
Chitradurga news|nammajana.com|05-03-2025
ನಮ್ಮಜನ.ಕಾಂ, ಚಳ್ಳಕೆರೆ: ಪುಣ್ಯಕ್ಷೇತ್ರ ನಾಯಕನಹಟ್ಟಿಯ ಶ್ರೀತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಮಾರ್ಚ್ ೧೬ರ ಭಾನುವಾರ ನಡೆಯಲಿದ್ದು, ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿಗಳ (Nayakanahatty) ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಿ ಜಾತ್ರೆಯ ಸಿದ್ದತೆಗಳ ಬಗ್ಗೆ ಜಿಲ್ಲಾಡಳಿತ ಕಾಯೋನ್ಮುಖವಾಗಿದೆ.
ಪ್ರತಿವರ್ಷದಂತೆ ಈ ವರ್ಷವೂ ಜಾತ್ರೆ ಹಿನ್ನೆಲೆಯಲ್ಲಿ ಶ್ರೀಸ್ವಾಮಿಯ ಹುಂಡಿ ಹಣವನ್ನು ಎಣಿಕೆ ಮಾಡುವುದು ಪದ್ದತಿಯಾಗಿದ್ದು, ಅದರಂತೆ ಮಂಗಳವಾರ ಶ್ರೀಸ್ವಾಮಿಯ ಒಳ, ಹೊರಮಠ ಹಾಗೂ ದಾಸೋಹ ಭವನದಲ್ಲಿ ಸಂಗ್ರಹವಾದ (Nayakanahatty) ಹುಂಡಿ ಹಣ ಏಣಿಕೆ ಕಾರ್ಯ ಯಶಸ್ವಿಯಾಗಿ ನಡೆಯಿತು.

ಹುಂಡಿ ಎಣಿಕೆ ವಿವರ (Nayakanahatty)
ದಾಸೋಹ ಭವನದಲ್ಲಿ 8,93,990ಬರೂ
ಒಳಮಠದಲ್ಲಿ 26,71,990 ರೂ
ಹೊರಮಠದಲ್ಲಿ 8,33,510 ರೂ
ಒಟ್ಟು 43,99,400 ರೂ
ಹಣ ಸಂಗ್ರವಾಗಿದೆ ಎಂದು ದೇವಸ್ಥಾನದ ಆಡಳಿತಮಂಡಳಿ ತಿಳಿಸಿದೆ.
