
Chitradurga news|nammajana.com|09-02-2025
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನ ಸೋಮಗುದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಜಿಗುಂಟೆ ಗ್ರಾಮದ ಗೋಮಾಳದಲ್ಲಿ ಅಲ್ಲಿನ ಹರಿಜನ ನಿವಾಸಿಗಳು ನಮಗೆ ಯಾವುದೇ ಮನೆ ಹಾಗೂ ನಿವೇಶನವಿಲ್ಲದ ಕಾರಣ ಗ್ರಾಮದ ಗೋಮಾಳದಲ್ಲಿ ಮನೆಗಳ (Challakere) ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕೆಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರನ್ನು ಶಾಸಕರ ಭವನದಲ್ಲಿ ಭೇಟಿ ಮಾಡಿ ಮನವಿ ಅರ್ಪಿಸಿದರು.
ಮುಖಂಡರಾದ ಕರಿಬಸಪ್ಪ, ಮಲ್ಲಿಕಾರ್ಜುನ್, ನಿಂಗಪ್ಪ, ಓಂಕಾರಪ್ಪ, ಆರ್.ವೀರಭದ್ರಪ್ಪ ಮುಂತಾದವರು ಮಾತನಾಡಿ, ಕಳೆದ ಹಲವಾರು ದಶಕಗಳಿಂದ ಗಂಜಿಗುಂಟೆ ಗ್ರಾಮದ ಹರಿಜನ ಕುಟುಂಬಗಳು ನಿವೇಶನ, ಮನೆ ಇಲ್ಲದೆ ಪ್ರತಿನಿತ್ಯ ಪರದಾಡುತ್ತಿದ್ದಾರೆ.

ಸರ್ಕಾರಿ ಗೋಮಾಳವಿದ್ದು ಅಲ್ಲಿಯಾದರೂ ಗುಡಿಸಲು ಹಾಕಿಕೊಂಡು ಜೀವನ ನಡೆಸಬಹುದಾಗಿದೆ. ಆದರೆ, ಇದಕ್ಕೆ ಅವಕಾಶ ನೀಡುತ್ತಿಲ್ಲವೆಂದು ಅಸಮದಾನ ವ್ಯಕ್ತಪಡಿಸಿದರು.
ದಲಿತ ಸಮಾಜದ ಬಂಧುಗಳಿಂದ ಮನವಿ ಆಲಿಸಿದ ಶಾಸಕ ರಘುಮೂರ್ತಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ (Challakere) ನಿಟ್ಟಿನಲ್ಲಿ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ತಹಶೀಲ್ಧಾರ್ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯನ್ನು ಕರೆಸಿ ಅವರಿಗೂ ಸಹ ಅಲ್ಲಿ ಯಾವುದೇ ಗುಡಿಸಲು ಮನೆ ಇಲ್ಲದೆ ಇರುವ ದಲಿತ ಕುಟುಂಬಗಳನ್ನು ಪತ್ತೆಹಚ್ಚಿ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ: Dina Bhavishya | ದಿನ ಭವಿಷ್ಯ | 09-02-2025
ಸಮಸ್ಯೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸಿದ್ದಕ್ಕೆ ಗಂಜಿಗುಂಟೆ ಹರಿಜನ ಕುಟುಂಬದವರು ಶಾಸಕರಿಗೆ ಅಭಿನಂದನೆ (Challakere) ಸಲ್ಲಿಸಿದ್ಧಾರೆ. ಸರ್ಕಾರ ಕೂಡಲೇ ಗ್ರಾಮದಲ್ಲಿ ಹಾಲಿವಾಸವಿರುವ ಯಾವುದೇ ನಿವೇಶನ, ಮನೆ ಇಲ್ಲದವರಿಗೆ ಪತ್ತೆಮಾಡಿ ಆದಷ್ಟುಬೇಗ ವರದಿ ನೀಡುವಂತೆ ಸದಸ್ಯರುಮನವಿ ಮಾಡಿದ್ಧಾರೆ.
