
Chitradurga news|nammajana.com|11-02-2025
ನಮ್ಮಜನ.ಕಾಂ, ಚಳ್ಳಕೆರೆ: ಪರಶುರಾಂಪುರ ಹೋಬಳಿ ಕೇಂದ್ರವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಲು (Parashurampur) ಸೋಮವಾರ ರೈತರ ಬೃಹತ್ ಚಳುವಳಿ ನಡೆಯಿತು.
ಈ ಮೊದಲು ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಜೊತೆಗೂಡಿ ಮುಖ್ಯ ವೃತ್ತದಿಂದ ಗ್ರಾಮದ ಕೊಲ್ಲಾಪುರದಮ್ಮ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಪ್ರಮುಖ ಬೀದಿಗಳಲ್ಲಿ ತಾಲ್ಲೂಕು ಕೇಂದ್ರವನ್ನಾಗಿ ಮಾಡಲು ಮೆರವಣಿಗೆಯಲ್ಲಿ ಘೋಷಣೆಗಳ ಜತೆಗೆ ವೇದಿಕೆಯ ಕಾರ್ಯಕ್ರಮದಲ್ಲಿ ಶಾಸಕ ಟಿ.ರಘುಮೂರ್ತಿಗೆ ಮನವಿ ಸಲ್ಲಿಸಿದರು.

ವೇದಿಕೆಯಲ್ಲಿ ಕ.ರಾ.ರೈತ ಸಂಘದ ಮಾಜಿ ಅಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಮಾತನಾಡಿ, ಪರಶುರಾಂಪುರ ಹೋಬಳಿಯನ್ನ ತಾಲ್ಲೂಕು ಮಾಡಬೇಕು ಎಂಬ ಹೋರಾಟ ಬಹಳ ವರ್ಷಗಳಿಂದ ಇದೆ. ಅದರಂತೆ ಕಳೆದ ಚುನಾವಣೆಗೂ ಮುನ್ನ ಹೇಳಿದಂತೆ ಶಾಸಕರು ಹೋಬಳಿಯನ್ನು ತಾಲ್ಲೂಕು ಘೋಷಣೆ ಮಾಡುವಂತೆ ಅಧಿವೇಶನದಲ್ಲಿ ಈಗಾಗಲೇ ಮಾತನಾಡಿದ್ದಾರೆ ಜತೆ ಜಲ ಕ್ರಾಂತಿ ನಡುವೆ ಹಲವು ಅಭಿವೃದ್ಧಿ ಮಾಡುತ್ತಿದ್ದಾರೆ ಇಂತವರನ್ನು ಕಳೆದುಕೊಳ್ಳಬಾರದು ಹಾಗೂ ರೈತ ಸಂಘವನ್ನ ಕಷ್ಟಪಟ್ಟು ಬೆಳೆಸಿದ್ದೇನೆ ಇಲ್ಲಿ ತಾಲ್ಲೂಕಿಗಾಗಿ ಹೋರಾಟವಿದೆ ಎಂಬ ಮಾತ್ರ ಕೇಳಿಬರುತ್ತಿದೆ ಆಗಾಗಿ ತಾಲ್ಲೂಕು ಕೇಂದ್ರವನ್ನಾಗಿ ಮಾಡಲು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಶಾಸಕ ಟಿ.ರಘುಮೂರ್ತಿ ಮಾತನಾಡಿ, ನಾನು ಶಾಸಕನಾಗುವುದಕ್ಕಿಂತಲೂ ಮೊದಲಿಂದ ಪರಶುರಾಂಪುರ ತಾಲ್ಲೂಕು ಘೋಷಣೆ ಮಾಡುವ ಬೇಡಿಕೆ ಇದೆ. ಕ್ಷೇತ್ರದಲ್ಲಿ ಮತದಾರರು ಮೂರು ಬಾರಿ ಶಾಸಕನಾಗಿ ನನ್ನನ್ನು ಆಯ್ಕೆ ಮಾಡಿದ್ದೀರಿ. ಕಳೆದ 2023 ರ ಚುನಾವಣೆಯ ಪೂರ್ವದಲ್ಲಿ ಶಾಸಕನಾಗಿ ಆಯ್ಕೆಯಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದರೆ ಹೋಬಳಿಯನ್ನು ತಾಲ್ಲೂಕು ಕೇಂದ್ರವನ್ನಾಗಿ (T. Raghumurthy) ರೂಪಿಸಲು ಶ್ರಮಿಸುವೆ ಇಲ್ಲವಾದರೆ 2028 ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಅಂತ ಹೇಳಿದ್ದೆ. ತಾಲ್ಲೂಕು ಘೋಷಣೆಗೆ ಈಗಾಗಲೇ ಅಧಿವೇಶನದಲ್ಲಿ ಮಾತನಾಡಿದ್ದೇನೆ ಅದರಂತೆ (Parashurampur) ಮುಖ್ಯ ಮಂತ್ರಿ ಹಾಗೂ ಕಂದಾಯ ಸಚಿವರು ತಾಲ್ಲೂಕು ರಚನೆ ವೇಳೆಯಲ್ಲಿ ಘೋಷಣೆ ಮಾಡುವ ಭರವಸೆ ನೀಡಿದ್ದಾರೆ.
ಅದರಂತೆ ತಾವುಗಳು ಇನ್ನೂ ಎರಡ್ಮೂರು ವರ್ಷಗಳ ಕಾಲಾವಕಾಶ ಇದೆ. ಹಾಗಾಗಿ ನಮ್ಮ ಮೇಲೆ ಭರವಸೆ ಇಟ್ಟುಕೊಳ್ಳಿ ಇಲ್ಲವಾದಲ್ಲಿ, ಸಮಯ ಸಂದರ್ಭ ನೋಡಿ ನಿಮ್ಮಲ್ಲಿ ನಾನು ಒಬ್ಬನಾಗುತ್ತೇನೆ ಎಂದರು.
