್ಠಾನ ಇಲಾಖೆಗಳ ಪ್ರಶಸ್ತಿ ಪುರಸ್ಕೃತ ಪಟ್ಟಿಯನ್ನು ಪ್ರಕಟಿಸಲಾಗಿತ್ತು.
ಬೆಂಗಳೂರಿನ ವಸಂತ ನಗರದ ಡಾ. ಬಿಆರ್ ಅಂಬೇಡ್ಕರ್ ಮೆಮೋರಿಯಲ್ ಟ್ರಸ್ಟ್ ಅಂಬೇಡ್ಕರ್ ಭವನದಲ್ಲಿ ಬುಧವಾರ (Forest Department) ನಡೆದ ‘ನರೇಗಾ ಹಬ್ಬ 2025’ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಯಿತು.
ಜಿಲ್ಲೆಯಲ್ಲಿಯೇ ನರೇಗಾ ಯೋಜನೆಯಲ್ಲಿ ಉತ್ತಮ ಸಾಧನೆ ಮಾಡಿದ ಮೊಳಕಾಲ್ಮುರು ಅರಣ್ಯ ಇಲಾಖೆಗೆ ‘ಅತ್ಯುತ್ತಮ ಒಗ್ಗೂಡಿಸುವಿಕೆ ಜಿಲ್ಲಾ ಪ್ರಶಸ್ತಿಯನ್ನು ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕಾ ಖರ್ಗೆ ಹಾಗೂ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಜಿಲ್ಲಾ ಪಂಚಾಯಿತಿ ಸಿಇಒ ಪಂಚಾಯಿತಿ ಸಿಇಓ ಸೋಮಶೇಖರ್ ಅವರಿಂದ ಸಾಮಾಜಿಕ ಅರಣ್ಯ (Forest Department) ವಲಯದ ವಲಯ ಅರಣ್ಯಾಧಿಕಾರಿ ಬಾಬು ಎಸ್ ಪ್ರಶಸ್ತಿಯನ್ನು ಸ್ವೀಕರಿಸಿದರು.
ಮೊಳಕಾಲ್ಮೂರು ತಾಲೂಕು ಅರಣ್ಯ ಇಲಾಖೆ ಭಾಜನವಾಗಿದ್ದು ಅರಣ್ಯ ವಲಯ ಅರಣ್ಯಾಧಿಕಾರಿ ಸಾಮಾಜಿಕ ಅರಣ್ಯ ವಲಯದ ಬಾಬು ಎಸ್ ಪ್ರಶಸ್ತಿಯನ್ನು ಸ್ವೀಕರಿಸಿದರು.
![](https://nammajana.com/wp-content/uploads/2025/01/gifmaker_me-1.gif)