Chitradurga news|nammajana.com|28-03-2025
ನಮ್ಮಜನ.ಕಾಂ, ಹೊಸದುರ್ಗ: ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 173 ರ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, (Hosadurga) ಅಂಬೇಡ್ಕರ್ ಸರ್ಕಲ್ ನಲ್ಲಿ ಹೊಸದಾಗಿ ದುರಸ್ತಿಗೊಂಡಿರುವ ರಸ್ತೆ ಮತ್ತು ವಿಭಜಕಗಳು ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದು, ಸಾರ್ವಜನಿಕರಿಗೆ ನಿತ್ಯವೂ ಪರದಾಡುವಂತಹ ಸ್ಥಿತಿ ತಂದೊಡ್ಡಿವೆ.
ಯಾವ್ಯಾವ ದಿಕ್ಕಿನಿಂದ ವಾಹನ ಸವಾರಿ
ಇಲ್ಲಿ ಯಾವ ವಾಹನ ಯಾವ ದಿಕ್ಕಿನಿಂದ ಬರುತ್ತದೆ ಎನ್ನುವ ಗೊಂದಲ ಸವಾರರನ್ನು ಒಂದು ಕ್ಷಣ ಆವರಿಸಿ ಬಿಡುತ್ತದೆ. ನಿಜಕ್ಕೂ ಇಲ್ಲಿ ನಿರ್ಮಿಸಿರುವ ರಸ್ತೆ ವಿಭಜಕಗಳು (Hosadurga) ಯಮಧೂತರಂತೆ ವಾಹನ ಸವಾರರ ಬಲಿಗಾಗಿ ಕಾಯುತ್ತಿವೆ.

ಹೊಳಲ್ಕೆರೆ ಮಾರ್ಗವಾಗಿ ಬರುವ ವಾಹನಗಳು, ತರೀಕೆರೆ ಮುಖ್ಯರಸ್ತೆಗೆ ತಿರುವು ಪಡೆಯುವಾಗ, ತರೀಕೆರೆ ಮಾರ್ಗವಾಗಿ ಹೊಸದುರ್ಗ ಪಟ್ಟಣಕ್ಕೆ ಬರುವ ವಾಹನಗಳು ಅಡ್ಡ ಬಂದರಂತೂ ಪರಿಸ್ಥಿತಿ ಘನಘೋರ. ಇಂತಹ ಸ್ಥಿತಿಯಲ್ಲಿ ವಾಹನ ಸವಾರರು ಮತ್ತು ಪಾದಾಚಾರಿಗಳು ಜೀವ ಬಿಗಿಹಿಡಿದೆ ರಸ್ತೆ ದಾಟುವಂತಹ ಸ್ಥಿತಿ ನಿರ್ಮಾಣವಾಗಿದೆ.
ಇದೇ ರೀತಿ ಹೊಸದುರ್ಗ ಪಟ್ಟಣದ ಮುಖ್ಯರಸ್ತೆಯಿಂದ ಹೊಳಲ್ಕೆರೆ ಮಾರ್ಗವಾಗಿ ಬರುವ ಸವಾರರು ಸರ್ಕಲ್ ನಲ್ಲಿ ಬಲಕ್ಕೆ ತಿರುವು ಪಡೆಯಲು, ತರೀಕೆರೆ ಮಾರ್ಗವಾಗಿ (Hosadurga) ಹೊಸದುರ್ಗ ಪಟ್ಟಣಕ್ಕೆ ಬರುವ ವಾಹನಗಳ ಎದುರು ನೋಡಿಯೇ ಕ್ಷಣ ಕಾಲ ನಿಲ್ಲಿಸಿ, ಮುಂದೆ ಹೋಗುವ ಸ್ಥಿತಿ ಬೇರೆಯದ್ದಲ್ಲ. ರಸ್ತೆ ದಾಟುವ ಸ್ಥಳಗಳಲ್ಲಿ ರೋಡ್ ಬ್ರೇಕರ್ ಇಲ್ಲ, ಮಾರ್ಗಸೂಚಿಸುವ ಸೂಚನೆ ನಾಮಫಲಕಗಳಂತೂ ಇಲ್ಲವೇ ಇಲ್ಲ. ಇದರಿಂದಾಗಿ, ಪಾದಾಚಾರಿಗಳು ಮತ್ತು ವಾಹನ ಸವಾರರು ಪರದಾಡುವಂತಾಗಿದೆ.
ರಾತ್ರಿ ಸಮಯದಲ್ಲಿ ಹೊಳಲ್ಕೆರೆ ಮಾರ್ಗವಾಗಿ ಹೊಸದುರ್ಗ ಪಟ್ಟಣದೊಳಗೆ ಸಂಚಾರಿಸುವಾಗ ಸರ್ಕಲ್ ನಲ್ಲಿ ತ್ರಿಕೋನಾಕಾರದಲ್ಲಿ ವಿನ್ಯಾಸಗೊಂಡಿರುವ ಡಿವೈಡರ್ ಕೂಡ ಹೆಚ್ಚಿನ ಅಪಾಯ ತಂದೊಡ್ಡಲಿದ್ದು, ಹೊಸ ವಾಹನಸವಾರರಿಗಂತೂ ನಿಜಕ್ಕೂ ಹೆಚ್ಚಿನ ಅಪಘಾತ ತಂದೊಡ್ದುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿದೆ.
