Chitradurga news|nammajana.com|08-03-2025
ನಮ್ಮಜನ.ಕಾಂ, ಮೊಳಕಾಲ್ಮೂರು: ಎತ್ತಿನ ಗಾಡಿ ಓಟದ ಸ್ಪರ್ಧೆ ಗ್ರಾಮೀಣ ಪ್ರದೇಶದ ಸಾಂಸ್ಕೃತಿಕ ನೆಲಗಟ್ಟಿಗೆ ಹೊಸ ಸ್ಪರ್ಶ (Challakere) ನೀಡಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಏನ್. ರಘುಮೂರ್ತಿ ಹೇಳಿದರು.
ಇಂದು ಹಿರೇಹಳ್ಳಿ ಗ್ರಾಮದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಹಿರೇಹಳ್ಳಿ ಗ್ರಾಮದ ಯುವಕರು ಆಯೋಜಿಸಿದ್ದ ಜೋಡಿ ಎತ್ತಿನ ಗಾಡಿಯ ಬರದೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕರುನಾಡಿನಲ್ಲಿ ಇಂದಿಗೂ ಕೂಡ ಜಾನಪದ ಸೊಗಡಿನ ಇಂತಹ ಸ್ಪರ್ಧೆಗಳು ಬಹುತೇಕ ಪ್ರದೇಶದಲ್ಲಿವೆ ಈ ಸ್ಪರ್ಧೆಗಳು ಆ ಪ್ರದೇಶಗಳ ಸಾಮರಸ್ಯ ಮತ್ತು ಭಾವನಾತ್ಮಕ ಸಂಬಂಧಗಳನ್ನು ಬಿಗಿಗೊಳಿಸುತ್ತವೆ ಇಲ್ಲಿನ ಯುವಕರಿಗೆ ಈ ಸ್ಪರ್ಧೆಗಳು ಹೇಳಿ ಮಾಡಿಸಿದಂತಿವೆ.
ಈ ಸ್ಪರ್ಧೆಯಿಂದ ಉತ್ತಮ ರಾಸುಗಳನ್ನು ಸಾಕಾಣಿಕೆ ಮಾಡಲು ರೈತರಿಗೆ ಪೈಪೋಟಿ ನೀಡಿದಂತಾಗಿ ಲಾಭದಾಯಕ ಸನ್ನಿವೇಶ ಸೃಷ್ಟಿಯಾಗುತ್ತದೆ ಹಾಗೂ ಈ ಸ್ಪರ್ಧೆಗಳು ಆರೋಗ್ಯಕರವಾಗಿರಬೇಕು ಸೋಲು ಗೆಲುವುಗಳನ್ನು ಸಮ ಚಿತ್ರದಿಂದ ನೋಡಬೇಕು.ಜಾನುವಾರುಗಳನ್ನು ಯಾವುದೇ ಕಾರಣಕ್ಕೂ ಹಿಂಸಿಸಬಾರದು ಎಂದು ಕರೆ ನೀಡಿದರು. (Challakere)
ಇದನ್ನೂ ಓದಿ: Doctor Jairam | ಹಣವಿಲ್ಲದೇ ಬಂದ ಬಡವರ ಸಂಜೀವಿನಿ ಡಾಕ್ಟರ್ ಜೈರಾಮ್ ಇನ್ನಿಲ್ಲ
ಇದೇ ಸಂದರ್ಭದಲ್ಲಿ ಜ್ಞಾನೇಶು ಮಂಜಣ್ಣ ಚಂದ್ರು ಮಹಾಂತೇಶ ಪಿ ನಾಗರಾಜು ಮಂಜಮ್ಮ ನಟರಾಜು, ಸ್ವಾಮಿ, ಶಂಕರ್ ಮೂರ್ತಿ, ಮದಕರಿ ವಿದ್ಯಾ ಸಂಸ್ಥೆಯ ಸಂದೀಪ್ ಮುಂತಾದವರು ಉಪಸ್ಥಿತರಿದ್ದರು
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252