Chitradurga news|nammajana.com|18-02-2025
ನಮ್ಮಜನ.ಕಾಂ, ಚಳ್ಳಕೆರೆ: ಪ್ರಸ್ತುತ ಯುವಕ, ಯುವತಿಯರಲ್ಲಿ ತಾಳ್ಮೆಯ ಗುಣ ಕಡಿಮೆಯಾಗುತ್ತಿದ್ದು, ಕೆಲ ವೊಮ್ಮೆ ತಾಳ್ಮೆ (suicide)ಮಿತಿಮೀರಿ ತಂದೆ, ತಾಯಿ ಎಲ್ಲರನ್ನೂ ಮರೆತು ಸಾವಿನತ್ತ ಹೆಜ್ಜೆ ಹಾಕುವ ಘಟನೆ ಗಳು ನಡೆಯುತ್ತಿ ದ್ದು, ಇಂತಹ ಘಟ ನೆ ಚಳ್ಳಕೆರೆ ನಗರದ ಹಳೇ ಟೌನಲ್ಲಿ ನಡೆದಿದೆ.
ವೀರಭದ್ರಸ್ವಾಮಿ ದೇವಸ್ಥಾನದ ಬಳಿ ವಾಸವಿರುವ ಲತಾ ಎಂಬುವವರ ಪುತ್ರ ಮಣಿಕಂಠ (21) ಇಲ್ಲಿನ ಎಸ್.ಆರ್.ರಸ್ತೆ ಯುವತಿಯೊಂದಿಗೆ ನಿಶ್ಚಿತಾರ್ಥವಾಗಿದ್ದು, ಮದುವೆ (suicide) ಸಮಯದಲ್ಲಿ ಯುವತಿ ತಾಯಿ ಆಕಸ್ಮಿವಾಗಿ ತೀರಿಕೊಂಡ ಮದುವೆಯನ್ನು ಮುಂದೂಡಲಾಗಿತ್ತು. 3 ಹಿನ್ನೆಲೆ ತಿಂಗಳು ಮದುವೆ

ಮುಂದೂಡಿದ ಬಗ್ಗೆ ಬೇಸರದಿಂದ ಇದ್ದ ಮಣಿಕಂಠ ಫೆ.16ರಂದು ಭಾನುವಾರ ಮಧ್ಯಾಹ್ನ ಸುಮಾರು 2.30ರ ಸಮಯಲ್ಲಿ ಹೋಟೆಲ್‌ನಿಂದ ಊಟ ತಂದು ಊಟಮಾಡದೆ ಹಾಗೇ ಇಟ್ಟಿದ್ದ.
ಇದನ್ನೂ ಓದಿ: ಫಲಪುಷ್ಪ ಪ್ರದರ್ಶನ ರೈತರ ಬೆಳವಣಿಗೆಗೆ ಸಾಕಷ್ಟು ಸಹಕಾರಿ: ಟಿ.ರಘುಮೂರ್ತಿ | Fruit and flower display
ತಾಯಿ ಮಗನ ಬಳಿ ಪೋಲಿಸ್ ಬಳಿ ಹೇಳಿದ್ದಿಷ್ಟು
ಮಣಿಕಂಠನ ತಾಯಿ ಲತಾ ಹಾಗೂ ಸಹೋದರಿ ಪೂಜಾ ತಮಿಳುನಾಡಿಗೆ ಹೋಗಿದ್ದು, ಮನೆಯಲ್ಲಿ ಒಬ್ಬನೇ ಇದ್ದ ಮಣಿಕಂಠ ಮದುವೆ ಮುಂದೂಡಿದ್ದಕ್ಕೆ ಬೇಸರಗೊಂಡು ರೂಂ ನಲ್ಲಿದ್ದ ಫ್ಯಾನ್‌ಗೆ ಸೀರೆಯಿಂದ ನೇಣು ಹಾಕಿಕೊಂಡು (suicide) ಮೃತಪಟ್ಟಿದ್ದಾನೆ.ವಿಷಯ ತಿಳಿದ ಲತಾ ಮತ್ತು ಪೂಜೆ ಚಳ್ಳಕೆರೆಗೆ ದಾವಿಸಿ ಪೊಲೀಸರಿಗೆ ದೂರು ನೀಡಿ, ಮಗನು ಮದುವೆ ಮುಂದೂಡಿದ ವಿಚಾರಕ್ಕೆ ನೊಂದು ನೇಣು ಹಾಕಿಕೊಂಡಿದ್ದು ಯಾವುದೇ ಅನುಮಾನವಿಲ್ಲ ಎಂದು ದೂರು ನೀಡಿದ್ದಾರೆ. ಎಎಸ್‌ಐ ಗೋವಿಂದರಾಜು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252