ಮೂರು ಮುಖ್ಯರಸ್ತೆ ಹಾಗೂ ಎರಡು ಉಪರಸ್ತೆಗಳು ಕೂಡುವ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ವಾಹನ ಸಂಚಾರ ತೊಡಕಾಗಿ ಪರಿಣಮಿಸಿದೆ. ಈಗಾಗಲೇ, ಬಲ್ಲಾಳಸಮುದ್ರ ಗ್ರಾಮದ ಯುವಕನೋರ್ವ ರಸ್ತೆದಾಟುವಾಗ ಅವೈಜ್ಞಾನಿಕ ಡಿವೈಡರ್ ನಿಂದಾಗಿ ಅಪಘಾತಕ್ಕೀಡಾಗಿ ಒಂದು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿರುವ ಘಟನೆ ನಡೆದಿದೆ.
ಈಗಲಾದರೂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಸ್ಥಳೀಯ ಆಡಳಿತದ ಅಧಿಕಾರಿಗಳು ಎಚ್ಚೆತ್ತುಕೊಂಡು ಸುಗಮ ವಾಹನ ಸಂಚಾರ ಹಾಗೂ ವಾಹನ ಸವಾರರ ಹಿತದೃಷ್ಟಿಯಿಂದ, ಈಗಿರುವ ರಸ್ತೆ ಮತ್ತು ಡಿವೈಡರ್ ಗಳನ್ನು ತೆರವುಗೊಳಿಸಿ, ಪುನಃ ವ್ಯವಸ್ಥಿತವಾಗಿ ಹೊಸದಾಗಿ ರಸ್ತೆ ಮತ್ತು ವಿಭಜಕಗಳನ್ನು ನಿರ್ಮಿಸಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.
ಸಾರ್ವಜನಿಕರ ಮಾತು
ಹೊಸದುರ್ಗ ಪಟ್ಟಣದ ಹೃದಯ ಭಾಗವೆಂದೇ ಅಂಬೇಡ್ಕರ್ ವೃತ್ತ ಹೆಸರುವಾಸಿಯಾಗಿದೆ. ಇಂತಹ ಸ್ಥಳದಲ್ಲಿಯೇ ಕಿರಿದಾದ ರಸ್ತೆಗಳು, ಅವೈಜ್ಞಾನಿಕ ರಸ್ತೆ ವಿಭಜಕಗಳು ತಲೆಯೆತ್ತಿದ್ದು, ರಸ್ತೆದಾಟಲು ಹಿರಿಯ ನಾಗರಿಕರು, ವಿದ್ಯಾರ್ಥಿಗಳು, (Hosadurga) ದ್ವಿಚಕ್ರವಾಹನ ಸವಾರರು ಪರದಾಟ ನಡೆಸುವಂತಹ ಸ್ಥಿತಿ ತಲೆದೂರಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತೊಮ್ಮೆ ಪರಿಶೀಲಿಸಿ, ಈಗ ನಿರ್ಮಾಣವಾಗಿರುವ ಡಿವೈಡರ್ಗಳನ್ನು ತೆರವುಗೊಳಿಸಿ, ಮತ್ತೊಮ್ಮೆ ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಿ, ಆಗಬೇಕಿರುವ ಅಪಘಾತಗಳನ್ನು ತಪ್ಪಿಸಬೇಕಾಗಿದೆ.
ಅರುಣ್ ರಾಮಗಿರಿ
ಹೊಸದುರ್ಗ ಪಟ್ಟಣದ ನಿವಾಸಿ.
————————-
ಇದನ್ನೂ ಓದಿ: ಅಡಕೆ ಧಾರಣೆ | 28 ಮಾರ್ಚ್ 2025 | ಚನ್ನಗಿರಿ ಮಾರುಕಟ್ಟೆಯಲ್ಲಿ 53 ಸಾವಿರಕ್ಕೆ ಏರಿದ ಅಡಿಕೆ ರೇಟ್ | Adike rate Hike
ಸಾರ್ವಜನಿಕರ ಮಾತು
ಹೊಸದುರ್ಗ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ದುರಸ್ತಿಗೊಂಡಿರುವ ರಸ್ತೆ ಮತ್ತು ವಿಭಜಕಗಳು ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದ್ದು, ವಾಹನ ಸವಾರರಿಗೆ ಮತ್ತು ಪಾದಾಚಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಯಾವ ದಿಕ್ಕಿನಿಂದ, ಯಾವ ವಾಹನಗಳು ಬರುತ್ತವೆ ಎಂಬುದೇ ತಿಳಿಯುವುದಿಲ್ಲ. ಅಪಘಾತಗಳು ನಡೆದು ಜೀವಹಾನಿ ಆಗುವ ಮುನ್ನವೇ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು, ವ್ಯವಸ್ಥಿವಾಗಿ ರಸ್ತೆ ಮತ್ತು ತಿರುವುಗಳನ್ನು ಮಾಡಲಿ.
ಕೆ.ಲೋಹಿತ್
ಉಪಾಧ್ಯಕ್ಷರು, ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಹೊಸದುರ್ಗ ತಾಲೂಕು ಘಟಕ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252