ತಾಲ್ಲೂಕು ಘೋಷಣೆಗೆ ಬೇಕಾಗುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಎಲ್ಲಾ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಹೋಬಳಿ ಕೇಂದ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಸಾರ್ವಜನಿಕರು ಸಹಕರಿಸಬೇಕು ಎಂದರು.
ಈ ವೇಳೆಯಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ನಾಗರಾಜ ಮಾತನಾಡಿ, ಈಗಾಗಲೇ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅದರಲ್ಲಿ ಅತಿ ದೊಡ್ಡ ಹೋಬಳಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ್ದು, ಸಾಮಾಜಿಕ, ಆರ್ಥಿಕ ಶೈಕ್ಷಣಿಕ, ಭೌಗೋಳಿಕ (Parashurampur) ಸೌಲಭ್ಯವನ್ನು ಹೊಂದಿದ್ದು, ಗಡಿಭಾಗದ ಪರಶುರಾಂಪುರವನ್ನು ತಾಲ್ಲೂಕು ಘೋಷಣೆ ಮಾಡುವಂತೆ ಮನವಿ ಮಾಡಿದರು.
ಸಂದರ್ಭದಲ್ಲಿ ರೈತ ಸಂಘದ ಸೋಮಗುದ್ದು ರಂಗಸ್ವಾಮಿ, ತಾಲೂಕು ಅಧ್ಯಕ್ಷ ನಾಗರಾಜ, ಹೋಬಳಿ ಅಧ್ಯಕ್ಷ ಕೃಷ್ಣಮೂರ್ತಿ, ತಾಲ್ಲೂಕು ಮಾಜಿ ಅಧ್ಯಕ್ಷ ಪರಶುರಾಮಣ್ಣ, ಜಿಲ್ಲಾ ಉಪಾಧ್ಯಕ್ಷ ವೆಂಕಟರಮಣಪ್ಪ, ಗೌರವಾಧ್ಯಕ್ಷ ಕೃಷ್ಣ ಮೂರ್ತಿ, ಪತ್ರಕರ್ತ ಮಾಲತೇಶ ಅರಸ್, ಹಿರಿಯೂರು ತಾಲ್ಲೂಕಿನ ಅಧ್ಯಕ್ಷ ಪುಟ್ಟಲಿಂಗಪ್ಪ, ಗ್ಯಾರಂಟಿಯ ತಾಲ್ಲೂಕು ಅಧ್ಯಕ್ಷ ತಿಪ್ಪೇಸ್ವಾಮಿ, ಸದಸ್ಯ ಚೌಳೂರು ಟಿ.ಬಸವರಾಜು, ಜಿಲ್ಲಾ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಚೆನ್ನಕೇಶವ, ಸದಸ್ಯ ಅನಿಲ್ ಕುಮಾರ್, ಗ್ರಾಪಂ ಅಧ್ಯಕ್ಷ ರುದ್ರೇಶ್, ಜಗಲೂರು ಸ್ವಾಮಿ, ಪ್ರಸನ್ನ ಕುಮಾರ್, ನಾಗಭೂಷಣ, ಕೃಷ್ಣಪ್ಪ, ನಿಜಲಿಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್, ಸುಧಾಕರ್ ಸೇರಿದಂತೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಹಿರಿಯರು, ಮುಖಂಡರು, ಗ್ರಾಮಸ್ಥರು ಹಾಗೂ ಹೋಬಳಿ ವ್ಯಾಪ್ತಿಯ ರೈತರು ಸಾರ್ವಜನಿಕರು ಉಪಸ್ಥಿತರಿದ್ದರು.
ಇದನ್ನೂ ಓದಿ: Dina Bhavishya | ದಿನ ಭವಿಷ್ಯ 11-02-2025
ಅಭಿವೃದ್ಧಿಗೆ ನಿಮ್ನೆಲ್ಲರ ಸಹಕಾರವಿರಲಿ: ಟಿ.ರಘುಮೂರ್ತಿ (T. Raghumurthy)
ತಾಲ್ಲೂಕು ಘೋಷಣೆಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಜತೆ ಅಭಿವೃದ್ಧಿ ಕಾರ್ಯಗಳನ್ನ ಮಾಡಲು ಸಾರ್ವಜನಿಕರು ಸಹಕರಿಸಬೇಕು. ಪರಶುರಾಂಪುರದಲ್ಲಿ ಈಗಾಗಲೇ ಮುಖ್ಯ ವೃತ್ತದಿಂದ ವಿವಿಧ ಪ್ರಮುಖ ರಸ್ತೆಗಳನ್ನ ಅಗಲೀಕರಣ ಕಾಮಗಾರಿ ಕೈಗೊಳ್ಳಲು ಸಿದ್ದತೆಗಳು ಆಗುತ್ತಿವೆ. ತಾಲ್ಲೂಕು ಹಂತದಲ್ಲಿ ಇರುವಂತೆ ಶಾಲಾ ಕಾಲೇಜು ಕಟ್ಟಡ ಜತೆ ಹೊಸ ರೂಪ ನೀಡುವ ಮೂಲಕ (Parashurampur) ತಾಲ್ಲೂಕು ಮಟ್ಟದ ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಪಡಿಸಲಾಗುವುದು ಎಂದರು.
