
Chitradurga news|nammajana.com|23-02-2025
ನಮ್ಮಜನ.ಕಾಂ, ಚಿತ್ರದುರ್ಗ: ಕರ್ನಾಟಕ ಲೋಕಾಯುಕ್ತ ಚಿತ್ರದುರ್ಗ ವಿಭಾಗದ ಅಧಿಕಾರಿಗಳು ಜಿಲ್ಲೆಯ ಎಲ್ಲ (Lokayukta) ತಾಲ್ಲೂಕುಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ದೂರು ಅಹವಾಲುಗಳನ್ನು ಸ್ವೀಕರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಲೋಕಾಯುಕ್ತ ಪೊಲೀಸ್ ನಿರೀಕ್ಷಕರು-1 ಫೆ.24 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 01.30 ರವರೆಗೆ ಮೊಳಕಾಲ್ಮೂರು ಪಟ್ಟನ ಪಂಚಾಯಿತಿ ಕಚೇರಿಯಲ್ಲಿ ಹಾಗೂ ಅದೇ ದಿನ ಮಧ್ಯಾಹ್ನ 2.30 ರಿಂದ ಸಂಜೆ 05.30 ರವರೆಗೆ ಚಳ್ಳಕೆರೆ (Lokayukta) ನಗರಸಭೆ ಕಚೇರಿಯಲ್ಲಿ ಉಪಸ್ಥಿತರಿದ್ದು, ಸಾರ್ವಜನಿಕರಿಂದ ದೂರು, ಅಹವಾಲುಗಳನ್ನು ನಿಗದಿತ ಅರ್ಜಿ ನಮೂನೆಯಲ್ಲಿ ಸ್ವೀಕರಿಸುವರು.

ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು
ಫೆ.25ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 01.30 ರವರೆಗೆ ಹೊಸದುರ್ಗ ಪುರಸಭೆ, ಮಧ್ಯಾಹ್ನ 2.30 ರಿಂದ ಸಂಜೆ 05.30 ರವರೆಗೆ ಹೊಳಲ್ಕೆರೆ ಪುರಸಭೆ ಕಚೇರಿಯಲ್ಲಿ ಉಪಸ್ಥಿತರಿರುವರು. ಪೊಲೀಸ್ ನಿರೀಕ್ಷಕರು-2 ಅದೇ ದಿನ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 01.30 ರವರೆಗೆ ಚಿತ್ರದುರ್ಗ ನಗರಸಭೆ ಕಚೇರಿಯಲ್ಲಿ ಉಪಸ್ಥಿತರಿರುವರು. ಪೊಲೀಸ್ ನಿರೀಕ್ಷಕರು-3 ಅದೇ ದಿನ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30ರವರೆಗೆ ಹಿರಿಯೂರು ನಗರಸಭೆಯಲ್ಲಿ ಹಾಜರಿದ್ದು, (Lokayukta) ಸಾರ್ವಜನಿಕರಿಂದ ದೂರು, ಅಹವಾಲುಗಳನ್ನು ಸ್ವೀಕರಿಸುವರು.
ಇದನ್ನೂ ಓದಿ: ದಿನ ಭವಿಷ್ಯ , ಯಾವ್ಯಾವ ರಾಶಿಗೆ ಉದ್ಯೋಗ, ವಿವಾಹ ಯೋಗ? | Dina Bhavishya
ಸಾರ್ವಜನಿಕರು ತಮ್ಮ ದೂರು, ಅಹವಾಲುಗಳನ್ನು ನಿಗದಿತ ನಮೂನೆ 01 ಮತ್ತು 02ರಲ್ಲಿ ಸಲ್ಲಿಸಬಹುದಾಗಿದೆ ಎಂದು (Lokayukta) ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎನ್.ವಾಸುದೇವರಾಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
