
Chitradurga news|nammajana.com|22-03-2025
ನಮ್ಮಜನ.ಕಾಂ, ಚಿತ್ರದುರ್ಗ: ಜಿಲ್ಲಾದ್ಯಂತ ಇಸ್ಪೀಟು ಜೂಜಾಟಗಳನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಚಟುವಟಿಕೆಯಲ್ಲಿರುವ 22 ಕ್ಲಬ್‌ಗಳ ಮೇಲೆ (Chitraduga clubs) ಆಯಾ ಠಾಣಾ ವ್ಯಾಪ್ತಿಯ ಪೊಲೀಸರು ಬುಧವಾರ ದಾಳಿ ನಡೆಸಿ 96,780 ರೂ. ನಗದು ವಶ ಮತ್ತು ಅಕ್ರಮವಾಗಿ ಜೂಜಾಟ ಆಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಚಿತ್ರದುರ್ಗದ ದುರ್ಗದ ಸಿರಿ ರಿಕ್ರಿಯೇಷನ್ ಇನ್ಸಿಟ್ಯೂಟ್, ಸಿಟಿ ಇನ್ಸಿಟ್ಯೂಟ್ ಕ್ಲಬ್, ಕೋಟೆ ಠಾಣಾ ವ್ಯಾಪ್ತಿಯ ಫೋರ್ಟ್ ಸಿಟಿ ರಿಕ್ರಿಯೇಷನ್ ಕ್ಲಬ್, ಜೆ.ಎಂ.ಐ.ಟಿ ಸರ್ಕಲ್ ಬಳಿಯ ಹೋಟೆಲ್ ಬಿಗ್ ಬಾಸ್ ಕ್ಲಬ್, ಬಡಾವಣೆ ಠಾಣೆ ವ್ಯಾಪ್ತಿಯ ಪವರ್ (Chitraduga clubs) ರಿಕ್ರಿಯೇಷನ್ ಕ್ಲಬ್, ಹೊಳಲ್ಕೆರೆ ಠಾಣಾ ವ್ಯಾಪ್ತಿಯ ಕರ್ನಾಟಕ ಫ್ಯಾಮಿಲಿ ಅಸೋಸಿಯೇಷನ್ ಮನೋರಂಜನಾ ಕೇಂದ್ರ, ಅರೇಹಳ್ಳಿಯ ಗಾಡ್ ಗಿಪ್ಟ್ ರಿಕ್ರಿಯೇಷನ್ ಮನೋರಂಜನಾ ಕೇಂದ್ರ, ಚಿಕ್ಕಜಾಜೂರು ಕ್ರಾಸ್‌ನ ಫ್ರೆಂಡ್ಸ್ ಕ್ರೀಡಾ ಮತ್ತು ಮನೋರಂಜನಾ ಕೇಂದ್ರ, ಚಳ್ಳಕೆರೆ ಟೌನ್ ಆಸೋಸಿಯೇಷನ್ ಕ್ಲಬ್, ನಾಯಕನಹಟ್ಟಿ ಆಸೋಸಿಯೇಷನ್ ಕ್ಲಬ್, ಚಳ್ಳಕೆರೆ ನಿವೃತ್ತ ನೌಕರರ ಮನೋರಂಜನ ಕ್ಲಬ್, ಚಳ್ಳಕೆರೆ ಹಿರಿಯ ನಾಗರೀಕರ ಮನೋರಂಜನಾ ಕ್ಲಬ್, ಚಳ್ಳಕೆರೆ ಟೌನ್ ಕ್ಲಬ್, ಮೊಳಕಾಲ್ಮುರು ಸಾಂಸ್ಕೃತಿಕ ಸಂಘ ಕ್ಲಬ್ ಮತ್ತು ವಾಚನಾಲಯ, ಸರಕಾರ ನೌಕರರ ಫ್ರೆಂಡ್ಸ್ ಮನೋರಂಜನಾ ಕೇಂದ್ರ, ರಾಂಪುರದ ನೌಕರರ ವಾಚನಾಲಯ ಹಾಗೂ ಸಾಂಸ್ಕೃತಿಕ ಸಂಘ, ಹಿರಿಯೂರಿನ ರೊಟರಿ ಕ್ಲಬ್, ಬೆಲಗೂರಿನ ಫ್ರೆಂಡ್ ರಿಕ್ವಜಿಷನ್ ಕ್ಲಬ್, ಶ್ರೀ ರಾಂಪುರದ ಗೋಪಾಲಕೃಷ್ಣ ವಾಚನಾಲಯ, ಹೊಸದುರ್ಗ ಟೌನ್ ಕ್ಲಬ್, ಅಶೋಕ ರೀಡಿಂಗ್ ರೂಂ ಕ್ಲಬ್, ಕರ್ನಾಟಕ ಫ್ಯಾಮಿಲಿಯನ್ ಅಸೋಷಿಯೇಷನ್ಸ್ ಲೆಜೆಂಡ್ಸ್ ಕಲ್ಟರ್ ಅಸೋಷಿಯೇಷನ್ ಮನೋರಂಜನ ಕೇಂದ್ರ ಇವುಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Chitradurga ಜಿಲ್ಲೆಯಲ್ಲಿ ಇಂಟರ್ ನ್ಯಾಷನಲ್ ಏರ್‌ಪೋರ್ಟ್ ಮಾಡಿ: ಶಾಸಕ ಟಿ.ರಘುಮೂರ್ತಿ ಆಗ್ರಹ
ಬಡಾವಣೆ ಠಾಣಾ ವ್ಯಾಪ್ತಿಯ ಚಳ್ಳಕೆರೆ ಸರ್ಕಲ್ ಬಳಿಯ ಪವರ್ ರಿಕ್ರಿಯೇಷನ್ ಕ್ಲಬ್‌ನಲ್ಲಿ 6 ಮಂದಿ, ಹೊಳಲ್ಕೆರೆ ಟೌನ್ ಕ್ಲಬ್ (Chitraduga clubs) ನಲ್ಲಿ 7 ಮಂದಿ, ನಾಯಕನಹಟ್ಟಿ ಅಸೋಸಿಯೇಷನ್ ಕ್ಲಬ್‌ನಲ್ಲಿ 15 ಜನರು ಅಕ್ರಮ ಜೂಜಾಟ ಆಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
